ಬೆಂಗಳೂರು: ಜೆಟ್‌ಲ್ಯಾಗ್ ಪಬ್ ಲೇಟ್ ನೈಟ್ ಪಾರ್ಟಿ ಕೇಸ್ ಬೆನ್ನಲ್ಲೇ ಮತ್ತೊಂದು ಕೇಸ್‌ನಲ್ಲಿ ನಟ ದರ್ಶನ್ ಅವರಿಗೆ ರಿಲೀಫ್ ಸಿಕ್ಕಿದೆ. ಮಹಿಳೆಗೆ ದರ್ಶನ್ ಅವರ ಮನೆಯ ನಾಯಿ ಕಚ್ಚಿದ ಪ್ರಕರಣದಲ್ಲಿ (Actor Darshan) ಮೂರು ತಿಂಗಳ ಅವಧಿಯಲ್ಲೇ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ನಟ ದರ್ಶನ್ ಹೆಸರು ಕೈಬಿಟ್ಟಿದ್ದು, ಘಟನೆಗೂ ದರ್ಶನ್‌ಗೂ ಯಾವುದೇ ಸಂಬಂಧ ಇಲ್ಲವೆಂದು ಉಲ್ಲೇಖಿಸಲಾಗಿದೆ.
ಆರ್‌ಆರ್‌ನಗರ ಪೊಲೀಸರಿಂದ ಸಿಟಿ ಸಿವಿಲ್ ಕೋರ್ಟ್‌ಗೆ 150ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಐದಕ್ಕೂ ಹೆಚ್ಚು ಮಂದಿಯನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದ್ದು, ನಟ ದರ್ಶನ್‌ರನ್ನು ಕೂಡ ಸಾಕ್ಷಿಯಾಗಿ ದಾಖಲಿಸಿ, ಪೊಲೀಸರು ಹೇಳಿಕೆ ಪಡೆದಿದ್ದಾರೆ. ಹೀಗಾಗಿ ಚಾರ್ಜ್‌ಶೀಟ್‌ನಲ್ಲಿ ನಟ ದರ್ಶನ್ ಹೆಸರು ಕೈಬಿಟ್ಟಿದ್ದು, ಘಟನೆಗೂ ದರ್ಶನ್‌ಗೂ ಯಾವುದೇ ಸಂಬಂಧ ಇಲ್ಲವೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ.
ಅಕ್ಟೋಬರ್ 28ರಂದು ದರ್ಶನ್ ಅವರ ಮನೆಯ ಮುಂದೆ ಅಮಿತಾ ಜಿಂದಾಲ್ ಎಂಬುವವರಿಗೆ ನಾಯಿ ಕಚ್ಚಿತ್ತು. ಹೀಗಾಗಿ ಮಹಿಳೆ ದೂರಿನ ಮೇರೆಗೆ ಎಪ್‌ಐಆರ್ ದಾಖಲಾಗಿತ್ತು.. ಕೇರ್ ಟೇಕರ್ ಹೇಮಂತ್ ಹಾಗೂ ನಟ ದರ್ಶನ್ ಆರೋಪಿಗಳಾಗಿ ಮಾಡಿ ಎಪ್‌ಐಆರ್ ದಾಖಲಾಗಿತ್ತು. ಪೊಲೀಸರು ವಿಚಾರಣೆ ಮಾಡಿದಾಗ ಘಟನೆ ವೇಳೆ ದರ್ಶನ್ ಗುಜರಾತ್‌ನಲ್ಲಿರುವುದಾಗಿ ಹೇಳಿಕೆ ದಾಖಲಿಸಲಾಗಿದೆ.
ಇದನ್ನೂ ಓದಿ | Rashmika Mandanna: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೊ ಹರಿಬಿಟ್ಟವನ ಬಂಧನ!
ಸಿನಿಮಾ ಶೂಟಿಂಗ್ ನಿಮಿತ್ತ ಗುಜರಾತ್‌ನಲ್ಲಿ ಇರುವ ಬಗ್ಗೆ ನಟ ದರ್ಶನ್ ಅವರು ಸಾಕ್ಷ್ಯ ನೀಡಿದ್ದರು. ಜೊತೆಗೆ ಕೇರ್ ಟೇಕರ್ ಹೇಮಂತ್ ಕೂಡ ದರ್ಶನ್‌ಗೂ ಕೇಸ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಸದ್ಯ ಕೇರ್ ಟೇಕರ್ ಹೇಮಂತ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಏನಿದು ಪ್ರಕರಣ?
ವೈದ್ಯೆಯೊಬ್ಬರಿಗೆ ನಟ ದರ್ಶನ್ ಮನೆಯ ನಾಯಿಗಳು ಕಚ್ಚಿದ ಹಿನ್ನೆಲೆಯಲ್ಲಿ ದರ್ಶನ್ (Actor Darshan) ಅವರ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಲೀಕ ದರ್ಶನ್ ಹಾಗೂ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೈದ್ಯೆ ಅಮಿತಾ ಎಂಬುವವರು ದೂರು ನೀಡಿದ್ದರು.
ಇದನ್ನೂ ಓದಿ | Rashmika Mandanna: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೊ ಹರಿಬಿಟ್ಟವನ ಬಂಧನ!
ಅ.28ರಂದು ಸ್ಪರ್ಶ ಆಸ್ಪತ್ರೆಗೆ ಪಾರ್ಶ್ವವಾಯು ದಿನದ ಕಾರ್ಯಕ್ರಮಕ್ಕೆ ಬಂದಿದ್ದಾಗ ವೈದ್ಯೆ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಅವುಗಳನ್ನು ಎಳೆದುಕೊಳ್ಳುವಂತೆ ವೈದ್ಯ ಸೂಚಿಸಿದ್ದರೂ ವ್ಯಕ್ತಿ ನಿರ್ಲಕ್ಷ್ಯ ಮಾಡಿದ್ದರಿಂದ ವೈದ್ಯೆ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಆದ್ದರಿಂದ ಅವರು ಪೊಲೀಸರಿಗೆ ದೂರು ಕೊಟ್ಟಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ