ಬೆಂಗಳೂರು: ನೀವೇನಾದರೂ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದೀರಾ? ಅದರಲ್ಲೂ ಯಾರೋ ಹೇಳಿದ್ದು ಕೇಳಿದ್ದನ್ನು ಯೋಚನೆ ಮಾಡದೆ ಪೋಸ್ಟ್ (Social Media Post) ಮಾಡುತ್ತಿದ್ದೀರಾ? ಹಾಗಾದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಯಾವುದೋ ಒಂದು ಪೋಸ್ಟ್ ಬಂತು, ನನಗೂ ಹೌದೆನ್ನಿಸಿತು. ಹಾಗಾಗಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ ಎಂದರೆ ಇನ್ನು ಪರಿಸ್ಥಿತಿ ನೆಟ್ಟಗಿರಲ್ಲ. ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಸೈಬರ್ ಕ್ರೈಂ (Cyber Crime) ಎಂದು ಪರಿಗಣಿಸಲಾಗುತ್ತದೆ. ನೀವು ಪೊಲೀಸ್ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ!
ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಗುರುವಾರ (ಜೂನ್ 22) ನಗರ ಪೊಲೀಸ್ ಆಯುಕ್ತರು ಸೇರಿದಂತೆ ಬೆಂಗಳೂರಿನ ಎಲ್ಲ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Video Viral: 4 ನೈಂಟಿ ಕೊಡುವೆನೆಂದು ಹಣ ಪಡೆದು ಎರಡೇ ಕೊಟ್ಟವನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಟ್ಟಿದ ನಾರಿಯರು!
ದೂರು ದಾಖಲಿಸಿಕೊಳ್ಳದಿದ್ದರೆ ಕ್ರಮ ಗ್ಯಾರಂಟಿ!
ಸೋಷಿಯಲ್ ಮೀಡಿಯಾ ವಿಂಗ್ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ಸೂಚನೆ ನೀಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರನ್ನು ಪತ್ತೆ ಹಚ್ಚಬೇಕು. ನಕಲಿ ಅಕೌಂಟ್‌ಗಳನ್ನು ತೆರೆದು ಸರ್ಕಾರದ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಯತ್ನ ನಡೆಸಲಾಗುತ್ತಿದೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ದೂರು ದಾಖಲಿಸಿಕೊಳ್ಳದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಅಲೋಕ್ ಮೋಹನ್ ನೀಡಿದ್ದಾರೆ.
ಅಪರಾಧ ಪ್ರಕರಣಗಳನ್ನು ತಡೆಯಲು ಡಿಸಿಪಿಗಳು ಡೇ ಬೀಟ್ ಹಾಗೂ ನೈಟ್ ಬೀಟ್ ವ್ಯವಸ್ಥೆಯನ್ನು ಸಮರ್ಪಕವಾಗಿ ಪಾಲನೆ ಮಾಡಬೇಕು. ಹಿರಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಠಾಣೆಯಲ್ಲಿ ಹಾಕಿರಬೇಕು. ಹಿರಿಯ ಅಧಿಕಾರಿಗಳು ಕೇವಲ ಎಸಿಪಿ ಇನ್ಸ್‌ಪೆಕ್ಟರ್‌ಗಳನ್ನು ಮಾತ್ರವಲ್ಲದೆ ಠಾಣೆಗಳಿಗೆ ಭೇಟಿ ಕೊಟ್ಟು ಸಾರ್ವಜನಿಕರಿಂದ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯಬೇಕು. ನಗರದಲ್ಲಿ ರೌಡಿಸಂ ಕಂಟ್ರೋಲ್ ಆಗಬೇಕು. ಆ್ಯಕ್ಟಿವ್ ಇರುವ ರೌಡಿಗಳ ಮೇಲೆ ನಿಗಾ ಇಟ್ಟು ಸಿಆರ್‌ಪಿಸಿ 110 ಸೆಕ್ಷನ್ ಅಡಿ ಬಾಂಡ್ ಬರೆಸಿ ವಾರ್ನ್ ಮಾಡಬೇಕು ಎಂಬ ಸೂಚನೆಯನ್ನೂ ಅಲೋಕ್ ಮೋಹನ್ ನೀಡಿದ್ದಾರೆ.
ಇದನ್ನೂ ಓದಿ: Fact Check Unit: ಫೇಕ್ ನ್ಯೂಸ್ ಮೂಲವನ್ನು ಬೇರು ಸಮೇತ ಕತ್ತರಿಸಿ: ಸಿದ್ದರಾಮಯ್ಯ
ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೇಲೆ ನಿಗಾ
ನಗರದಲ್ಲಿ ಸದ್ಯ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಗಳೆಷ್ಟು? ಕೇಸ್ ದಾಖಲಾಗಿ ಚಾರ್ಜ್‌ಶೀಟ್ ಆಗದೇ ಪೆಂಡಿಂಗ್ ಇರುವ ಕೇಸ್‌ಗಳ ಸಂಖ್ಯೆ ಎಷ್ಟು? ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸೈಬರ್ ಕ್ರೈಂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವಂತಹ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೇಲೆ ನಿಗಾ ಇಡಲು ಅಲೋಕ್ ಮೋಹನ್ ಸೂಚಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಗುರುವಾರ (ಜೂನ್ 22) ನಗರ ಪೊಲೀಸ್ ಆಯುಕ್ತರು ಸೇರಿದಂತೆ ಬೆಂಗಳೂರಿನ ಎಲ್ಲ ವಿಭಾಗದ ಡಿಸಿಪಿಗಳನ್ನು ಒಳಗೊಂಡಂತೆ ಸಭೆ ನಡೆಸಿದರು. ಈ ಸಭೆಯಲ್ಲಿ ಸಿಟಿ ಕಮಿಷನರ್ ದಯಾನಂದ್, ಅಡಿಷನಲ್ ಕಮಿಷನರ್‌ಗಳಾದ ಸತೀಶ್ ಕುಮಾರ್, ರಮಣ್‌ಗುಪ್ತಾ, ಸಿಸಿಬಿ ಜಾಯಿಂಟ್ ಕಮಿಷನರ್ ಡಾ.ಎಸ್.ಡಿ. ಶರಣಪ್ಪ, ಟ್ರಾಫಿಕ್ ಕಮಿಷನರ್ ಎಂ.ಎನ್. ಅನುಚೇತ್ ಸೇರಿ ನಗರದ ಎಲ್ಲ ವಿಭಾಗದ ಡಿಸಿಪಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: Free Bus Service: ಸೀಟಿಲ್ಲ ಎಂದು ಬಸ್ ನಿಲ್ಲಿಸದೇ ಹೋಗಿದ್ದ ಕಂಡಕ್ಟರ್ ಮೇಲೆ ಸಿಟ್ಟಲ್ಲಿ ಹಲ್ಲೆ; ನಾಲ್ವರ ಸೆರೆ
ಕಳೆದ ಜೂನ್ 25 ರಂದು ಮೊದಲ ಬಾರಿಗೆ ಬೆಂಗಳೂರು ಸಿಟಿ ಹೈಯರ್ ಪೊಲೀಸ್ ಆಫೀಸರ್ಸ್ ಜತೆ ಮೀಟಿಂಗ್ ಮಾಡಿದ್ದ ಡಿಜಿ ಅಲೋಕ್ ಮೋಹನ್, ಈಗ ಗುರುವಾರ ಎರಡನೇ ಬಾರಿಗೆ ಸಭೆ ನಡೆಸಿ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.