Site icon Vistara News

Vande Bharat: ಬೆಂಗಳೂರು-ಹೈದರಾಬಾದ್‌ ಸೇರಿ 9 ವಂದೇ ಭಾರತ್‌ ರೈಲುಗಳಿಗೆ ಮೋದಿ ಚಾಲನೆ; ಇಲ್ಲಿದೆ ಪಟ್ಟಿ

Vande Bharat Express

PM Narendra Modi Flags Off 9 New Vande Bharat Express Trains In 11 States, Here is The List

ನವದೆಹಲಿ: ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶ ಸೇರಿ 11 ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ 9 ಅತ್ಯಾಧುನಿಕ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ (Vande Bharat) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಸೆಪ್ಟೆಂಬರ್‌ 24) ಚಾಲನೆ ನೀಡಿದ್ದಾರೆ. ಬೆಂಗಳೂರು-ಹೈದರಾಬಾದ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕರ್ನಾಟಕದ ಮೂರನೇ ವಂದೇ ಭಾರತ್‌ ರೈಲು ಎನಿಸಿದೆ. ಇದೇ ವೇಳೆ ಮಾತನಾಡಿದ ಮೋದಿ, “ವಂದೇ ಭಾರತ್‌ ರೈಲುಗಳು ದೇಶದಲ್ಲಿ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಿವೆ” ಎಂದರು.

“ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ 25 ವಂದೇ ಭಾರತ್‌ ರೈಲುಗಳು ಓಡಾಡುತ್ತಿವೆ. ಈಗ ಮತ್ತೆ 9 ವಂದೇ ಭಾರತ್‌ ರೈಲುಗಳು ಸೇರಿಕೊಂಡಿವೆ. ಇದರೊಂದಿಗೆ ಒಟ್ಟು ರೈಲುಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಕೆಲವೇ ದಿನಗಳಲ್ಲಿ ದೇಶದ ಪ್ರತಿಯೊಂದು ಕಡೆಗೂ ವಂದೇ ಭಾರತ್‌ ರೈಲುಗಳು ಸಂಚರಿಸುವ ವಿಶ್ವಾಸವಿದೆ. ಇವುಗಳು ಬೇರೊಂದು ನಗರಗಳಲ್ಲಿ ಕೆಲವೇ ಗಂಟೆಗಳ ಕೆಲಸ ಇರುವವರು, ಕ್ಷಿಪ್ರವಾಗಿ ನಗರಗಳಿಗೆ ತೆರಳುವವರಿಗೆ ಭಾರಿ ಅನುಕೂಲವಾಗಲಿದೆ. ವ್ಯಾಪಾರಿಗಳು, ಉದ್ಯಮಿಗಳು ಸೇರಿ ವಿವಿಧ ಕ್ಷೇತ್ರಗಳ ಜನರಿಗೆ ಅನುಕೂಲವಾಗಲಿದೆ” ಎಂದು ಮೋದಿ ಹೇಳಿದರು.

ಬೆಂಗಳೂರಿನಿಂದ ಮೊದಲ ಪಯಣ ಸೆಪ್ಟೆಂಬರ್‌ 25ಕ್ಕೆ

ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ವಂದೇ ಭಾರತ್‌ ರೈಲಿನ ಮೊದಲ ಪಯಣ ಸೆಪ್ಟೆಂಬರ್‌ 25ರಂದು ಮಧ್ಯಾಹ್ನ 2.45ಕ್ಕೆ ಆರಂಭವಾಗಲಿದೆ. ಇದು ಕರ್ನಾಟಕದ ಮೂರನೇ ವಂದೇ ಭಾರತ್‌ ರೈಲು ಆಗಿರಲಿದೆ. ಈಗಾಗಲೇ ಚೆನ್ನೈ-ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಧಾರವಾಡ ರೈಲುಗಳು ಜನಪ್ರಿಯತೆ ಪಡೆದಿವೆ.

ವಂದೇ ಭಾರತ್‌ ರೈಲು ವಾರದಲ್ಲಿ ಆರು ದಿನ, ಬುಧವಾರ ರಜೆ

  1. ಬೆಂಗಳೂರು-ಹೈದರಾಬಾದ್‌ ರೈಲು ಕ್ರಮಿಸಲಿರುವ ದೂರ : 609.81 ಕಿ.ಮೀ. ಅದರಲ್ಲಿ 355.03 ಕಿ.ಮೀ. ಡಬಲ್‌ ಲೈನ್‌ ಇದ್ದರೆ, 254.78 ಕಿ.ಮೀ. ಸಿಂಗಲ್‌ ಲೈನ್‌ ಇರುತ್ತದೆ.
  2. ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣದ ಅವಧಿ 8.30 ಗಂಟೆ. ಅಂದರೆ ಬೆಂಗಳೂರಿನಿಂದ ಸಂಜೆ 2.45ಕ್ಕೆ ಹೊರಡುವ ರೈಲು ರಾತ್ರಿ 11.15ಕ್ಕೆ ಹೈದರಾಬಾದ್‌ ತಲುಪಲಿದೆ.
  3. ಈ ರೈಲಿನಲ್ಲಿ 14 ಚಯರ್‌ ಕಾರ್‌ಗಳು ಮತ್ತು 2 ಎಕ್ಸಿಕ್ಯುಟಿವ್‌ ಕ್ಲಾಸ್‌ ಬೋಗಿಗಳು ಇರುತ್ತವೆ.
  4. ವಾರದ ಆರು ದಿನಗಳಲ್ಲಿ ಈ ರೈಲಿನ ಕಾರ್ಯಾಚರಣೆ ಇರುತ್ತದೆ. ಬುಧವಾರ ರೈಲು ಇರುವುದಿಲ್ಲ.

ಬೆಂಗಳೂರು-ಹೈದರಾಬಾದ್‌ ರೈಲು ಸಮಯ

1. ಯಶವಂತಪುರ ರೈಲು ನಿಲ್ದಾಣ: ಮಧ್ಯಾಹ್ನ 2.45
2. ಧರ್ಮಾವರಂ ಸ್ಟೇಷನ್‌: ಸಂಜೆ 5.20
3. ಅನಂತಪುರ ನಿಲ್ದಾಣ: ಸಂಜೆ 5.41
4. ಕರ್ನೂಲು ನಗರ ನಿಲ್ದಾಣ: ಸಂಜೆ 7.51
5. ಮೆಹಬೂಬ್‌ ನಗರ: ರಾತ್ರಿ 9.40
6. ಕಾಚೆಗುಡ ಸ್ಟೇಷನ್‌: ರಾತ್ರಿ 11.15

ಇದನ್ನೂ ಓದಿ: Vande Bharat: ಶೀಘ್ರದಲ್ಲೇ ಬರಲಿವೆ ವಂದೇ ಭಾರತ್‌ ಸ್ಲೀಪರ್‌, ಮೆಟ್ರೋ ರೈಲು; ಇವುಗಳ ವೈಶಿಷ್ಟ್ಯ ಏನು?

ಇಲ್ಲಿದೆ 9 ಹೊಸ ರೈಲುಗಳ ಮಾರ್ಗ ಹಾಗೂ ರಾಜ್ಯಗಳು

Exit mobile version