Cooker, saree politics : ತುಮಕೂರಿನಲ್ಲಿ ಸೀರೆ, ಕುಕ್ಕರ್‌ ಹಂಚಿದ ಅಟ್ಟಿಕಾ ಬಾಬು, ಕೊನೆಗೆ ಬಂದವರಿಗೆ ಸೀರುಂಡೆ! - Vistara News

ಕರ್ನಾಟಕ

Cooker, saree politics : ತುಮಕೂರಿನಲ್ಲಿ ಸೀರೆ, ಕುಕ್ಕರ್‌ ಹಂಚಿದ ಅಟ್ಟಿಕಾ ಬಾಬು, ಕೊನೆಗೆ ಬಂದವರಿಗೆ ಸೀರುಂಡೆ!

ತುಮಕೂರಿನಲ್ಲಿ ಬುಧವಾರ ಮಹಿಳಾ ದಿನಾಚರಣೆ ನಿಮಿತ್ತ ಅಟ್ಟಿಕಾ ಬಾಬು ಅವರು ಕುಕ್ಕರ್‌ ಮತ್ತು ಸೀರೆ (Cooker, saree politics) ಹಂಚಿದ್ದರು. ಅವರು ತುಮಕೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

VISTARANEWS.COM


on

Attica babu tumkuru
ತುಮಕೂರಿನಲ್ಲಿ ಅಟ್ಟಿಕಾ ಬಾಬು ಮನೆಯಲ್ಲಿ ನೀಡುತ್ತಿದ್ದ ಕುಕ್ಕರ್‌ಗಾಗಿ ಸೇರಿದ್ದ ಜನ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸೀರೆ, ಕುಕ್ಕರ್ ಪಾಲಿಟಿಕ್ಸ್ (Cooker, saree politics) ಜೋರಾಗಿ ನಡೆಯುತ್ತಿದೆ. ಎಲ್ಲ ಪಕ್ಷಗಳು ಇವುಗಳನ್ನೇ ಅಸ್ತ್ರವಾಗಿ ಮಾಡಿಕೊಂಡಿವೆ. ಅದರಲ್ಲೂ ನಾನಾ ಕಾರಣ, ಹಬ್ಬಗಳನ್ನು ಮುಂದಿಟ್ಟು ಹಂಚಿಕೆ ನಡೆಯುತ್ತಿದೆ. ಬುಧವಾರ ಮಹಿಳಾ ದಿನಾಚರಣೆ ಇದ್ದ ಹಿನ್ನೆಲೆಯಲ್ಲಿ ಅದನ್ನೇ ಕಾರಣವಾಗಿಟ್ಟುಕೊಂಡು ಖ್ಯಾತ ಚಿನ್ನದ ವ್ಯಾಪಾರಿ ಅಟ್ಟಿಕಾ ಬಾಬು ತುಮಕೂರಿನಲ್ಲಿ ಮಹಿಳಾ ಮತದಾರರಿಗೆ ಸೀರೆ ಮತ್ತು ಕುಕ್ಕರ್‌ ಹಂಚಿದ್ದಾರೆ. ಆದರೆ, ಏಕಾಏಕಿ ಜನ ಸಾಗರವೇ ಬಂದಿದ್ದರಿಂದ ಅಂಗಡಿ ಬೇಗ ಮುಚ್ಚಬೇಕಾಯಿತು!

ತುಮಕೂರು ನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅಟ್ಟಿಕಾ ಬಾಬು ಅವರು ಕಳೆದ ಕೆಲವು ಸಮಯದಿಂದ ಇಲ್ಲೇ ಠಿಕಾಣಿ ಹೂಡಿದ್ದಾರೆ. ಬೊಮ್ಮನಹಳ್ಳಿ ಬಾಬು ಎಂಬ ಹೆಸರಿನ ಇವರು ಅಟ್ಟಿಕಾ ಗೋಲ್ಡ್‌ ಕಂಪನಿ ಶುರು ಮಾಡಿದ ಬಳಿಕ ಅಟ್ಟಿಕಾ ಬಾಬು ಆದರು. ಮುಸ್ಲಿಂ ಆದರೂ ಹಿಂದೂ ದೇವರುಗಳ ಬಗ್ಗೆ ಭಕ್ತಿ ಭಾವ ಹೊಂದಿರು ಇವರು ತಮ್ಮ ಪ್ರಚಾರ ಕಾರ್ಯವನ್ನು ದೇವಸ್ಥಾನದ ಎದುರಿನಿಂದಲೇ ಆರಂಭಿಸಿದ್ದರು. ಇವರಿಗೆ ಟಿಕೆಟ್‌ ಪಕ್ಕಾ ಆಗಿಲ್ಲವಾದರೂ ಜಮೀರ್‌ ಅಹಮದ್‌ ಖಾನ್‌ ಅವರ ಮೂಲಕ ಹೇಗಾದರೂ ಮಾಡಿ ಟಿಕೆಟ್‌ ಪಡೆಯುತ್ತೇನೆ ಎನ್ನುವ ಧೈರ್ಯದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ.

ಬುಧವಾರ ಇವರು ತನ್ನ ಮನೆಯ ಎದುರೇ ಸೀರೆ, ಕುಕ್ಕರ್ ಹಂಚಿದ್ದಾರೆ. ಇವರ ಮನೆ ಇರುವುದು ನಗರದ ಉಪ್ಪಾರಹಳ್ಳಿ ಬ್ರಿಡ್ಜ್ ಬಳಿ. ಸೀರೆ, ಕುಕ್ಕರ್ ಹಂಚುವ ವಿಷಯ ತಿಳಿದು ಅಟ್ಟಿಕಾ ಮನೆಯ ಮುಂದೆ ಸಾವಿರಾರು ಮಹಿಳೆಯರು ಜಮಾಯಿಸಿದರು. ಐನೂರಕ್ಕೂ ಹೆಚ್ಚು ಜನರಿಗೆ ಕುಕ್ಕರ್ ಹಂಚಿದ ಬಳಿಕ ತಂದ ಲೋಡ್‌ ಖಾಲಿ ಆಯಿತು. ಹೀಗಾಗಿ ನಂತರ ಬಂದವರು ಖಾಲಿ ಕೈಯಲ್ಲಿ ಹಿಡಿಶಾಪ ಹಾಕುತ್ತಾ ಸಾಗಿದರು.

ಮಧ್ಯಾಹ್ನದ ಹೊತ್ತಿಗೆ ಲೋಡ್‌ ಖಾಲಿಯಾಗಿತ್ತು. ಅಷ್ಟಾದರೂ ಜನ ಮನೆ ಎದುರು ಕಾದಿದ್ದರು. ಈಗ ಬರಬಹುದು ಎಂಬ ನಿರೀಕ್ಷೆಯಲ್ಲಿ. ಕೊನೆಗೆ ಕತ್ತಲಾಗುತ್ತಿದ್ದಂತೆಯೇ ಜನರು ಕದಲಿದರು. ಸಾವಿರಾರು ಜನರು ಜಮಾಯಿಸಿದ್ದರಿಂದ ಅಟ್ಟಿಕಾ ಮನೆ ಎದುರು ಪೋಲೀಸರು ಠಿಕಾಣಿ ಹೂಡಿದ್ದರು.

ವಿಶೇಷವೆಂದರೆ, ಇಲ್ಲಿಗೆ ಬಂದು ಕುಕ್ಕರ್‌ಗಾಗಿ ಸಾಲುಗಟ್ಟಿದವರಲ್ಲಿ ಹೆಚ್ಚಿನವರಿಗೆ ಕುಕ್ಕರ್‌, ಸೀರೆ ಕೊಡುತ್ತಿರುವವರು ಯಾರು ಎನ್ನುವುದೇ ಗೊತ್ತಿರಲಿಲ್ಲ. ಅಟ್ಟಿಕಾ ಬಾಬು ಹೆಸರೂ ತಿಳಿದಿರಲಿಲ್ಲ. ಕೆಲವರು ಬೇರೆ ಪಕ್ಷದವರು ಬೇರೆ ಕಡೆ ಹಂಚುತ್ತಿದ್ದಾರಂತೆ ಎಂದು ಆಸೆಯಿಂದ ಹೇಳಿಕೊಂಡರು. ಇಲ್ಲಿ ಕಾದು ನಿಂತು ಅಲ್ಲಿ ಮಿಸ್‌ ಆಯಿತು ಎಂಬ ಬೇಸರವೂ ಕೆಲವರಲ್ಲಿತ್ತು.

ಇದನ್ನೂ ಓದಿ : GST Raid | ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್‌ಗಳ ಜಪ್ತಿ; ಬಾಕ್ಸ್‌ ಮೇಲೆ ಕುಣಿಗಲ್‌ ಕಾಂಗ್ರೆಸ್ ಶಾಸಕನ ಚಿತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

‌Actor Dwarakish: ಚಿತ್ರರಂಗದಲ್ಲಿ ಮಾತ್ರವಲ್ಲ ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದ ದ್ವಾರಕೀಶ್!

‌Actor Dwarakish: ಅಂಬರೀಶ್, ಅನಂತನಾಗ್ ರೀತಿಯಲ್ಲಿ ವಿಧಾನ ಸಭೆ ಪ್ರವೇಶ ಮಾಡುವ ಆಸೆ ಹೊಂದಿದ್ದ ನಟ ದ್ವಾರಕೀಶ್‌ ಅವರು, 2004 ರಲ್ಲಿ ಆಪ್ತಮಿತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿನಿಂದ ಸ್ಪರ್ಧೆ ಮಾಡಿದ್ದರು.

VISTARANEWS.COM


on

Actor Dwarakish
Koo

ಬೆಂಗಳೂರು: ನಟ ದ್ವಾರಕೀಶ್ (‌Actor Dwarakish) ಅವರು ಬರೀ ನಟ, ನಿರ್ಮಾಪಕ ಅಷ್ಟೇ ಅಲ್ಲ, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. ಅಂಬರೀಶ್, ಅನಂತನಾಗ್ ಅವರ ರೀತಿಯಲ್ಲಿ ವಿಧಾನಸಭೆ ಪ್ರವೇಶ ಮಾಡುವ ಆಸೆ ಹೊಂದಿದ್ದ ಅವರು, 2004ರಲ್ಲಿ ಆಪ್ತಮಿತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಹೀಗಾಗಿ ಆಪ್ತಮಿತ್ರ ಸಿನಿಮಾಕ್ಕೂ ರಾಜಕೀಯಕ್ಕೂ ಬಾರಿ ನಂಟು ಇದೆ.

ಉದ್ಯಮಿ ವಿಜಯಸಂಕೇಶ್ವರ ಅವರು ಕಟ್ಟಿದ ಕನ್ನಡ ನಾಡು ಪಕ್ಷದಲ್ಲಿ ಗುರುತಿಸಿಕೊಂಡು ಕೆಲಸ ಮಾಡಿದ ದ್ವಾರಕೀಶ್‌ ಅವರು, 2004ರಲ್ಲಿ ಕನ್ನಡ ನಾಡು ಪಕ್ಷದಿಂದ ಹುಣಸೂರಿನಿಂದ ಸ್ಪರ್ಧೆ ಮಾಡಿದ್ದರು. ಹುಣಸೂರು ತಮ್ಮ ಹುಟ್ಟೂರು ಆಗಿದ್ದರಿಂದ ಅಲ್ಲಿ ಜನರು ಕೈ ಹಿಡಿಯುತ್ತಾರೆ ಎಂದು ಚುನಾವಣಾ ಕಣಕ್ಕಿಳಿದಿದ್ದರು. ಕ್ಷೇತ್ರದಾದ್ಯಂತ ಪ್ರಚಾರಕ್ಕೆ ಹೋದಾಗ ಉತ್ತಮ ಬೆಂಬಲ ಸಿಕ್ಕಿತ್ತು. ಆದರೆ ಚುನಾವಣೆಯಲ್ಲಿ 2300 ಮತಗಳನ್ನು ಪಡೆದು ಡೆಪಾಸಿಟ್ ಸಹ ಕಳೆದುಕೊಂಡರು.

ಇದನ್ನೂ ಓದಿ | Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್‌ ಇನ್ನಿಲ್ಲ

ಅಂದು ಕನ್ನಡ ನಾಡು ಪಕ್ಷದಿಂದ ಗೆದ್ದಿದ್ದು ಕೇವಲ ಸುರಪುರದ ರಾಜುಗೌಡ ಮಾತ್ರ (ಈಗ ಉಪಚುನಾವಣೆ ನಡೆಯಿತ್ತಿದ್ದು, ರಾಜುಗೌಡ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ). ಆಪ್ತಮಿತ್ರ ಸಿನಿಮಾ ಶೂಟಿಂಗ್ ನಡುವೆಯೇ ದ್ವಾರಕೀಶ್‌ ಅವರು ಪ್ರಚಾರ ನಡೆಸಿದರು. ಆದರೆ ಕ್ಷೇತ್ರದ ಜನ ಕೈ ಹಿಡಿದಿರಲಿಲ್ಲ, ಆಪ್ತಮಿತ್ರ ಸಿನಿಮಾ ಮಾತ್ರ ಕೈ ಹಿಡಿದಿತ್ತು. ಬ್ಯಾಲೆಟ್‌ನಲ್ಲಿ ಸೋಲಿಸಿದ್ದ ಜನ‌, ಸಿನಿಮಾ ಮಂದಿರದಲ್ಲಿ ದ್ವಾರಕೀಶ್ ಅವರನ್ನು ನಿರ್ಮಾಪಕ ಹಾಗೂ ಸಹನಟನಾಗಿ ಗೆಲ್ಲಿಸಿದ್ದರು.

ಅಣ್ಣಾವ್ರಿಗೆ ಆಪ್ತ, ವಿಷ್ಣುವರ್ಧನ್‌ಗೆ ಆಪ್ತಮಿತ್ರ ದ್ವಾರಕೀಶ್;‌ ಇವರ ನಂಟು ಹೇಗಿತ್ತು?

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್‌ (81) (Actor Dwarakish) ಅವರು ಮಂಗಳವಾರ (ಏಪ್ರಿಲ್‌ 16) ನಿಧನರಾಗಿದ್ದಾರೆ. ಬಹುಮುಖ ಪ್ರತಿಭೆ, ಗಮನ ಸೆಳೆಯುವ ವ್ಯಕ್ತಿತ್ವ ಹೊಂದಿದ್ದ ದ್ವಾರಕೀಶ್‌ ಅವರು ಸ್ನೇಹಜೀವಿಯೂ ಆಗಿದ್ದರು. ಅದರಲ್ಲೂ, ಡಾ.ರಾಜಕುಮಾರ್‌ (Dr Rajkumar), ಡಾ.ವಿಷ್ಣುವರ್ಧನ್‌ (Dr Vishnuvardhan) ಅವರೊಂದಿಗೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದರು. ಅದರಲ್ಲೂ, ವಿಷ್ಣುವರ್ಧನ್‌ ಅವರ ಜತೆ ಹೆಚ್ಚು ಆತ್ಮೀಯತೆ ಹೊಂದಿದ್ದರು.

ವಿಷ್ಣುವರ್ಧನ್-ದ್ವಾರಕೀಶ್‌ ಜೋಡಿ ಮೋಡಿ

ಕನ್ನಡ ಸಿನಿಮಾ ರಂಗದಲ್ಲಿ ವಿಷ್ಣುವರ್ಧನ್‌ ಹಾಗೂ ದ್ವಾರಕೀಶ್‌ ಅವರ ಜೋಡಿಯು ಮೋಡಿ ಮಾಡಿತ್ತು. ಕಳ್ಳ-ಕುಳ್ಳ, ಕಿಟ್ಟು-ಪುಟ್ಟು, ಸಿಂಗಾಪೂರ್‌ನಲ್ಲಿ ರಾಜ-ಕುಳ್ಳ, ಗುರು-ಶಿಷ್ಯರು, ಕಿಲಾಡಿಗಳು ಸೇರಿ ಹಲವು ಸೂಪರ್‌ ಡೂಪರ್‌ ಹಿಟ್‌ ಆದ ಸಿನಿಮಾಗಳಲ್ಲಿ ಇವರ ಜೋಡಿಯು ಮೋಡಿ ಮಾಡಿತ್ತು. ದ್ವಾರಕೀಶ್‌ ನಿರ್ದೇಶನದ ಮೊದಲ ಚಿತ್ರ ನೀ ಬರೆದ ಕಾದಂಬರಿಯು ಕೂಡ ಭಾರಿ ಹಿಟ್‌ ಆಯಿತು. “ಒಂದು ದಿನವೂ ವಿಷ್ಣುವರ್ಧನ್‌ ಕಾಲ್‌ಶೀಟ್‌ ಇಲ್ಲ ಎಂದಿರಲಿಲ್ಲ” ಎಂಬುದಾಗಿ ಆಗಾಗ ದ್ವಾರಕೀಶ್‌ ಅವರು ಹೇಳುತ್ತಲೇ ಇದ್ದರು.

ಗೆಳೆಯನಿಗಾಗಿ ಸಿನಿಮಾ ಮಾಡಿದ ವಿಷ್ಣು

ಆಪ್ತಮಿತ್ರ ಸಿನಿಮಾ ಬಿಡುಗಡೆಗೂ ಮೊದಲು ದ್ವಾರಕೀಶ್‌ ಅವರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರು. ಅವರು ಮನೆ ಕೂಡ ಮಾರಿಕೊಂಡು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದರು. ಆಗ, ದ್ವಾರಕೀಶ್‌ ನೆರವಿಗೆ ಧಾವಿಸಿದ ವಿಷ್ಣುವರ್ಧನ್‌ ಅವರು ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೆ ದ್ವಾರಕೀಶ್‌ ನಿರ್ಮಾಣದ ಆಪ್ತಮಿತ್ರ ಸಿನಿಮಾದಲ್ಲಿ ನಟಿಸಿದರು. ಆಪ್ತ ಮಿತ್ರ ಸಿನಿಮಾವು ಹಿಟ್‌ ಆಗಿ, ಕಾಲವನ್ನು ತಡೆಯೋರು ಯಾರೂ ಇಲ್ಲ ಎಂದು ವಿಷ್ಣು-ದ್ವಾರಕೀಶ್‌ ಜೋಡಿ ಹಾಡು ಮನೆಮಾತಾಗಿದ್ದಲ್ಲದೆ, ದ್ವಾರಕೀಶ್‌ ಅವರು ಮತ್ತೆ ಸ್ವಂತ ಮನೆಗೆ ಯಜಮಾನರಾದರು. ಅಷ್ಟರಮಟ್ಟಿಗೆ, ಇವರ ಜೋಡಿ, ಸ್ನೇಹವು ಗಟ್ಟಿಯಾಗಿತ್ತು.

ಸ್ನೇಹದ ಸೊಗಸಿನ ಮಧ್ಯೆ ಮುನಿಸು

ವಿಷ್ಣುವರ್ಧನ್‌ ಹಾಗೂ ದ್ವಾರಕೀಶ್‌ ಅವರ ಮಧ್ಯೆ ಆಗಾಗ ಮುನಿಸು, ರಾಜಿ ನಡೆಯುತ್ತಲೇ ಇದ್ದವು. ನಾನು ಯಾವಾಗ ವಿಷ್ಣುವರ್ಧನ್‌ ಜತೆ ಮುನಿಸಿಕೊಂಡು, ನಂತರ ಒಂದಾಗಿ ಸಿನಿಮಾ ಮಾಡಿದ್ದೇನೆಯೋ, ಆ ಸಿನಿಮಾಗಳೆಲ್ಲ ಹಿಟ್‌ ಆಗಿವೆ ಎಂದು ದ್ವಾರಕೀಶ್‌ ಅವರೇ ಹೇಳುತ್ತಿದ್ದರು. ಆದರೆ, ಆಪ್ತಮಿತ್ರ ಸಿನಿಮಾ ಬಳಿಕ ದ್ವಾರಕೀಶ್‌ ಅವರು ವಿಷ್ಣುವರ್ಧನ್‌ ಅವರ ಬಗ್ಗೆ ನೀಡಿದ ಹೇಳಿಕೆಯು ಇಬ್ಬರ ಮಧ್ಯೆ ಮತ್ತೆ ಬಿರುಕು ಮೂಡಿಸಿತು.

ಇನ್ನು, ವಿಷ್ಣುವರ್ಧನ್‌ ಅವರ ಅಗಲಿಕೆಯ ಬಳಿಕ ಯಾವಾಗ ಮಾತನಾಡಿದರೂ ದ್ವಾರಕೀಶ್‌ ಅವರು ವಿಷ್ಣುವರ್ಧನ್‌ ಹೆಸರು ಪ್ರಸ್ತಾಪಿಸದೆ ಇರುತ್ತಿರಲಿಲ್ಲ. “ಸೂಪರ್‌ ಸ್ಟಾರ್‌ ಆಗಿದ್ದ ವಿಷ್ಣುವರ್ಧನ್‌ ಇಲ್ಲದೆ ನಾನಿಲ್ಲ. ಆದರೂ, ಆತನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ” ಎಂದು ದ್ವಾರಕೀಶ್‌ ಅವರು ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದರು.

ಅಣ್ಣಾವ್ರಿಗೂ ಆಪ್ತರಾಗಿದ್ದ ದ್ವಾರಕೀಶ್

ಡಾ.ರಾಜಕುಮಾರ್‌ ಅವರಿಗೆ ದ್ವಾರಕೀಶ್‌ ಅವರು ಅತ್ಯಾಪ್ತರಾಗಿದ್ದರು. ಇವರಿಗೆ ಎರಡು ಸಿನಿಮಾಗಳನ್ನು ದ್ವಾರಕೀಶ್‌ ನಿರ್ಮಾಣ ಮಾಡಿದ್ದರು. ಅದರಲ್ಲೂ, ಮೇಯರ್‌ ಮುತ್ತಣ್ಣ ಸಿನಿಮಾದಲ್ಲಿ ರಾಜಕುಮಾರ್‌ ಹಾಗೂ ದ್ವಾರಕೀಶ್‌ ಅವರು ಒಟ್ಟಿಗೆ ನಟಿಸಿದ್ದರು. ಸತ್ಯ ಹರಿಶ್ಚಂದ್ರ ಸಿನಿಮಾದಲ್ಲೂ ರಾಜಕುಮಾರ್‌ ಅವರೊಂದಿಗೆ ನಟಿಸಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. “ಡಾ.ರಾಜಕುಮಾರ್‌ ಅವರು ಯಾವಾಗ ಸಿಕ್ಕರೂ ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರೊಂದಿಗೆ ಹೆಚ್ಚು ಸಿನಿಮಾ ಮಾಡಲು ಆಸೆ ಇತ್ತು. ಆದರೆ, ಅವರು ತುಂಬ ಬ್ಯುಸಿ ಇರುತ್ತಿದ್ದರು. ಆತ್ಮೀಯತೆ ಮಾತ್ರ ಚೆನ್ನಾಗಿತ್ತು” ಎಂದು ದ್ವಾರಕೀಶ್‌ ಹೇಳಿದ್ದರು.

ಮುನಿಸು, ಸಿಟ್ಟು, ಸೆಡವಿನ ಮಧ್ಯೆಯೂ ದ್ವಾರಕೀಶ್‌ ಅವರು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹ ಸಂಪಾದಿಸಿದ್ದರು. ರೆಬೆಲ್‌ ಸ್ಟಾರ್‌ ಅಂಬರೀಶ್‌, ಸೂಪರ್‌ ಸ್ಟಾರ್‌ ರಜನಿಕಾಂತ್‌, ಶಂಕರ್‌ನಾಗ್‌ ಅವರ ಜತೆಯೂ ದ್ವಾರಕೀಶ್‌ ಅವರು ಉತ್ತಮ ಬಾಂಧವ್ಯ ಹೊಂದಿದ್ದರು.

ಇದನ್ನೂ ಓದಿ | Actor Dwarakish: ಕನ್ನಡ ಸಿನಿಮಾದ ʼಪ್ರಚಂಡ ಕುಳ್ಳʼ ದ್ವಾರಕೀಶ್ ಬಗ್ಗೆ ನೀವರಿಯದ 12 ವಿಶಿಷ್ಟ ಸಂಗತಿಗಳು ಇಲ್ಲಿವೆ

Continue Reading

ಬೆಂಗಳೂರು

Robbery case : ಎಎಸ್‌ಐ ಬೈಕ್‌ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್‌ ಗ್ಯಾಂಗ್‌ ಅರೆಸ್ಟ್‌

Robbery case : ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ಎಎಸ್‌ಐ ನಾಗರಾಜ್‌ರ ಬೈಕ್‌ ಕದ್ದು, ಅದರಲ್ಲೇ ದರೋಡೆ ಮಾಡುತ್ತಿದ್ದ ಗ್ಯಾಂಗ್‌ವೊಂದು ಅರೆಸ್ಟ್‌ ಆಗಿದೆ. ರಾತ್ರಿಯಾದರೆ ಹೆದ್ದಾರಿಗೆ ಬರುತ್ತಿದ್ದ ಈ ದರೋಡೆಕೋರರು ವಾಹನವನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು.

VISTARANEWS.COM


on

By

Robbery Case In Bengaluru
Koo

ಬೆಂಗಳೂರು: ಅದೊಂದು ರಾಬರಿ ಗ್ಯಾಂಗ್‌ (Robbery case) ಕಾಟಕ್ಕೆ ಹೆದ್ದಾರಿ ಸವಾರರು ಅಕ್ಷರಶಃ ಹೆದರಿದ್ದರು. ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ದರೋಡೆಕೋರರು ಕೃತ್ಯ ಎಸಗಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗುತ್ತಿದ್ದರು. ಅದರಲ್ಲೂ ಪೊಲೀಸ್‌ ಗಾಡಿಯನ್ನೇ ಕದ್ದು, ಅದರಲ್ಲೇ ರಾಬರಿ ಮಾಡುತ್ತಿದ್ದ ಕಿರಾತಕರನ್ನು ಬಂಧಿಸಿದ್ದಾರೆ.

ಕಳೆದ ಮಾ. 31ರ ಮಧ್ಯರಾತ್ರಿ ದಾಬಸ್ ಪೇಟೆ ಬಳಿ ರಾಬರಿಯೊಂದು ನಡೆದಿತ್ತು. ಮಧ್ಯರಾತ್ರಿ 1-30ರ ಸುಮಾರಿಗೆ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕ್ಯಾಂಟರ್‌ ವಾಹನಕ್ಕೆ ಅಡ್ಡ ಹಾಕಿದ್ದರು. ಚಾಲಕನಿಗೆ ಚಾಕುವಿನಿಂದ ಇರಿದು, ಆತನ ಬಳಿ ಇದ್ದ ಮೊಬೈಲ್ ಕಸಿದುಕೊಂಡಿದ್ದರು. ನಂತರ ಗೂಗಲ್ ಪೇ, ಫೋನ್ ಪೇನ್‌ ಮೂಲಕ ಹಣವನ್ನೆಲ್ಲಾ ದೋಚಿದ್ದರು.

ಈ ಸಂಬಂಧ ಚಾಲಕ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್‌ ಬೇರೆ ಕೇಸ್‌ಗಳಲ್ಲೂ ಭಾಗಿಯಾಗಿರುವ ವಿಚಾರ ತಿಳಿದುಬಂದಿದೆ. ಕಾಮಾಕ್ಷಿಪಾಳ್ಯ ಎಎಸ್‌ಐ ನಾಗರಾಜ್ ಅವರ ಬೈಕ್‌ ಕದ್ದು, ಅದರಲ್ಲೇ ರಾಬರಿ ಮಾಡಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಕಳೆದ ತಿಂಗಳ 28ರಂದು ಎಎಸ್‌ಐ ನಾಗರಾಜ್‌ ಅವರ ಬೈಕ್‌ ಕಳ್ಳತನವಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಬೈಕ್‌ ಬಳಸಿ ಹೆದ್ದಾರಿಯಲ್ಲಿ ರಾಬರಿ ಮಾಡಿರುವುದು ಬೆಳಕಿಗೆ ಬಂದಿದೆ.

ಸದ್ಯ ರಾಬರಿ ಗ್ಯಾಂಗ್‌ ಅನ್ನು ಪತ್ತೆ ಹಚ್ಚಿರುವ ದಾಬಸ್ ಪೇಟೆ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸುಹೇಲ್, ಆದಿ, ವಿಜಯ್, ಧನುಷ್ ಸೇರಿ ಒಟ್ಟು ಆರು ಜನರ ಗ್ಯಾಂಗ್ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ಬೈಕ್‌ ಸೇರಿ 6 ಮೊಬೈಲ್‌ಗಳು, ಮೂರುವರೆ ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Lok Sabha Election 2024 : ಜಯನಗರದಲ್ಲಿ ಸೀಜ್‌ ಆದ ಕೋಟ್ಯಂತರ ಹಣ; ಇಬ್ಬರ ವಿರುದ್ಧ ಎಫ್‌ಐಆರ್‌

ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

ಬೆಂಗಳೂರು: ಬೈಯ್ಯಪ್ಪನಹಳ್ಳಿ ಪೊಲೀಸರು ನಟೋರಿಯಸ್ ಬೈಕ್ ಕಳ್ಳನನ್ನು (Theft Case) ಬಂಧಿಸಿದ್ದಾರೆ. ದೀಪಕ್ ಅಲಿಯಾಸ್‌ ದೀಪು ಬಂಧಿತ ಆರೋಪಿಯಾಗಿದ್ದಾನೆ. ದೀಪಕ್‌ ಸ್ವಿಗ್ಗಿ ಡೆಲಿವರಿ ಬಾಯ್ (Swiggy Boy) ಆಗಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಸುಮಾರು 14 ಪ್ರಕರಣ ದಾಖಲಾಗಿವೆ.

ಬೆಳಗಿನಿಂದ ಸಂಜೆವರೆಗೂ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಬೈಕ್ ಕದಿಯುತ್ತಿದ್ದ. ಕದ್ದ ಬೈಕ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಬೈಕ್‌ ಮಾರಾಟಕ್ಕೂ ಮೊದಲು ದಾಖಲಾತಿಯನ್ನೆಲ್ಲ ನಂತರ ಕೊಡುತ್ತೇನೆ ಎಂದು ಯಮಾರಿಸಿ, ಕಡಿಮೆ ಬೆಲೆಗೆ ಬೈಕ್ ಮಾರುತ್ತಿದ್ದ.

ಸದ್ಯ ಬೈಯ್ಯಪ್ಪನಹಳ್ಳಿ ಪೊಲೀಸರು ಈ ಖತರ್ನಾಕ್‌ ಕಳ್ಳನಿಂದ ಮೂರು ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತಕ್ಕೆ ಮೂವರು ಬಲಿ, ಮತ್ತೋರ್ವ ಗಂಭೀರ

ಬುಲೆಟ್‌ ಬೈಕ್‌ ಕದಿಯಲು ಕಳ್ಳನ ಒದ್ದಾಟ

ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್‌ ಬೈಕ್ ಕಳ್ಳತನಕ್ಕೆ ಕಳ್ಳನೊಬ್ಬ ವಿಫಲ ಯತ್ನ ನಡೆಸಿದ್ದಾನೆ. ಬುಲೆಟ್ ಬೈಕ್‌ನ ಹ್ಯಾಂಡಲ್ ಲಾಕ್‌ ಕಾಲಿನಿಂದ ಒದ್ದು ಮುರಿಯಲು ಯತ್ನಿಸಿದ್ದಾನೆ. ಬೈಕ್ ಕದಿಯಲು ಕಳ್ಳನ ಒದ್ದಾಟವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಏಪ್ರಿಲ್‌ 14ರ ಮಧ್ಯರಾತ್ರಿ 2:25ರ ಸುಮಾರಿಗೆ ಕಳ್ಳನೊಬ್ಬ ಬೆಂಗಳೂರಿನ ಜೆ.ಪಿ ನಗರದ ಮನೆ ಬಳಿ ಬಂದಿದ್ದ. ಒಂದೆರಡು ನಿಮಿಷ ಬುಲೆಟ್‌ ಬೈಕ್‌ ಅನ್ನೇ ನೋಡುತ್ತಾ, ಜತೆಗೆ ಧರಿಸಿದ್ದ ಟೀ ಶರ್ಟ್‌ನಲ್ಲೇ ಮುಖವನ್ನು ಮುಚ್ಚಿಕೊಂಡಿದ್ದ. ನಂತರ ಬುಲೆಟ್‌ ಬೈಕ್‌ ಏರಿ ಕುಳಿತು ಅತ್ತಿಂದಿತ್ತ ಕಣ್ಣಾಡಿಸಿ ಕಾಲಿನಿಂದ ಒದ್ದು ಹ್ಯಾಂಡಲ್‌ ಮುರಿಯಲು ಯತ್ನಿಸಿದ್ದಾನೆ. ಹೀಗೆ ನಾಲ್ಕೈದು ಬಾರಿ ಪ್ರಯತ್ನಿಸಿದ ನಂತರ ಮತ್ತ ಮನೆ ಮುಂದೆಯೇ ಬೈಕ್‌ ನಿಲ್ಲಿಸಿ, ಬಂದ ದಾರಿಗೆ ಸುಂಕವಿಲ್ಲ ಎಂದು ತಿಳಿದು ಹೊರಟು ಹೋಗಿದ್ದಾನೆ. ಸದ್ಯ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Lok Sabha Election 2024: ಬೆಂಗಳೂರಿನಲ್ಲಿ ದೊರೆಯಲಿದೆ ಕ್ಯುಆರ್‌ ಕೋಡ್ ಸಹಿತ ವೋಟರ್‌ ಸ್ಲಿಪ್‌:‌ ಏನಿದರ ಉಪಯೋಗ?

Lok Sabha Election 2024: ಇದೇ ಮೊದಲ ಬಾರಿಗೆ ಇಂಥದೊಂದು ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕ್ಯೂಆರ್ ಕೋಡ್‌ಗಳಿಂದ ಕೂಡಿರುವ ವೋಟರ್ ಸ್ಲಿಪ್‌ಗಳು, ನಗರದ ನಿವಾಸಿಗಳಿಗೆ ಮತದಾನಕ್ಕಾಗಿ ಮತಗಟ್ಟೆಗಳನ್ನು ಹುಡುಕಾಡುತ್ತ ಹೋಗುವ ಕಷ್ಟವನ್ನು ತಪ್ಪಿಸುತ್ತವೆ.

VISTARANEWS.COM


on

lok sabha Election 2024 digital QR code voter slip
Koo

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ (Election commission) ಈ ಸಲ ಲೋಕಸಭೆ ಚುನಾವಣೆ (Lok Sabha Election 2024) ಮತದಾನದ (voting) ಮೊದಲ ಪರಿಚಯಿಸುತ್ತಿರುವ ಕೆಲವು ನೂತನ ಉಪಕ್ರಮಗಳಲ್ಲಿ ಒಂದು, ಕ್ಯುಆರ್‌ ಕೋಡ್‌ ಇರುವ ವೋಟರ್‌ ಸ್ಲಿಪ್ (digital QR code voter slip).‌ ಇದು ಬೆಂಗಳೂರಿನಲ್ಲಿ ಹಾಗೂ ರಾಜ್ಯದ ಕಲವು ಮಹಾನಗರ ಪಾಲಿಕೆಗಳಲ್ಲಿ ಮನೆ-ಮನೆಗೆ ವಿತರಿಸುವ ವೋಟರ್ ಸ್ಲಿಪ್‌ಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಹೊಂದಿದೆ.

ಇದರ ಉದ್ದೇಶವೇನು? ಈ ಮುಂದಾಲೋಚನೆಯ ಉಪಕ್ರಮವು ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಬೆಂಗಳೂರಿನಂತಹ ಜನಜಂಗುಳಿಯ ನಗರಗಳಲ್ಲಿ ಮತಗಟ್ಟೆಗಳನ್ನು ಪತ್ತೆಹಚ್ಚುವ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ.

ಇದೇ ಮೊದಲ ಬಾರಿಗೆ ಇಂಥದೊಂದು ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕ್ಯೂಆರ್ ಕೋಡ್‌ಗಳಿಂದ ಕೂಡಿರುವ ವೋಟರ್ ಸ್ಲಿಪ್‌ಗಳು, ನಗರದ ನಿವಾಸಿಗಳಿಗೆ ಮತದಾನಕ್ಕಾಗಿ ಮತಗಟ್ಟೆಗಳನ್ನು ಹುಡುಕಾಡುತ್ತ ಹೋಗುವ ಕಷ್ಟವನ್ನು ತಪ್ಪಿಸುತ್ತವೆ. ಅವರು ತಮಗಾಗಿ ಗೊತ್ತುಪಡಿಸಿದ ಮತದಾನ ಕೇಂದ್ರಗಳಿಗೆ ಹೋಗುವ ದಾರಿಯನ್ನು ಸೂಚಿಸುತ್ತದೆ.

ವೋಟರ್ ಸ್ಲಿಪ್‌ಗಳಲ್ಲಿ ಸಂಯೋಜಿಸಲಾದ QR ಕೋಡ್‌ಗಳು ಮತದಾನ ಕೇಂದ್ರದ ವಿವರಗಳು, ಚುನಾವಣಾ ದಿನಾಂಕ ಮತ್ತು ಸಮಯದಂತಹ ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತವೆ. ಆದರೆ ಈ ಸ್ಲಿಪ್‌ಗಳು ಮತದಾರರ ಭಾವಚಿತ್ರಗಳನ್ನು ಒಳಗೊಂಡಿಲ್ಲ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಮಾಹಿತಿ ಕಾರ್ಡ್ ಅನ್ನು ಎಲ್ಲಾ ನೋಂದಾಯಿತ ಮತದಾರರಿಗೆ ಒದಗಿಸುತ್ತಾರೆ. ಆದರೆ ಈ ಕಾರ್ಡ್ ಮತದಾರರ ಗುರುತಿನ ಪುರಾವೆ ಅಥವಾ ಐಡಿ ಕಾರ್ಡ್‌ ಆಗಿ ಕಾರ್ಯನಿರ್ವಹಿಸುವುದಿಲ್ಲ.

ತಮ್ಮ ಗುರುತನ್ನು ಮತಗಟ್ಟೆಯಲ್ಲಿ ಖಚಿತಪಡಿಸಲು, ಮತದಾರರು ಕೇಂದ್ರ ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನೀಡಲಾದ ಯಾವುದೇ ಮಾನ್ಯತೆಯುಳ್ಳ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು.

ಈ ಪ್ರಗತಿಪರ ಉಪಕ್ರಮವು ಮತದಾನ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವುದಲ್ಲದೆ, ವಿಶೇಷವಾಗಿ ಬೆಂಗಳೂರಿನಂತಹ ಜನನಿಬಿಡ ನಗರ ಪ್ರದೇಶಗಳಲ್ಲಿ ಮತದಾರರಿಗೆ ಸುಗಮತೆಯನ್ನು ಉಂಟುಮಾಡಲಿದೆ. QR ಕೋಡ್-ಸಕ್ರಿಯಗೊಳಿಸಿದ ವೋಟರ್ ಸ್ಲಿಪ್‌ಗಳ ಪರಿಚಯದೊಂದಿಗೆ, ಚುನಾವಣಾ ಪ್ರಕ್ರಿಯೆಯು ಹೆಚ್ಚು ಪರಿಣಾಮಕಾರಿ ಮತ್ತು ಬಳಕೆದಾರ ಸ್ನೇಹಿಯಾಗಲು ಸಿದ್ಧವಾಗಿದೆ. ನಾಗರಿಕರಿಗೆ ಸುಗಮ ಮತದಾನದ ಅನುಭವವನ್ನು ನೀಡಲಿದೆ.

ಇದನ್ನೂ ಓದಿ: Lok Sabha Election 2024: ನಾಳೆ ರಾಜ್ಯಕ್ಕೆ ರಾಹುಲ್‌ ಗಾಂಧಿ, ಪವನ್‌ ಕಲ್ಯಾಣ್‌ ಎಂಟ್ರಿ

Continue Reading

ಕರ್ನಾಟಕ

Parliament Flashback: ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಕಾಂಗ್ರೆಸ್‌ ಕಿರುಕುಳದಿಂದಾಗಿ ಪ್ರಧಾನಿ ಹುದ್ದೆ ತೊರೆದಿದ್ದ ದೇವೇಗೌಡರು!

ಅಟಲ್‌ ಬಿಹಾರಿ ವಾಜಪೇಯಿ (Parliament Flashback) ಅವರ 13 ದಿನಗಳ ಸರ್ಕಾರ ಬಹುಮತ ಇಲ್ಲದೆ ಪತನಗೊಂಡ ಬಳಿಕ ಸಂಯುಕ್ತ ರಂಗ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ಸರ್ಕಾರ ಕಾಂಗ್ರೆಸ್‌ನ ಬಾಹ್ಯ ಬೆಂಬಲವನ್ನೇ ಆಧರಿಸಿತ್ತು. 1996ರ ಜೂನ್‌ 1ರಂದು ದೇವೇಗೌಡರು ದೇಶದ 11ನೇ ಪ್ರಧಾನಿಯಾಗಿ ಪ್ರಮಾಣವ ವಚನ ಸ್ವೀಕರಿಸಿದರು. ಆದರೆ ಪ್ರಧಾನಿ ದೇವೇಗೌಡರಿಗೆ ಆಗಿನ ಕಾಂಗ್ರೆಸ್‌ ಅಧ್ಯಕ್ಷ ಸೀತಾರಾಮ್‌ ಕೇಸರಿ ಅವರು ನಾನಾ ರೀತಿಯ ಕಿರುಕುಳ ಕೊಡಲಾರಂಭಿಸಿದರು.

VISTARANEWS.COM


on

EX PM HD Devegowda
Koo

ಬೆಂಗಳೂರು: ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ದೇವೇಗೌಡರು ಅನಿರೀಕ್ಷಿತ ಸನ್ನಿವೇಶದಲ್ಲಿ ದೇಶದ ಪ್ರಧಾನಿಯಾದರು. ಮಣ್ಣಿನ ಮಗ ಪ್ರಧಾನಿಯಾದ ಬಗ್ಗೆ ರಾಜ್ಯದಲ್ಲಿ ಹರ್ಷದ ವಾತಾವರಣ ಉಂಟಾಗಿತ್ತು. ಆದರೆ ಒಂದು ವರ್ಷದೊಳಗೇ ಅವರು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯಬೇಕಾಯಿತು.
ಅಟಲ್‌ ಬಿಹಾರಿ ವಾಜಪೇಯಿ ಅವರ 13 ದಿನಗಳ ಸರ್ಕಾರ ಬಹುಮತ ಇಲ್ಲದೆ ಪತನಗೊಂಡ ಬಳಿಕ ಸಂಯುಕ್ತ ರಂಗ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ಸರ್ಕಾರ ಕಾಂಗ್ರೆಸ್‌ನ ಬಾಹ್ಯ ಬೆಂಬಲವನ್ನೇ ಆಧರಿಸಿತ್ತು. 1996ರ ಜೂನ್‌ 1ರಂದು ದೇವೇಗೌಡರು ದೇಶದ 11ನೇ ಪ್ರಧಾನಿಯಾಗಿ ಪ್ರಮಾಣವ ವಚನ ಸ್ವೀಕರಿಸಿದರು. ಆದರೆ ಪ್ರಧಾನಿ ದೇವೇಗೌಡರಿಗೆ ಆಗಿನ ಕಾಂಗ್ರೆಸ್‌ ಅಧ್ಯಕ್ಷ ಸೀತಾರಾಮ್‌ ಕೇಸರಿ ಅವರು ನಾನಾ ರೀತಿಯ ಕಿರುಕುಳ ಕೊಡಲಾರಂಭಿಸಿದರು.

Kalyan Singh

ಕಲ್ಯಾಣ್‌ ಸಿಂಗ್‌ ಸರ್ಕಾರ ಅಸ್ಥಿರಗೊಳಿಸಲು ಯತ್ನ

ಆಗ ಉತ್ತರ ಪ್ರದೇಶದಲ್ಲಿ ಕಲ್ಯಾಣ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಕಾಂಗ್ರೆಸ್‌ ಕೇವಲ 33 ಸ್ಥಾನ ಗೆದ್ದು ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಕಲ್ಯಾಣ್‌ ಸಿಂಗ್‌ ಸರ್ಕಾರಕ್ಕೆ ಬಹುಮತ ಇರಲಿಲ್ಲ. ಸ್ಥಳೀಯ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿತ್ತು. ಈ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ಸೀತಾರಾಮ್‌ ಕೇಸರಿ ಅವರು ದೇವೇಗೌಡರ ಮೇಲೆ ಒತ್ತಡ ಹಾಕುತ್ತಿದ್ದರು.
ರಾಜೀವ್‌ ಗಾಂಧಿ ಮತ್ತು ಪಿ ವಿ ನರಸಿಂಹ ರಾವ್‌ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ನಿಷ್ಕ್ರಿಯಗೊಳಿಸಬೇಕು ಎಂದೂ ಕಾಂಗ್ರೆಸ್‌ ದೇವೇಗೌಡರ ಮೇಲೆ ಒತ್ತಡ ಹಾಕಲಾರಂಭಿಸಿತು.

ಬೆಂಬಲ ವಾಪಸ್‌ ಪಡೆದ ಕಾಂಗ್ರೆಸ್‌

ಕಾಂಗ್ರೆಸ್‌ನ ಒತ್ತಡಕ್ಕೆ ದೇವೇಗೌಡರು ಮಣಿಯಲಿಲ್ಲ. ಹಾಗಾಗಿ ದೇವೇಗೌಡ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕಾಂಗ್ರೆಸ್‌ 1997ರ ಮಾರ್ಚ್‌ 30ರಂದು ವಾಪಸ್‌ ಪಡೆಯಿತು. ದೇವೇಗೌಡರು ಸಂಸತ್‌ನಲ್ಲಿ 1997ರ ಮಾರ್ಚ್‌ 30ರಂದು ಏಪ್ರಿಲ್‌ 11ರಂದು ವಿಶ್ವಾಸಮತ ಯಾಚನೆ ಮಾಡಬೇಕಾಯಿತು. ಆದರೆ 545 ಸದಸ್ಯ ಬಲದ ಸಂಸತ್‌ನಲ್ಲಿ 158 ಸಂಸದರು ಮಾತ್ರ ದೇವೇಗೌಡ ಸರ್ಕಾರದ ಪರ ಮತ ಚಲಾಯಿಸಿದರು. ಅನಿವಾರ್ಯವಾಗಿ ದೇವೇಗೌಡರು 1997ರ ಏಪ್ರಿಲ್‌ 21ರಂದು ರಾಜೀನಾಮೆ ನೀಡಿದರು. ಕೇವಲ ಹತ್ತು ತಿಂಗಳಲ್ಲೇ ದೇವೇಗೌಡರ ಪ್ರಧಾನಿ ಆಳ್ವಿಕೆ ಕೊನೆಗೊಂಡಿತು.

IK Gujral

ಐ ಕೆ ಗುಜ್ರಾಲ್‌ ಪ್ರಧಾನಿಯಾದರು

ಕಾಂಗ್ರೆಸ್‌ ಮರ್ಜಿಯಲ್ಲಿ ಅಧಿಕಾರ ಮುಂದುವರಿಸುವುದಕ್ಕಿಂತ, ಸಂಸತ್‌ ವಿಸರ್ಜಿಸಿ ಮತ್ತೆ ಚುನಾವಣೆಯ ಮೊರೆ ಹೋಗುವುದೇ ಸೂಕ್ತ ಎಂದು ದೇವೇಗೌಡರು ಅಭಿಪ್ರಾಯಪಟ್ಟರು. ಆದರೆ ಅದೇ ಹೊತ್ತಿಗೆ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳು, ತಕ್ಷಣ ಚುನಾವಣೆ ನಡೆದರೆ ಬಿಜೆಪಿ ಬಹುಮತ ಗಳಿಸುತ್ತದೆ, ಕಾಂಗ್ರೆಸ್‌ಗೆ ಮತ್ತಷ್ಟು ಧೂಳೀಪಟವಾಗುತ್ತದೆ ಎಂದು ಸಾರಿದವು. ಹಾಗಾಗಿ ಕಾಂಗ್ರೆಸ್‌ಗೆ ಚುನಾವಣೆಗೆ ಹೋಗಲು ಹಿಂಜರಿಯಿತು. ಸಂಯುಕ್ತ ರಂಗದ ಮತ್ತೊಬ್ಬ ನಾಯಕನನ್ನು ಪ್ರಧಾನಿ ಪಟ್ಟಕ್ಕೇರಿಸುವ ನಿಟ್ಟಿನಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಸಿತು. ಆಗ ವಿದೇಶಾಂಗ ಸಚಿವರಾಗಿದ್ದ ಇಂದರ್‌ ಕುಮಾರ್‌ ಗುಜ್ರಾಲ್‌ ಹೆಸರು ಮುಂಚೂಣಿಗೆ ಬಂತು. ಗುಜ್ರಾಲ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿತು. 1997ರ ಏಪ್ರಿಲ್‌ 21ರಂದು ಇಂದರ್‌ ಕುಮಾರ್‌ ಕುಜ್ರಾಲ್‌ (ಐ ಕೆ ಗುಜ್ರಾಲ್‌) ಅವರು ಭಾರತದ 12ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇದನ್ನೂ ಓದಿ: Parliament Flashback: ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಎಫೆಕ್ಟ್‌; 1977ರಲ್ಲಿ ಧೂಳಿಪಟವಾಗಿದ್ದ ಕಾಂಗ್ರೆಸ್‌!

1984ರ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್‌ ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್‌!

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Parliament Flashback) ಬಿಜೆಪಿ 400ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು (Lok Sabha Election 2024) ಘೋಷಿಸಿದ್ದಾರೆ. ಇಷ್ಟೊಂದು ಸಂಖ್ಯೆಯ ಸೀಟುಗಳನ್ನು 1984ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು.
1984ರಲ್ಲಿ ಇಂದಿರಾ ಗಾಂಧಿಯವರು ಖಲಿಸ್ತಾನಿ ಉಗ್ರರ ಸಂಚಿಗೆ ಬಲಿಯಾದರು. ಇನ್ನೂ ಒಂದು ವರ್ಷದ ಅವಧಿ ಬಾಕಿ ಇದ್ದರೂ ಇಂದಿರಾ ಹತ್ಯೆ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್‌ ಮೊದಲೇ ಚುನಾವಣೆಯ ಮೊರೆ ಹೋಯಿತು. ಆ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಒಟ್ಟು 516 ಲೋಕಸಭೆ ಸ್ಥಾನಗಳಲ್ಲಿ 404 ಸೀಟುಗಳನ್ನು ಬಾಚಿಕೊಂಡಿತು! ಇದು ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್‌ನ ಅತಿ ಹೆಚ್ಚು ಸೀಟು ಗಳಿಕೆಯ ದಾಖಲೆ. ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣ ಆ ಚುನಾವಣೆಯಲ್ಲಿ ಶೇ. 49.10 ಇತ್ತು. ಪ್ರತಿಪಕ್ಷಗಳೆಲ್ಲ ಧೂಳೀಪಟವಾದವು. 30 ಸ್ಥಾನ ಗಳಿಸಿದ ತೆಲುಗು ದೇಶಂ ಪಾರ್ಟಿ ಎರಡನೇ ಅತಿದೊಡ್ಡ ಪಕ್ಷದ ಸ್ಥಾನ ಪಡೆಯಿತು. ಸಿಪಿಐಎಂಗೆ 22 ಮತ್ತು ಎಐಎಡಿಎಂಕೆಗೆ 12 ಸೀಟುಗಳು ಲಭಿಸಿದವು.

ಬಿಜೆಪಿಗೆ ಎರಡೇ ಸೀಟು

ಬಿಜೆಪಿ ಗೆದ್ದಿದ್ದು ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಮಾತ್ರ! ಗುಜರಾತ್‌ನ ಮೆಹಸಾನಾದಿಂದ ಡಾ. ಎ ಕೆ ಪಟೇಲ್‌ ಮತ್ತು ಆಂಧ್ರಪ್ರದೇಶದ ಹನಮಕೊಂಡ ಕ್ಷೇತ್ರದಿಂದ ಜಂಗಾ ರೆಡ್ಡಿ ಬಿಜೆಪಿ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದರು. ಬಿಜೆಪಿ ಮೇರು ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರೇ ತಮ್ಮ ಹುಟ್ಟೂರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲೇ ಮಾಧವ್‌ ರಾವ್‌ ಸಿಂಧಿಯಾ ಎದುರು ಹೀನಾಯವಾಗಿ ಸೋತು ಹೋದರು. ಕಾಂಗ್ರೆಸ್‌ ಪಾಲಿಗೆ ಇದು ಸ್ಮರಣೀಯ ಲೋಕಸಭಾ ಚುನಾವಣೆಯಾಗಿ ದಾಖಲಾಯಿತು.

ಇದನ್ನೂ ಓದಿ: Parliament Flashback: ಭ್ರಷ್ಟಾಚಾರಕ್ಕೆ ಜನಾಕ್ರೋಶ; 1989ರ ಲೋಕಸಭೆಯಲ್ಲಿ 404ರಿಂದ 197ಕ್ಕೆ ಇಳಿದಿದ್ದ ಕಾಂಗ್ರೆಸ್‌ ಸೀಟುಗಳು!

Continue Reading
Advertisement
Actor Dwarakish
ಸಿನಿಮಾ3 mins ago

‌Actor Dwarakish: ಚಿತ್ರರಂಗದಲ್ಲಿ ಮಾತ್ರವಲ್ಲ ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದ ದ್ವಾರಕೀಶ್!

Uttarakaanda Movie
ಸ್ಯಾಂಡಲ್ ವುಡ್9 mins ago

Uttarakaanda Movie: ಶಿವಣ್ಣ- ಧನಂಜಯ್‌ ಅಭಿನಯದ ʼಉತ್ತರಕಾಂಡʼ ಚಿತ್ರಕ್ಕೆ ಚೈತ್ರಾ ಆಚಾರ್‌ ಎಂಟ್ರಿ

IND vs BNG
ಕ್ರೀಡೆ31 mins ago

IND vs BNG: ಬಾಂಗ್ಲಾ ಟಿ20 ಸರಣಿಗೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್

Aditya Srivastava
ಪ್ರಮುಖ ಸುದ್ದಿ40 mins ago

UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

Robbery Case In Bengaluru
ಬೆಂಗಳೂರು50 mins ago

Robbery case : ಎಎಸ್‌ಐ ಬೈಕ್‌ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್‌ ಗ್ಯಾಂಗ್‌ ಅರೆಸ್ಟ್‌

Arun Yogiraj
ಕಿರುತೆರೆ51 mins ago

Arun Yogiraj: ಕಿರುತೆರೆಗೆ ಕಾಲಿಟ್ಟ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌; ಯಾವ ಕಾರ್ಯಕ್ರಮ?

UPSC Result 2024:
ಪ್ರಮುಖ ಸುದ್ದಿ1 hour ago

UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

mohammed shami
ಕ್ರೀಡೆ1 hour ago

Mohammed Shami: ‘ಕ್ರಿಕೆಟ್​ಗೆ ಮರಳುವ ಹಸಿವು ಹೆಚ್ಚಾಗಿದೆ’; ಚೇತರಿಕೆಯ ಅಪ್‌ಡೇಟ್‌ ನೀಡಿದ ಶಮಿ

lok sabha Election 2024 digital QR code voter slip
Lok Sabha Election 20241 hour ago

Lok Sabha Election 2024: ಬೆಂಗಳೂರಿನಲ್ಲಿ ದೊರೆಯಲಿದೆ ಕ್ಯುಆರ್‌ ಕೋಡ್ ಸಹಿತ ವೋಟರ್‌ ಸ್ಲಿಪ್‌:‌ ಏನಿದರ ಉಪಯೋಗ?

Silence 2
ಸಿನಿಮಾ2 hours ago

Silence 2 review: ಕುತೂಹಲ ಕೆರಳಿಸುವ ಕತೆ; ಮನೋಜ್ ಬಾಜಪೇಯಿ ಮನೋಜ್ಞ ಅಭಿನಯ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ11 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌