Site icon Vistara News

Police encounter : ಯಾದಗಿರಿಯಲ್ಲಿ ಪೊಲೀಸ್‌ ಗನ್‌ ಸೌಂಡ್‌, ಹಲ್ಲೆಗೆ ಮುಂದಾದ ರೌಡಿಗೆ ಗುಂಡು ಹಾರಿಸಿ ಅರೆಸ್ಟ್‌

police encounter

#image_title

ಯಾದಗಿರಿ: ನಗರದಲ್ಲಿ ಬೆಳ್ಳಗೆಯೇ ಪೊಲೀಸ್‌ ರಿವಾಲ್ವರ್‌ ಸದ್ದು ಮಾಡಿದೆ. ಡಕಾಯಿತಿ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಲು ಹೋದಾಗ ಆತ ಹಲ್ಲೆಗೆ ಮುಂದಾಗಿದ್ದ. ಆಗ ಪೊಲೀಸ್‌ ಇನ್ಸ್‌ಪೆಕ್ಟರ್‌ ರಿವಾಲ್ವರ್‌ ಎತ್ತಿ ಕಾಲಿಗೆ ಗುಂಡು ಹಾರಿಸಿ (Police encounter) ಆತನನ್ನು ಬಂಧಿಸಿದ್ದಾರೆ.

ಯಾದಗಿರಿಯ ವರ್ಗನಳ್ಳಿ ಎಂಬಲ್ಲಿ ನಡೆದ ಈ ಘಟನೆಯಲ್ಲಿ ಗುಂಡು ಹಾರಿಸಿ ಹೀರೊ ಆದವರು ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಸುನಿಲ್‌ ಮೂಲಿಮನಿ. ಅವರು 45 ವರ್ಷದ ಮೊಹಮ್ಮದ್ ಶಫಿ ಎಂಬಾತನ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್‌ ಮಾಡಿದ್ದಾರೆ. ಘಟನೆಯಲ್ಲಿ ಸುನಿಲ್‌ ಮೂಲಿಮನಿ ಅವರಿಗೂ ಗಾಯಗಳಾಗಿವೆ.

ಶಫಿ ಮತ್ತು ಇತರ ಕೆಲವರು ಕಳೆದ 15 ದಿನಗಳ ಹಿಂದೆ ರಾಜೀವ್ ಗಾಂಧಿ ನಗರದ ನಂದ ಕಿಶೋರ್ ಜವಾಹರ್ ಅವರ ಮನೆಯಲ್ಲಿ ಡಕಾಯಿತಿ ನಡೆಸಿದ್ದರು. ಶಫಿ ಮನೆಯೊಂದರಲ್ಲಿ ಅಡಗಿರುವ ಮಾಹಿತಿ ಸಿಪಿಐ ಮೂಲಿಮನಿ ಅವರಿಗೆ ತಲುಪಿತ್ತು.

ಡಕಾಯಿತಿ ಆರೋಪಿ ಶಫಿ

ಈ ಹಿನ್ನೆಲೆಯಲ್ಲಿ ಸೊಮವಾರ ಅವರು ಆತನನ್ನು ಬಂಧಿಸಲು ಮನೆಗೆ ತೆರಳಿದ್ದರು. ಈ ವೇಳೆ ಅಲ್ಲಿ ಘರ್ಷಣೆಯೇ ನಡೆದು ಹೋಯಿತು. ಪೊಲೀಸರನ್ನು ಕಂಡೊಡನೆ ಶಫಿ ಚೂರಿ ಹಿಡಿದುಕೊಂಡು ಬಂದು ಮೂಲಿಮನೆಯವರಿಗೆ ದಾಳಿ ಮಾಡಿದ. ಈ ವೇಳೆ ಸಿಪಿಐ ಅವರಿಗೆ ಗಾಯವೂ ಆಯಿತು.

ಅಷ್ಟಕ್ಕೇ ಸುಮ್ಮನಾಗದ ಆರೋಪಿ ತನ್ನಲ್ಲಿದ್ದ ಪಿಸ್ತೂಲನ್ನು ತೆಗೆದು ಪೊಲೀಸರ ಮೇಲೆ ಗುರಿ ಇಟ್ಟ. ಆಗ ತಕ್ಷಣವೇ ಎಚ್ಚೆತ್ತುಕೊಂಡ ಸರ್ಕಲ್‌ ಇನ್ಸ್‌ ಪೆಕ್ಟರ್‌ ಮೂಲಿಮನಿ ಅವರು ತಮ್ಮ ಸರ್ವಿಸ್‌ ರಿವಾಲ್ವರ್‌ ತೆಗೆದು ಆರೋಪಿಯ ಕಾಲಿಗೆ ಗುಂಡು ಹಾರಿಸಿದರು. ಗಾಯಗೊಂಡ ಶಫಿಯನ್ನು ಕೂಡಲೇ ಬಂಧಿಸಲಾಯಿತು. ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ನಡುವೆ, ಚೂರಿ ಇರಿತದಿಂದ ಸಿಪಿಐ ಸುನೀಲ್ ಮೂಲಿಮನಿ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ನೀಡಲಾಗುತ್ತಿದೆ.

ಇದನ್ನೂ ಓದಿ : Road Accident: ಬೆಂಗಳೂರಲ್ಲಿ ಅಜಾಗರೂಕ ಚಾಲನೆಗೆ ಯುವಕ ಬಲಿ; ಚಿಂತಾಮಣಿಯಲ್ಲಿ ಕಾರು ಪಲ್ಟಿ

Exit mobile version