ಬೆಂಗಳೂರು: ಪೊಲೀಸರು ಹದ್ದಿನ ಕಣ್ಣಿಟ್ಟಿದ್ದೇವೆ ಎಂದು ಹೇಳಿದರೂ ರಾಜಧಾನಿಯಲ್ಲಿ ಡ್ರಗ್ಸ್ ಜಾಲ ತನ್ನ ಕರಾಮತ್ತನ್ನು ಮುಂದುವರಿಸಿದೆ. ವಾರಾಂತ್ಯದ ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ದೂರಿದೆ.
ಇಂತಹುದೇ ಆರೋಪ ಆಧರಿಸಿ ಭಾನುವಾರ ಪೊಲೀಸರು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಒಟ್ಟೋಸ್ ಪಬ್ ಮೇಲೆ ದಾಳಿ ನಡೆಸಿದರು. ಇಲ್ಲಿ ಡ್ರಗ್ಸ್ ಸೇವನೆ ಮತ್ತು ರೇವ್ ಪಾರ್ಟಿ ನಡೆಯುತ್ತಿರುವ ಆಪಾದನೆ ಇತ್ತು.
ಭಾನುವಾರ ರಾತ್ರಿ ಸಿಸಿಬಿ ಪೊಲೀಸರು ಮತ್ತು ಜೀವನ್ ಬಿಮಾ ನಗರ ಠಾಣೆ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದಾಗ ಅಲ್ಲಿ 200ಕ್ಕೂ ಅಧಿಕ ಯುವಕ-ಯುವತಿಯರು ಅಲ್ಲಿ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮುಂದಿನ Target ಕರ್ನಾಟಕ: 20%, 40%, 0% ನಡುವೆ ಆಯ್ಕೆ ನಿಮ್ಮದು ಎಂದ ಕೇಜ್ರಿವಾಲ್ –