Site icon Vistara News

POCSO Case | ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 43 ವರ್ಷ ಶಿಕ್ಷೆ, ಸಂತ್ರಸ್ತೆಗೆ ₹7 ಲಕ್ಷ ಪರಿಹಾರ ನೀಡಲು ಆದೇಶ

Court Verdict

ಮೈಸೂರು: ಟಿ. ನರಸೀಪುರ ರಸ್ತೆಯ ಫಾರಂ ಹೌಸ್‌ನಲ್ಲಿ ಕುದುರೆಗಳಿಗೆ ಲಾಳ ಕಟ್ಟುವ ಕೆಲಸ ಮಾಡುತ್ತಿದ್ದ ನಾಜಿಮ್‌ ಎಂಬಾತನಿಗೆ ಮೈಸೂರು ಪೋಕ್ಸೋ (POCSO Case) ವಿಶೇಷ ನ್ಯಾಯಾಲಯವು 43 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದ್ದಲ್ಲದೆ, ಸಂತ್ರಸ್ತ ಬಾಲಕಿಯು 7 ಲಕ್ಷ ರೂಪಾಯಿ ಪರಿಹಾರಕ್ಕೆ ಅರ್ಹ ಎಂದು ಆದೇಶಿಸಿದೆ.

ನಾಜಿಮ್‌ ೨೦೨೧ರಲ್ಲಿ ೧೦ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಆಕೆಗೆ ಅಶ್ಲೀಲ ವಿಡಿಯೊವನ್ನು ತೋರಿಸಿ ಅತ್ಯಾಚಾರ ನಡೆಸಿ, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಇದರಿಂದ ತೀವ್ರ ಹೆದರಿದ್ದಳು. ಆದರೆ, ಈತ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈತನ ಉಪಟಳ ಸಹಿಸಲಾಗದೆ ಬಾಲಕಿಯು ಪೋಷಕರಿಗೆ ವಿಷಯ ತಿಳಿಸಿದ್ದಳು. ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ನಾಜಿಮ್‌ನನ್ನು ಬಂಧಿಸಲಾಗಿತ್ತು.

ಅಪರಾಧಿ ನಾಜಿಮ್‌ ಬಿಹಾರ ಮೂಲದವನಾಗಿದ್ದಾನೆ. ವಿಚಾರಣೆ ನಡೆಸಿದ ನ್ಯಾಯಾಲಯವು, ವಾದ-ಪ್ರತಿವಾದವನ್ನು ಆಲಿಸಿದೆ. ನಾಜಿಮ್‌ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್​ನ ನ್ಯಾಯಾಧೀಶೆ ಶೈಮಾ ಕಮರೋಜ್ ಅವರು, ಅಪರಾಧಿಗೆ ೪೩ ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ | Murugha Seer | ಮುರುಘಾ ಶರಣರಿಂದ ಹತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಒಡನಾಡಿ ಪರಶುರಾಮ್‌ ಆರೋಪ

Exit mobile version