Site icon Vistara News

PM Narendra Modi: ಅಂದೂ ಅದೇ ಜಾಕೆಟ್ ಧರಿಸಿದ್ದರು ಮೋದಿ!‌ ಇದೆಂಥಾ ಕಾಕತಾಳೀಯ!

pm narendra modi in isro

ಬೆಂಗಳೂರು: ಇಂದು ಮುಂಜಾನೆ ಚಂದ್ರಯಾನ 3 (Chandrayaan 3) ಯಶಸ್ಸಿಗೆ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿನ ಇಸ್ರೋ (ISRO) ಕಮಾಂಡ್‌ ಸೆಂಟರ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕುರ್ತಾ ಹಾಗೂ ಜಾಕೆಟ್‌ ಕೆಲವರ ಗಮನವನ್ನಾದರೂ ಸೆಳೆದಿರಬಹುದು. ಚಂದ್ರಯಾನ-2 (Chandrayaan 2) ವೀಕ್ಷಣೆಗೆ ಬೆಂಗಳೂರಿನ ಇಸ್ರೋಗೆ ಬಂದಿದ್ದಾಗಲೂ ಮೋದಿ ಇದೇ ಕುರ್ತಾ- ಪೈಜಾಮ ಧರಿಸಿದ್ದರು!

ಚಂದ್ರಯಾನ 2ರ ಸಂದರ್ಭದಲ್ಲಿ ಇಸ್ರೋ ಭೇಟಿ ನೀಡಿದ್ದ ಮೋದಿ

ಇಂದು ಮೋದಿ ಬಿಳಿ ಕುರ್ತಾ ಹಾಗೂ ಅದರ ಮೇಲಿನಿಂದ ಕಪ್ಪು ಬಣ್ಣದ, ಬಿಳಿ- ಕಪ್ಪು ಪಟ್ಟಿಗಳಿರುವ ಜಾಕೆಟ್‌ ಧರಿಸಿದ್ದರು. ವಿಮಾನದಿಂದ ಇಳಿಯುವಾಗಲೂ ಇದೇ ದಿರಿಸಿನಲ್ಲಿದ್ದ ಮೋದಿ, ಇದೇ ದಿರಿಸಿನಲ್ಲೇ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾಲ್ಕು ವರ್ಷಗಳ ಹಿಂದೆ ಚಂದ್ರಯಾನ- 2 ಸಾಫ್ಟ್‌ ಲ್ಯಾಂಡಿಂಗ್‌ (Soft landing) ವೀಕ್ಷಿಸಲು ಇಸ್ರೋಗೆ ಬಂದಿದ್ದಾಗಲೂ ಮೋದಿ ಇದೇ ಶೇಡ್‌ನ ದಿರಿಸನ್ನೇ ಧರಿಸಿದ್ದರು.

ಚಂದ್ರಯಾನ 3ರ ಯಶಸ್ಸಿಗೆ ಅಭಿನಂದನಾ ಭಾಷಣದ ವೇಳೆ ಮೋದಿ

ಆ ಬಾರಿ ಚಂದ್ರಯಾನ ಸಾಫ್ಟ್‌ ಲ್ಯಾಂಡಿಂಗ್‌ ವಿಫಲವಾಗಿತ್ತು. ಇಸ್ರೋ ವಿಜ್ಞಾನಿಗಳು ಬೇಸರಗೊಂಡಿದ್ದರು. ನಂತರ ಹೊರಡುವ ವೇಳೆಗೆ ಆಗಿನ ಇಸ್ರೋ ಮುಖ್ಯಸ್ಥರಾಗಿದ್ದ ಕೆ. ಶಿವನ್‌ ಅವರನ್ನು ಮೋದಿ ತಬ್ಬಿ ಸಂತೈಸಿ ಧೈರ್ಯ ತುಂಬಿ ಬೀಳ್ಕೊಟ್ಟಿದ್ದರು. ಈ ಬಾರಿ ಚಂದ್ರಯಾನ 3 ಸಫಲಗೊಂಡಿದೆ. ದೇಶದ ಕೀರ್ತಿಯನ್ನು ಎತ್ತರಿಸಿದೆ. ಈ ಸಂದರ್ಭದಲ್ಲಿ ಮತ್ತೆ ಅದೇ ಉಡುಪನ್ನು ಧರಿಸಿ ಮೋದಿ ಅವರು ಬಂದಿರುವುದು ಕಾಕತಾಳೀಯವೇ? ಅಥವಾ ಈ ಮೂಲಕ ಯಾವುದಾದರೂ ಸಂದೇಶ ತಲುಪಿಸಲು ಮೋದಿ ಪ್ರಯತ್ನಿಸಿದ್ದಾರೆಯೇ ಎಂದು ಜನ ಕುತೂಹಲಗೊಂಡಿದ್ದಾರೆ.

ಇದನ್ನೂ ಓದಿ: PM Narendra Modi: ʼನಿಮಗೆ ನನ್ನ ಸೆಲ್ಯೂಟ್…ʼ ಭಾವುಕರಾದ ಪ್ರಧಾನಿ ಮೋದಿ!

Exit mobile version