ಬೆಂಗಳೂರು/ವಯನಾಡು: ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿರುವ (Karnataka Kerala Border) ವಯನಾಡು ಜಿಲ್ಲೆಯಲ್ಲಿ ಪೊಲೀಸರು ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ (Firing) ನಡೆದಿದೆ. ವಯನಾಡು ಜಿಲ್ಲೆಯ (Wayanad District) ತಲಪ್ಪುಳ ವ್ಯಾಪ್ತಿಯ ಮನೆಯೊಂದರಲ್ಲಿ ಮಂಗಳವಾರ (ನವೆಂಬರ್ 7) ರಾತ್ರಿ ನಕ್ಸಲರು ಊಟ ಮಾಡುತ್ತಿದ್ದಾಗ ಕೇರಳ ಪೊಲೀಸರು ದಾಳಿ ನಡೆಸಿದ್ದಾರೆ. ಇದೇ ವೇಳೆ ನಕ್ಸಲರು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ತಿರುಗೇಟು ನೀಡಿದ ಪೊಲೀಸರು ಕರ್ನಾಟಕದ ಮೂಲದ ಒಬ್ಬ ಮಹಿಳೆ ಸೇರಿ ಇಬ್ಬರು ನಕ್ಸಲರನ್ನು ಬಂಧಿಸಿದ್ದಾರೆ.
ನಕ್ಸಲರು ಊಟಕ್ಕೆಂದು ಮನೆಯೊಂದಕ್ಕೆ ಬಂದಾಗ ಪೊಲೀಸರು ದಾಳಿ ನಡೆಸಿದ್ದಾರೆ. ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ನಕ್ಸಲರು ಕೂಡ ಗುಂಡಿನ ದಾಳಿ ನಡೆದಿದೆ. ಇದು ಪೊಲೀಸರು ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿಗೆ ಕಾರಣವಾಗಿದೆ. ಆದರೂ, ಮುನ್ನಡೆ ಸಾಧಿಸಿದ ಪೊಲೀಸರು ಶೃಂಗೇರಿ ಮೂಲದ ಶ್ರೀಮತಿ ಅಲಿಯಾಸ್ ಉನ್ನಿಮಾಯ ಹಾಗೂ ತಿರುವೇಂಡಿಗಂನ ಚಂದ್ರು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ನಕ್ಸಲರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು ಪೊಲೀಸ್ ಕ್ಯಾಂಪ್‌ನಲ್ಲಿ ವಿಚಾರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
After a shootout with Maoists in Wayand, the elite commando forces of the Kerala Police arrested two naxals, Chandru and Unnimaya, on Tuesday. However, three others managed to escape. #Kerala #Wayanad #Maoists
— The New Voice (@TheNewVoice_IN) November 8, 2023
ವಯನಾಡು ಸೇರಿ ಹಲವೆಡೆ ನಕ್ಸಲರು ಅಡಗಿರುವ ಕುರಿತು ಕೇರಳ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ತಂಡವು (SOG) ತಂಡವು ಹೆಚ್ಚಿನ ನಿಗಾ ಇರಿಸುತ್ತಿದೆ. ಹಾಗಾಗಿ, ಕರ್ನಾಟಕ-ಕೇರಳ ಗಡಿಯಲ್ಲಿ ಆಗಾಗ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ಬಂಧಿತ ಇಬ್ಬರು ನಕ್ಸಲರು ಕೂಡ ಕರ್ನಾಟಕ ಹಾಗೂ ಕೇರಳದಲ್ಲಿ ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದಾರೆ. ಇಬ್ಬರ ವಿರುದ್ಧವೂ ಹತ್ತಾರು ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಛತ್ತೀಸ್ಗಢ್ನಲ್ಲಿ ಮತ್ತೆ ನಕ್ಸಲರ ಕ್ರೌರ್ಯ; ಬೆಟ್ಟದ ಬುಡದಲ್ಲಿ ಐಇಡಿ ಸ್ಫೋಟ, ಸಿಆರ್ಪಿಎಫ್ನ ಇಬ್ಬರು ಯೋಧರಿಗೆ ಗಾಯ
ಮನೆಯಿಂದ ಓಡಿಹೋದ ಶ್ರೀಮತಿಯು 2007ರಲ್ಲಿ ನಕ್ಸಲರ ತಂಡವನ್ನು ಸೇರಿದ್ದಾಳೆ. ಈಕೆಯ ವಿರುದ್ಧ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಲೋಕಸಭೆ ಚುನಾವಣೆ ಸಂದರ್ಭ ಸೇರಿ ಹಲವು ಬಾರಿ ನಡೆದ ಮಾವೋವಾದಿಗಳ ದಾಳಿಗಳಲ್ಲಿ ಈಕೆ ಭಾಗಿಯಾಗಿದ್ದಳು ಎಂದು ತಿಳಿದುಬಂದಿದೆ. ಕಳೆದ ತಿಂಗಳು ಕೂಡ ಹಲವು ನಕ್ಸಲರು ವಯನಾಡು ಜಿಲ್ಲೆಯಲ್ಲಿರುವ ರೆಸಾರ್ಟ್ ಒಂದಕ್ಕೆ ನುಗ್ಗಿ, ಅಲ್ಲಿನ ಸಿಬ್ಬಂದಿಯ ಮೊಬೈಲ್ ಕಸಿದುಕೊಂಡು ಕೆಲ ಪತ್ರಕರ್ತರಿಗೆ ಬೆದರಿಕೆಯೊಡ್ಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ