Site icon Vistara News

Pocso Case : ಮಗಳ ಮೇಲೆಯೇ ಅತ್ಯಾಚಾರ ಮಾಡಿದ್ದ ಪಾಪಿ ತಂದೆಗೆ 20 ವರ್ಷ ಜೈಲು ಶಿಕ್ಷೆ

Sexual Harassment

ಬೆಂಗಳೂರು: ತನ್ನ ಮಗಳೂ ಎಂಬ ಮಮಕಾರವಿಲ್ಲದೆ ಕಾಮದ ಕಣ್ಣಿಂದ ನೋಡಿದ ಧೂರ್ತನೊಬ್ಬನಿಗೆ 20 ವರ್ಷ ಜೈಲು ಶಿಕ್ಷೆ (20 years of sentence) ವಿಧಿಸಲಾಗಿದೆ. ಆತ ಆ ಪುಟ್ಟ ಬಾಲಕಿಯ ಮೇಲೆ (POCSO Case) ಪೈಶಾಚಿಕವಾಗಿ ಅತ್ಯಾಚಾರ (Sexual harassment on daughter) ಮಾಡಿದ್ದು ಮಾತ್ರವಲ್ಲ, ಆಕೆ ಗರ್ಭ ಧರಿಸುವಂತೆ ಮಾಡಿದ್ದ.

ಈ ಘಟನೆ ನಡೆದಿರುವುದು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ. 2022ರಲ್ಲಿ. ಪತ್ನಿ ಮನೆಯಲ್ಲಿಲ್ಲದ ಸಮಯ ನೋಡಿ ಅಮಾಯಕ ಮಗಳನ್ನು ಆ ಧೂರ್ತ ತಂದೆ ಲೈಂಗಿಕವಾಗಿ ಹಿಂಸಿಸುತ್ತಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವ, ಅವರಿಗೆ ಹಿಂಸೆ ಕೊಡುವ ಬೆದರಿಕೆಗಳನ್ನು ಒಡ್ಡಿ ಆಕೆಯನ್ನು ತನಗೆ ಬೇಕಾದ ಹಾಗೆ ಬಳಸಿಕೊಂಡಿದ್ದ ಎನ್ನಲಾಗಿದೆ. ಹೆತ್ತ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾದ ಆ ಬಾಲಕಿ ಗರ್ಭ ಧರಿಸಿದ್ದಳು.

ಆಗ ಈ ವಿಚಾರ ಹೊರಜಗತ್ತಿಗೆ ತಿಳಿದಿತ್ತು. ಬಳಿಕ ಸಂಬಂಧಿಕರು ಬಾಲಕಿಯನ್ನು ರಕ್ಷಿಸಿದರು. ವಿಷಯ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಘಟನೆ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್‌ ಬಿ.ಎನ್ ಲೋಹಿತ್ ತನಿಖೆ ನಡೆಸಿ ಐದನೇ ಅಧಿಕ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದರು. ನ್ಯಾಯಾಧೀಶರಾದ ಶ್ರೀಮತಿ ಎನ್ ನರಸಮ್ಮ ಅವರು ಇದೀಗ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ಪ್ರಕಟಿಸಿದ್ದಾರೆ.

ನ್ಯಾಯಾಧೀಶರು ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದರು. ನೊಂದ ಬಾಲಕಿಗೆ ಜಿಲ್ಲಾ ಮತ್ತು ಕಾನೂನು ಪ್ರಾಧಿಕಾರದಿಂದ ಏಳು ಲಕ್ಷ ಪರಿಹಾರ ನೀಡುವಂತೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: Wife kills husband : ತಾರಕಕ್ಕೇರಿದ ಜಗಳ: ಮಗನ ಜತೆ ಸೇರಿ ಗಂಡನನ್ನೇ ಕೊಂದ ಹೆಂಡತಿ

ಮಗುವಿನ ಮೇಲೆ ದೌರ್ಜನ್ಯ ನಡೆಸಿ ಕೊಂದ ಹಂತಕನಿಗೆ ಜೀವಾವಧಿ ಶಿಕ್ಷೆ!

ಬೆಂಗಳೂರು: 3 ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ (physical abuse) ಎಸಗಿ ಕೊಲೆ ಮಾಡಿದ ದುಷ್ಟನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2018ರ ಫೆಬ್ರವರಿ 26ರಂದು ದುಷ್ಕೃತ್ಯ ನಡೆದಿತ್ತು.

ರಾಕ್ಷಸನಂತೆ ಮಗುವಿನ ಮೇಲೆ ಬಿದ್ದವನು ತನ್ನ ಕಾಮದಾಸೆಯನ್ನು ತೀರಿಸಿಕೊಂಡಿದ್ದ. ಲೈಂಗಿಕ ದೌರ್ಜನ್ಯ ಎಸಗಿದ ನಂತರ ದೊಡ್ಡ ಕಲ್ಲು ಎತ್ತಿ ಹಾಕಿ ಎಳೆಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಹಂತಕ.

ಈ ಸಂಬಂಧ ಕೊತ್ತನೂರು ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. 5 ವರ್ಷಗಳ ಕಾಲ ವಿಚಾರಣೆ ನಡೆಸಿ ಎಫ್‌ಟಿಎಸ್‌ಸಿ 4 ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

Exit mobile version