Site icon Vistara News

Police Humanity | ಮೂರ್ಛೆ ಬಿದ್ದಾತನಿಗೆ ಚಿಕಿತ್ಸೆ ಕೊಡಿಸಿ, ಟಿಕೆಟ್‌ ಖರೀದಿಸಿ ಊರಿಗೆ ಕಳಿಸಿದ ಯಶವಂತಪುರ ಸಂಚಾರಿ ಪೊಲೀಸರು

ಬೆಂಗಳೂರು: ಪೊಲೀಸರ ಬಗ್ಗೆ ಕೆಲವರಿಗೆ ಬೇರೆಯದೇ ರೀತಿಯ ಭಾವನೆ ಇರಬಹುದು. ಆದರೆ, ನಮ್ಮ ಸಂಕಷ್ಟದ ಕಾಲದಲ್ಲಿ ಯಾವುದೇ ಹೊತ್ತಲ್ಲಾದರೂ ಸರಿ ನೆರವಿಗೆ ಬರುತ್ತಾರೆ ಎಂಬುದುನ್ನು ಆಗಾಗ ಅವರು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ರಾಜಧಾನಿ ಬೆಂಗಳೂರಿನ ಯಶವಂತಪುರ ಬಳಿ ಪೊಲೀಸರಿಂದ ಇಂಥದ್ದೊಂದು ಮಾನವೀಯ (Police Humanity) ಸ್ಪಂದನೆ ವ್ಯಕ್ತವಾಗಿದೆ.

ಮೂರ್ಛೆ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಜೀವವನ್ನು ಸಂಚಾರಿ ಪೊಲೀಸರು ಉಳಿಸಿದ್ದಾರೆ. ನಗರದ ಯಶವಂತಪುರ ಸಿಗ್ನಲ್‌ ಬಳಿ ವ್ಯಕ್ತಿಯೊಬ್ಬರು ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಮೂರ್ಛೆಯಿಂದ ಕುಸಿದು ಬಿದ್ದಿದ್ದಾರೆ.

ಸಿಗ್ನಲ್‌ ಬಳಿಯೇ ಇದ್ದ ಯಶವಂತಪುರ ಪೊಲೀಸರು ವ್ಯಕ್ತಿಯ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ, ಆ ವ್ಯಕ್ತಿಯು ಬಿದ್ದಿದ್ದ ರಭಸಕ್ಕೆ ಕೈ ಕಾಲುಗಳಿಗೆ ಪೆಟ್ಟಾಗಿದೆ. ಅಲ್ಲದೆ, ರಕ್ತಸ್ರಾವ ಆಗುತ್ತಿತ್ತು. ಇದನ್ನು ಕಂಡ ಸಂಚಾರಿ ಪೊಲೀಸರು ಕೂಡಲೇ ಸಾರ್ವಜನಿಕರ ಸಹಾಯದಿಂದ ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ನಂತರ ಆ್ಯಂಬುಲೆನ್ಸ್ ಕರೆಸಿ ಅಲ್ಲಿಯೇ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಬಳಿಕ ವ್ಯಕ್ತಿ ಚೇತರಿಕೆ ಕಂಡರು ಎಂಬುದನ್ನು ಖಾತರಿಪಡಿಸಿಕೊಂಡು ಅವರ ಊರು, ವಿಳಾಸದ ಮಾಹಿತಿ ಪಡೆದುಕೊಂರು. ನಂತರ ಅವರ ಊರಿಗೆ ತೆರಳುವ ಬಸ್‌ಗೆ ಟಿಕೆಟ್‌ ಖರೀದಿಸಿ ಕೊಟ್ಟು ಕಳಿಸಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ | ಮಾನವೀಯತೆ ಮೆರೆದ ಪೊಲೀಸರು, ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಆಸ್ಪತ್ರೆಗೆ

Exit mobile version