ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ (Transgender) ಬಗ್ಗೆ ಸಮಾಜ ಕಾಳಜಿಯನ್ನು ವಹಿಸಬೇಕು, ಮಾನವೀಯವಾಗಿ ಕಾಣಬೇಕು ಎಂಬ ವಾದಗಳು ಹೆಚ್ಚಾಗುತ್ತಿರುವ ನಡುವೆಯೇ ಪೊಲೀಸ್ ಅಧಿಕಾರಿಯೊಬ್ಬರು ಮಂಗಳೂರಿನಲ್ಲಿ ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವ ಆರೋಪ ಕೇಳಿಬಂದಿದೆ.
ಪೊಲೀಸ್ ಅಧಿಕಾರಿಯೊಬ್ಬರು ತನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದರು ಎಂದು ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ , ಅರಿವು ಕಾರ್ಯಾಗಾರದ ವೇಳೆ ಮಂಗಳಮುಖಿ ನಿಖಿಲಾ ಅವರು ಈ ಆರೋಪ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಾಧೀಶರೊಬ್ಬರ ಸಮಕ್ಷಮದಲ್ಲೇ ಪೊಲೀಸ್ ಅಧಿಕಾರಿ ತಮ್ಮನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ ಕಥೆಯನ್ನು ಹೇಳಿದರು.
ಈ ಘಟನೆ ಬಗ್ಗೆ ಬಳಿಕ ಮಾತನಾಡಿದ ನಿಖಿಲಾ ಅವರು, ಮಂಗಳೂರಿನಲ್ಲಿ ರಾತ್ರಿ ವೇಳೆ ಸಿಂಗಲ್ ಸ್ಟಾರ್ ಪೊಲೀಸ್ ಅಧಿಕಾರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದರು. ಹಣ ಕೊಡುತ್ತೇನೆ ಬಾ ಎಂದು ಕರೆದಿದ್ದರು. ಆಗ ನಾನು ನೀವು ಹಾಕಿರುವ ಸಮವಸ್ತ್ರ ಕಳಚಿ ಬನ್ನಿ ಎಂದು ಹೇಳಿದ್ದೆ. ಇದೇ ವಿಚಾರವನ್ನು ನಾನು ಸಭೆಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಯ ವಿರುದ್ಧ ಕ್ರಮ ಭರವಸೆ
ನ್ಯಾಯಾಧೀಶರ ಮುಂದೆ ಹೇಳಿಕೆ ಬಳಿಕ ಫೆಬ್ರವರಿ ಪೊಲೀಸ್ ಅಧಿಕಾರಿಗಳು ನನ್ನನ್ನು ಕಮೀಷನರ್ ಕಚೇರಿಗೆ ಕರೆದಿದ್ದರು. ನನ್ನ ಹೇಳಿಕೆಗಳನ್ನು ಪಡೆದು ದೂರು ಕೊಡಿ ಎಂದು ಹೇಳಿದ್ದಾರೆ. ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದೂ ನಿಖಿಲಾ ತಿಳಿಸಿದರು.
ಆಗಿದ್ದೇನು?
ಫೆ. 19ರಂದು ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ, ಅರಿವು ಕಾರ್ಯಾಗಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು, ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ರಾತ್ರಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದರು. ಹಿರಿಯ ಅಧಿಕಾರಿಯೇ ಹೀಗೆ ಮಾಡಿದರೆ ನಾವು ಯಾರಿಗೆ ದೂರು ನೀಡುವುದು ಎಂದು ಬೇಸರ ವ್ಯಕ್ತಪಡಿಸಿದ್ದರು. ಆಗ ಅವರಿಗೆ ಕಾನೂನು ಸಲಹೆ ನೀಡಲು ಮುಂದಾದರು.
ಇದನ್ನೂ ಓದಿ : Sexual harrassment : ಲೆಕ್ಚರರ್‌ನಿಂದ ಲೈಂಗಿಕ ಕಿರುಕುಳ; ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು, ಅತ್ಯಾಚಾರ ಎಸಗಿ ಕೊಲೆ ಆರೋಪ