Site icon Vistara News

Police viral video: ಫುಲ್ ಟೈಟ್ ಆಗಿ ಬೈಕ್ ಎತ್ತೋಕೆ ಪೊಲೀಸಪ್ಪ ಒದ್ದಾಟ! ವಿಡಿಯೊ ನೋಡಿ

Police viral video

ಬೆಂಗಳೂರು: ರಾತ್ರಿ ಕಂಠಪೂರ್ತಿ ಕುಡಿದ ಹಿನ್ನೆಲೆಯಲ್ಲಿ ಬೈಕ್ ಎತ್ತಲು ಪೊಲೀಸ್‌ ಸಿಬ್ಬಂದಿಯೊಬ್ಬರು ಒದ್ದಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಕುಡಿತ ಮತ್ತಿನಲ್ಲಿ ಬೈಕ್‌ನಿಂದ ಕೆಳಗೆ ಬಿದ್ದಿರುವ ಪೊಲೀಸ್‌, ಮೇಲೇಳಲು ಸಾಧ್ಯವಾಗದೆ ಒದ್ದಾಡಿದ್ದಾರೆ. ಪೊಲೀಸಪ್ಪ ನಶೆಯಲ್ಲಿ ತೇಲಾಡುತ್ತಿದ್ದ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Police viral video) ಆಗಿದೆ.

ಪೀಣ್ಯ ಬಳಿ ಪೊಲೀಸ್ ಸಿಬ್ಬಂದಿ ಎಣ್ಣೆ ಏಟಿನಲ್ಲಿ ಪರದಾಡಿರುವುದು ನಡೆದಿದೆ. ತನ್ನ ಬೈಕ್ ಅನ್ನು ಎತ್ತಲೂ ಆಗದಷ್ಟು ನಶೆಯಲ್ಲಿ ತೇಲಾಡುತ್ತಿದ್ದ ಪೊಲೀಸಪ್ಪನ ಕಂಡು ಸ್ಥಳೀಯರು ವಿಡಿಯೊ ಮಾಡಿದ್ದಾರೆ. ಯಾವ ಠಾಣೆ ಸಿಬ್ಬಂದಿ ಎಂಬುವುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಸದ್ಯ ವಿಡಿಯೊ ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ.

ವೇಗವಾಗಿ ಬಂದ ಟ್ರಕ್‌ ಬೈಕ್‌ಗಳ ಮೇಲೆ ಪಲ್ಟಿ; ಪವಾಡಸದೃಶ ಪಾರು! ವಿಡಿಯೊ ನೋಡಿ


ಗುಜರಾತ್‌ನ ವಡೋದರ ನಗರದಲ್ಲಿ ವೇಗವಾಗಿ ಬರುತ್ತಿದ್ದ ಅಗ್ನಿಶಾಮಕ ದಳದ ಟ್ರಕ್ ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಟ್ರಕ್‌ನ ಚಾಲಕ ಪರಾರಿ (Hit and Run Case)ಯಾಗಿದ್ದಾನೆ. ವಡೋದರಾದ ದಭೋಯ್ ರಸ್ತೆಯಲ್ಲಿ ಜುಲೈ 19ರಂದು ಈ ಅಪಘಾತ ಸಂಭವಿಸಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಗ್ನಿಶಾಮಕ ದಳದ ಚಾಲಕ ಮತ್ತು ಸಬ್ ಆಫೀಸರ್ ಬೆಂಕಿಯ ಅಪಘಾತದ ಬಗ್ಗೆ ಮಾಹಿತಿ ಪಡೆದು ನಂತರ ಗಜ್ರವಾಡಿಯಿಂದ ಹೊರಟಿದ್ದರು. ದಭೋಯ್ ರಸ್ತೆಯ ಗಣೇಶನಗರದ ಬಳಿ ಚಾಲಕ ತಿರುವು ತೆಗೆದುಕೊಂಡಾಗ ಈ ಅಪಘಾತ ಸಂಭವಿಸಿದೆ. ಅತಿಯಾದ ವೇಗದಲ್ಲಿದ್ದ ಕಾರಣ ಟ್ರಕ್‌ನ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಟ್ರಕ್ ಪಲ್ಟಿಯಾಗಿ ಅಲ್ಲಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಕೂಡಲೇ ಟ್ರಕ್‌ನ ಚಾಲಕ ಕೃಷ್ಣ ಪಟೇಲ್ ಅಪಘಾತದ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಬೈಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಇದೇರೀತಿಯ ಅಪಘಾತದ ಘಟನೆ ಮೇ 29ರಂದು ನಡೆದಿತ್ತು. ವಡೋದರಾ-ಹಲೋಲ್ ಹೆದ್ದಾರಿಯಲ್ಲಿ ಬೊಲೆರೊ ಪಿಕಪ್ ವ್ಯಾನ್ ಪಲ್ಟಿಯಾಗಿ ಕೊತಂಬಿ ಗ್ರಾಮದ ಬಳಿ ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಬೊಲೆರೊ ಚಾಲಕ ಸ್ಟೀರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಕ್ರಿಕೆಟ್ ಕ್ರೀಡಾಂಗಣದ ಬಳಿ ಪಲ್ಟಿಯಾಗಿದೆ.

ಇದನ್ನೂ ಓದಿ: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

ಜರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೃಪಾಲ್ಸಿನ್ಹ್ ಝಾಲಾ, ಈ ದುರಂತದಲ್ಲಿ ಇಬ್ಬರು ಮಕ್ಕಳು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. ನಾವು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಸಮಸ್ಯೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದರು.

Exit mobile version