ತುಮಕೂರು: ತುಮಕೂರು ನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅಟ್ಟಿಕಾ ಬಾಬು (Attica Babu) ಅವರು ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಲ್ಲದೆ, ಆಗಾಗ ಕುಕ್ಕರ್, ಸೀರೆ ಹಂಚಿ ಸುದ್ದಿಯಾಗಿದ್ದರು. ಈಗ ಅವರು ರಂಜಾನ್- ಯುಗಾದಿ ನೆಪದಲ್ಲಿ ಮತದಾರರಿಗೆ ಹಂಚಲು ತಂದಿಟ್ಟಿದ್ದ ಲೋಡುಗಟ್ಟಲೆ ಫುಡ್ ಕಿಟ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ!
ಚುನಾವಣೆ ಪೂರ್ವದಲ್ಲಿ ಹಬ್ಬಗಳ ಹೆಸರಿನಲ್ಲಿ ಮತದಾರರಿಗೆ ಕಿಟ್ ಹಂಚಲು ಪ್ಲ್ಯಾನ್ ಮಾಡಿ ಸಂಗ್ರಹಿಸಿಟ್ಟಿದ್ದ ಫುಡ್ ಕಿಟ್‌ಗಳು ಇವಾಗಿವೆ. ಈ ಕಿಟ್‌ಗಳ ಮೇಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ಭಾವಚಿತ್ರವೂ ಇದೆ. ಅಕ್ಕಿ, ರವೆ, ಅಡುಗೆ ಎಣ್ಣೆ ಮತ್ತಿತರ ವಸ್ತುಗಳನ್ನು ಒಳಗೊಂಡಿರುವ ಫುಡ್‌ಕಿಟ್ ಇದು.
ಅಟ್ಟಿಕಾ ಬಾಬು ಅವರು ಕಳೆದ ಒಂದು ವಾರದಿಂದ ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ಫುಡ್ ಕಿಡ್‌ಗಳನ್ನು ಹಂಚುತ್ತಿದ್ದಾರೆ. ಇದೀಗ ಅವರ ಗೋದಾಮಿಗೇ ಲಗ್ಗೆ ಇಟ್ಟಿರುವ ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೊಮ್ಮನಹಳ್ಳಿ ಬಾಬು ಎಂಬ ಹೆಸರಿನ ಇವರು ಅಟ್ಟಿಕಾ ಗೋಲ್ಡ್ ಕಂಪನಿ ಶುರು ಮಾಡಿದ ಬಳಿಕ ಅಟ್ಟಿಕಾ ಬಾಬು ಆದರು. ಮುಸ್ಲಿಂ ಆದರೂ ಹಿಂದೂ ದೇವರುಗಳ ಬಗ್ಗೆ ಭಕ್ತಿ ಭಾವ ಹೊಂದಿರುವ ಇವರು ತಮ್ಮ ಪ್ರಚಾರ ಕಾರ್ಯವನ್ನು ದೇವಸ್ಥಾನದ ಎದುರಿನಿಂದಲೇ ಆರಂಭಿಸಿದ್ದರು. ಇವರಿಗೆ ಟಿಕೆಟ್ ಪಕ್ಕಾ ಆಗಿಲ್ಲವಾದರೂ ಜಮೀರ್ ಅಹಮದ್ ಖಾನ್ ಅವರ ಮೂಲಕ ಹೇಗಾದರೂ ಮಾಡಿ ಟಿಕೆಟ್ ಪಡೆಯುತ್ತೇನೆ ಎನ್ನುವ ಧೈರ್ಯದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ.
ಇದನ್ನೂ ಓದಿ Cooker, saree politics : ತುಮಕೂರಿನಲ್ಲಿ ಸೀರೆ, ಕುಕ್ಕರ್ ಹಂಚಿದ ಅಟ್ಟಿಕಾ ಬಾಬು, ಕೊನೆಗೆ ಬಂದವರಿಗೆ ಸೀರುಂಡೆ!