Hit and Run Case: ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆ ದಾಟಿದರೆ ಏನಾಗುತ್ತದೆ ನೋಡಿ; ಬೆಚ್ಚಿ ಬೀಳಿಸುವ ವಿಡಿಯೊ - Vistara News

Latest

Hit and Run Case: ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆ ದಾಟಿದರೆ ಏನಾಗುತ್ತದೆ ನೋಡಿ; ಬೆಚ್ಚಿ ಬೀಳಿಸುವ ವಿಡಿಯೊ

Hit and Run Case: ರಸ್ತೆ ದಾಟುವಾಗ ನೋಡಿಕೊಂಡು ರಸ್ತೆ ದಾಟಿ, ಇನ್ನು ಫೋನಿನಲ್ಲಿ ಮಾತನಾಡುತ್ತಾ ರಸ್ತೆ ದಾಟಬೇಡಿ ಎಂಬಿತ್ಯಾದಿ ಎಚ್ಚರಿಕೆ ನೀಡಿದರೂ ಜನ ಅದನ್ನು ಮರೆತು ತಮ್ಮ ಪಾಡಿಗೆ ತಾವು ಹೋಗುತ್ತಾರೆ. ಇದರಿಂದ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇಂತಹದ್ದೇ ಒಂದು ಘಟನೆ ಈಗ ಹೈದ್ರಾಬಾದ್‌ನಲ್ಲಿ. ಅಣ್ಣೋಜಿಗುಡದ ಆರ್‌ಜಿಕೆ ಕಾಲೋನಿ ನಿವಾಸಿ ಬೊಡ್ಡು ಗಿರಿ ಬಾಬು ಅವರು ಘಾಟ್ಕೇಸರ್ ಗ್ರಾಮದ ಕಡೆಗೆ ಹೋಗಲು ಎನ್ಟಿಪಿಸಿ ಎಕ್ಸ್ ರಸ್ತೆಯ ಬಳಿ ಎನ್ಎಚ್ -163 ರಸ್ತೆಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.

VISTARANEWS.COM


on

Hit and Run Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್: ರಸ್ತೆ ದಾಟುವಾಗ ಕೆಲವರು ಪೋನಿನಲ್ಲಿ ಮಾತನಾಡುವುದರಲ್ಲೇ ನಿರತರಾಗಿರುತ್ತಾರೆ. ಇದರಿಂದ ಅವರಿಗೆ ರಸ್ತೆಯಲ್ಲಿ ಚಲಿಸುವ ವಾಹನದ ಬಗ್ಗೆ ಗಮನವಿರುವುದಿಲ್ಲ. ಹಾಗಾಗಿ ಇದರಿಂದ ಅನೇಕ ಅವಗಢಗಳು ಸಂಭವಿಸುತ್ತದೆ. ಅಂತಹದೊಂದು ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಬಹು ಎತ್ತರಕ್ಕೆ ಎಗರಿ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಜುಲೈ 14ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case) ಆಗಿದೆ.

ಅಣ್ಣೋಜಿಗುಡದ ಆರ್‌ಜಿಕೆ ಕಾಲೋನಿ ನಿವಾಸಿ ಬೊಡ್ಡು ಗಿರಿ ಬಾಬು (38) ಕಾರು ಅಪಘಾತದಿಂದ ಮೃತಪಟ್ಟ ವ್ಯಕ್ತಿ. ಜುಲೈ 14ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಾಟ್ಕೇಸರ್ ಗ್ರಾಮದ ಕಡೆಗೆ ಹೋಗಲು ಎನ್‍ಟಿಪಿಸಿ ಎಕ್ಸ್ ರಸ್ತೆಯ ಬಳಿ ಎನ್ಎಚ್ -163 ರಸ್ತೆಯನ್ನು ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ಈ ಅಪಘಾತವು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು @sudhakarudumula ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ತಮ್ಮ ಪೋಸ್ಟ್ ನಲ್ಲಿ, ಮೊಬೈಲ್ ಫೋನ್‍ನಲ್ಲಿ ಮಾತನಾಡುವಾಗ ರಸ್ತೆ ದಾಟುವ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಘಟನೆಯ ಪರಿಣಾಮ ಅಪಘಾತಕ್ಕೀಡಾದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ವಜ್ರಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ನಂತರ ಗಾಯಾಳುಗಳನ್ನು ಉತ್ತಮ ಚಿಕಿತ್ಸೆಗಾಗಿ ಕಾಮಿನೇನಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನಪ್ಪಿರುವುದಾಗಿ ತಿಳಿದುಬಂದಿದೆ. ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದ ಕಾರಣ ಆತನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಂಬಾನಿ ಮದುವೆ ಸಮಾರಂಭದೊಳಗೆ ನುಸುಳಿದ್ದ ಇಬ್ಬರು ʼನಕಲಿ ಅತಿಥಿʼಗಳ ಬಂಧನ!

ಘಟನೆಯ ವೇಳೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಚರಾಮ್ ಐಟಿ ಕಾರಿಡಾರ್ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಚಾಲಕ ಹಾಗೂ ಆತನ ಕೆಂಪು ಬಣ್ಣದ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಈ ಘಟನೆ ಹೈದರಾಬಾದ್‍ನಲ್ಲಿ ಸಂಭವಿಸಿದ ಎರಡನೇ ಗಂಭೀರವಾದ ಅಪಘಾತ ಇದಾಗಿದೆ. ಇದಕ್ಕೂ ಮುನ್ನ ಜುಲೈ 13 ರಂದು ಗಚಿಬೌಲಿಯಲ್ಲಿ ಬೈಕ್ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ 26 ವರ್ಷದ ಫುಡ್ ಡೆಲಿವರಿ ಬಾಯ್ ಸಾವನ್ನಪ್ಪಿದ್ದ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Anant Radhika Wedding: ನಮ್ಮಿಂದ ಏನಾದರು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ; ನೀತಾ ಅಂಬಾನಿ ವಿನಮ್ರ ಮನವಿ!

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ (Anant Radhika Wedding) ಪ್ರಯುಕ್ತ ನೀತಾ ಅಂಬಾನಿಯವರು ಪಾಪರಾಜಿಗಳಿಗೆ ಧನ್ಯವಾದ ಹೇಳಲು ಮತ್ತು ಸೋಮವಾರದ ವಿಶೇಷ ಆಚರಣೆಗೆ ಅವರನ್ನು ಸ್ವಾಗತಿಸಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್‌ಗಳು ಶ್ಲಾಘಿಸಿದ್ದಾರೆ. ನೀತಾ ಅಂಬಾನಿ ಅವರ ಹೇಳಿಕೆಯ ವಿಡಿಯೊ ಇಲ್ಲಿದೆ.

VISTARANEWS.COM


on

By

Anant Radhika Wedding
Koo

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ (Anant Radhika Wedding) ನೀತಾ ಅಂಬಾನಿ (nita ambani) ವೈಯಕ್ತಿಕವಾಗಿ (ಮಾಧ್ಯಮ ಛಾಯಾಗ್ರಾಹಕರು) ಪಾಪರಾಜಿಗಳನ್ನು (paparazzi) ಆಹ್ವಾನಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಇದು ಈಗ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಪ್ರಯುಕ್ತ ನಡೆದ ಮಂಗಲ್ ಉತ್ಸವ ಅಥವಾ ಅದ್ಧೂರಿ ವಿವಾಹದ ಆರತಕ್ಷತೆಯಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಎ.ಆರ್. ರೆಹಮಾನ್ ಮತ್ತು ಶ್ರೇಯಾ ಘೋಷಾಲ್ ಅವರಿಬ್ಬರ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಧೀರೂಬಾಯಿ ಅಂಬಾನಿಯವರ ಜೀವನವನ್ನು ಆಧರಿಸಿದ ಸಂಗೀತ ಕಾರ್ಯಕ್ರಮದ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ನಡುವೆ ನೀತಾ ಅಂಬಾನಿಯವರು ಪಾಪರಾಜಿಗಳಿಗೆ ಧನ್ಯವಾದ ಹೇಳಲು ಮತ್ತು ಸೋಮವಾರದ ವಿಶೇಷ ಆಚರಣೆಗೆ ಅವರನ್ನು ಸ್ವಾಗತಿಸಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್‌ಗಳು ಶ್ಲಾಘಿಸಿದ್ದಾರೆ.


ಈ ವಿಡಿಯೋದಲ್ಲಿ ನೀತಾ ಅಂಬಾನಿ, ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಗೆ ಧನ್ಯವಾದಗಳು. ಯಾವುದಾದರೂ ತಪ್ಪಾಗಿದ್ದರೆ ದಯವಿಟ್ಟು ನಮ್ಮನ್ನು ಕ್ಷಮಿಸಿ. ಯಾಕೆಂದರೆ ನಮ್ಮದು ಈಗ ಮದುವೆ ನಡೆಯುತ್ತಿರುವ ಮನೆ. ನಾಳೆ ನಮ್ಮ ಅತಿಥಿಗಳಾಗಿ ಬನ್ನಿ, ನೀವೆಲ್ಲರೂ ಆಹ್ವಾನವನ್ನು ಸ್ವೀಕರಿಸಿದ್ದೀರಿ. ನಮ್ಮ ಅತಿಥಿಗಳಾಗಿ ನಾಳೆ ನಿಮ್ಮನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ. ದಯವಿಟ್ಟು ನಿಮ್ಮ ಕುಟುಂಬಗಳೊಂದಿಗೆ ಬನ್ನಿ ಎಂದು ಪಾಪರಾಜಿಗಳನ್ನು ಆಮಂತ್ರಿಸಿದರು.

ಇದನ್ನೂ ಓದಿ: Anant Ambani Wedding: ಕೌಟುಂಬಿಕ ಮುನಿಸು ಮರೆತು ವರನೊಂದಿಗೆ ಜತೆಯಾಗಿ ಹೆಜ್ಜೆ ಹಾಕಿದ ಮುಖೇಶ್ ಅಂಬಾನಿ-ಅನಿಲ್ ಅಂಬಾನಿ

ಈ ಕಾರ್ಯಕ್ರಮದ ಮೂಲಕ ಅವರು ಪಾಪರಾಜಿಗಳ ಮನ ಗೆದ್ದಿರುವುದು ಮಾತ್ರವಲ್ಲ ಅವರ ವಿನಮ್ರಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹದ ವಿಧಿವಿಧಾನಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಮಾರಂಭಕ್ಕೆ ಸಾಕ್ಷಿಯಾಗಲು ಪ್ರಪಂಚದಾದ್ಯಂತದ ಹಲವಾರು ಅತಿಥಿಗಳು ಸಾಕ್ಷಿಯಾಗಿದ್ದರು. ಕಿಮ್, ಕ್ಲೋಯ್ ಕಾರ್ಡಶಿಯಾನ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಮತ್ತು ಜಾನ್ ಸೆನಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ರಾಜಕಾರಣಿಗಳು ಹಾಗೂ ಖ್ಯಾತನಾಮರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಆಗಮಿಸಿದ್ದರು.

Continue Reading

Latest

Monkey Attack: ಹುಡುಗಿಯ ಮೇಲೆ ಏಕಾಏಕಿ ದಾಳಿ ಮಾಡಿದ ಕೋತಿ; ವಿಡಿಯೊ ಇದೆ

Monkey Attack: ನೆಲಮಾಳಿಗೆಯಲ್ಲಿ ನಡೆದು ಬರುತ್ತಿದ್ದ ಹುಡುಗಿಯ ಮೇಲೆ ಹಿಂದಿನಿಂದ ಬಂದ ಕೋತಿಯೊಂದು ದಾಳಿ ನಡೆಸಿದೆ. ಈ ಘಟನೆ ಜುಲೈ 11ರಂದು ನಡೆದಿದೆ. ಆದರೆ ಸ್ಥಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ. ಹುಡುಗಿಗೆ ಯಾವುದೇ ಗಂಭೀರ ಹಾನಿಯಾಗಲಿಲ್ಲ, ಆದರೂ ಅವಳು ಕೋತಿಗೆ ಹೆದರಿ ನಡಗುತ್ತಿರುವುದು ಕಂಡುಬಂದಿದೆ.

VISTARANEWS.COM


on

Monkey Attack
Koo

ಇತ್ತೀಚಿನ ದಿನಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಈ ಕೋತಿಗಳು ಎಲ್ಲೆಂದರಲ್ಲಿ ಜನರ ಮೇಲೆ ದಾಳಿ ಮಾಡುತ್ತಿವೆ. ಇತ್ತೀಚೆಗಷ್ಟೇ ಮಥುರಾದಲ್ಲಿ 5 ವರ್ಷದ ಬಾಲಕನ ಮೇಲೆ ಕೋತಿಗಳು ದಾಳಿ ನಡೆಸಿದ್ದು, ಆ ವಿಡಿಯೊ ವೈರಲ್ ಆಗಿದೆ. ಅದೇ ರೀತಿ ಇದೀಗ ಕೋತಿಯೊಂದು ಹುಡುಗಿಯೊಬ್ಬಳ ಮೇಲೆ ದಾಳಿ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Monkey Attack) ಆಗಿದೆ. ಇದು ಜನರ ಕಳವಳಕ್ಕೆ ಕಾರಣವಾಗಿದೆ.

ನೆಲಮಾಳಿಗೆಯಲ್ಲಿ ನಡೆದು ಬರುತ್ತಿದ್ದ ಹುಡುಗಿಯ ಮೇಲೆ ಹಿಂದಿನಿಂದ ಬಂದ ಕೋತಿಯೊಂದು ದಾಳಿ ನಡೆಸಿದೆ. ಈ ಘಟನೆ ಜುಲೈ 11ರಂದು ನಡೆದಿದೆ. ಆದರೆ ಸ್ಥಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ.

ವಿಡಿಯೊದಲ್ಲಿ, ನೆಲಮಾಳಿಗೆಯಲ್ಲಿ ನಡೆದು ಬರುತ್ತಿದ್ದ ಹುಡುಗಿಯ ಬಳಿ ಬಂದ ಕೋತಿಯೊಂದು ಇದ್ದಕ್ಕಿದ್ದಂತೆ ಅವಳ ಮೇಲೆ ದಾಳಿ ಮಾಡಿದೆ. ಹುಡುಗಿಗೆ ತುಂಬಾ ಭಯವಾಗಿದೆ. ಅದೃಷ್ಟವಶಾತ್, ಹುಡುಗಿಗೆ ಯಾವುದೇ ಗಂಭೀರ ಹಾನಿಯಾಗಲಿಲ್ಲ, ಆದರೂ ಅವಳು ಕೋತಿಗೆ ಹೆದರಿ ನಡಗುತ್ತಿರುವುದು ಕಂಡುಬಂದಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್‍ನಲ್ಲಿ (ಈ ಹಿಂದೆ ಟ್ವಿಟರ್) ‘ಘರ್ ಕೆ ಕಾಲೇಶ್’ ಹ್ಯಾಂಡಲ್‍ನಲ್ಲಿ ಹಂಚಿಕೊಳ್ಳಲಾಗಿದೆ. “ನೆಲಮಾಳಿಗೆಯ ಪ್ರದೇಶದಲ್ಲಿ ದೊಡ್ಡ ಕೋತಿ ಹುಡುಗಿಯ ಮೇಲೆ ದಾಳಿ ಮಾಡಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊ 89 ಸಾವಿರ ವೀಕ್ಷಣೆಗಳನ್ನು ಗಳಿಸಿದೆ.

ಸ್ಥಳೀಯ ಅಧಿಕಾರಿಗಳು ಈ ಘಟನೆಗೆ ಪ್ರತಿಕ್ರಿಯಿಸಿದ್ದು, ರಸ್ತೆಯಲ್ಲಿರುವ ಪ್ರಾಣಿಗಳ ಬಗ್ಗೆ ಜನರು ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ಕೋತಿಗಳು, ಹೆಚ್ಚಾಗಿ ತಮಾಷೆಯಾಗಿ ಕಂಡರೂ, ಆಕ್ರಮಣ ಮಾಡಬಹುದು. ಒಂದು ವೇಳೆ ಅವುಗಳಿಗೆ ಹೆದರಿಸಿದೆ ಅಥವಾ ಅವುಗಳಿಗೆ ಹಸಿವಾದರೆ ಆಹಾರಕ್ಕಾಗಿ ಈ ರೀತಿ ದಾಳಿ ನಡೆಸಬಹುದು ಎಂದು ತಿಳಿಸಿದ್ದಾರೆ.

ಅಲ್ಲದೇ ವೈರಲ್ ಆದ ವಿಡಿಯೊದ ಬಗ್ಗೆ ಪ್ರಾಣಿಗಳಿಂದ ಸುರಕ್ಷಿತವಾಗಿರಲು ಮತ್ತು ಅಂತರ ಕಾಯ್ದುಕೊಳ್ಳುವ ಬಗ್ಗೆ ಆನ್‍ಲೈನ್‍ನಲ್ಲಿ ಚರ್ಚೆ ನಡೆಯುತ್ತಿದೆ. ಪ್ರಾಣಿಗಳು ದಾಳಿ ಮಾಡುವುದನ್ನು ತಪ್ಪಿಸಲು ಅವುಗಳಿಗೆ ಆಹಾರ ನೀಡುವುದು ಅಥವಾ ಅವುಗಳು ಹತ್ತಿರ ಬರುವುದನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಕೋತಿಯ ದಾಳಿಗೆ ಒಳಗಾದ ಹುಡುಗಿ ಚೇತರಿಸಿಕೊಳ್ಳುತ್ತಿದ್ದಾಳೆ ಮತ್ತು ಅವಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅವಳ ಕುಟುಂಬವು ತಿಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಆಸ್ತಿಗಾಗಿ ಅಕ್ಕನಿಗೆ ಕೊಡಲಿಯಿಂದ ಕೊಚ್ಚಿದ ತಮ್ಮ; ಭಯಾನಕ ವಿಡಿಯೊ

ಕೋತಿಗಳು ದಾಳಿ ನಡೆಸಿದ್ದು ಇದೇ ಮೊದಲಲ್ಲಾ. ಈ ಹಿಂದೆ ಮಥುರಾದ ವೃಂದಾವನದಲ್ಲಿ ಶುಕ್ರವಾರ ಜುಲೈ 12ರಂದು ಕಿಶನ್ ಎಂಬ 5 ವರ್ಷದ ಬಾಲಕ ಕೋತಿಗಳ ದಾಳಿಗೆ ಒಳಗಾಗಿದ್ದಾನೆ. ಮನೆಯಿಂದ ಹೊರಗೆ ಬಂದ ಬಾಲಕನ ಮೇಲೆ ಕೋತಿಗಳು ಒಟ್ಟಿಗೆ ಸೇರಿಕೊಂಡು ದಾಳಿ ಮಾಡಿ ಎಳೆದಾಡಿದ್ದವು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Continue Reading

ಕ್ರೀಡೆ

Paris Olympics 2024: ಮೊಟ್ಟಮೊದಲ ಒಲಿಂಪಿಕ್ಸ್ ಕ್ರೀಡಾಕೂಟದ 10 ಕುತೂಹಲಕರ ಸಂಗತಿಗಳಿವು

Paris Olympics 2024: ಒಲಿಂಪಿಕ್ ಕ್ರೀಡಾಕೂಟವನ್ನು ವಿಶ್ವದ ಅತಿದೊಡ್ಡ ಕ್ರೀಡಾಕೂಟವೆಂದು ಪರಿಗಣಿಸಲಾಗಿದೆ. ಒಲಿಂಪಿಕ್ಸ್ ಕಲ್ಪನೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 23 ರಂದು ವಿಶ್ವ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಮೊದಲ ಒಲಿಂಪಿಕ್ ಕ್ರೀಡಾಕೂಟ (First Olympic Games) ಹಲವು ಪ್ರಮುಖ ಸ್ಮರಣೀಯ ಘಟನೆಗಳಿಗೆ ಕಾರಣವಾಗಿತ್ತು.

VISTARANEWS.COM


on

By

Paris Olympics 2024
Koo

ಈ ಬಾರಿ ಪ್ಯಾರಿಸ್ ನಲ್ಲಿ ಜುಲೈ 26ರಿಂದ ಆಗಸ್ಟ್ 11ರವರೆಗೆ (Paris Olympics 2024) ಒಲಿಂಪಿಕ್ಸ್ ಕ್ರೀಡಾಕೂಟ (Olympic Games) ನಡೆಯಲಿದೆ. ಈಗಿನ ಒಲಿಂಪಿಕ್ಸ್ ಕ್ರೀಡಾಕೂಟವು ಸಾಕಷ್ಟು ಆಧುನೀಕರಣಗೊಂಡಿದೆ. ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವು ಅಥೆನ್ಸ್ ನಲ್ಲಿ (Athens) 1896ರ ಏಪ್ರಿಲ್‌ 6ರಿಂದ 15ರವರೆಗೆ ಆಯೋಜಿಸಲಾಗಿತ್ತು. ಮೊದಲ ಒಲಿಂಪಿಕ್ ಕ್ರೀಡಾಕೂಟ (First Olympic Games) ಹಲವು ಪ್ರಮುಖ ಸ್ಮರಣೀಯ ಘಟನೆಗಳಿಗೆ ಕಾರಣವಾಗಿತ್ತು.

ಒಲಿಂಪಿಕ್ ಕ್ರೀಡಾಕೂಟವನ್ನು ವಿಶ್ವದ ಅತಿದೊಡ್ಡ ಕ್ರೀಡಾಕೂಟವೆಂದು ಪರಿಗಣಿಸಲಾಗಿದೆ. ಒಲಿಂಪಿಕ್ಸ್ ಕಲ್ಪನೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 23ರಂದು ವಿಶ್ವ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಂಪಿಕ್ಸ್ ಉದ್ಘಾಟನೆ ಸ್ಪರ್ಧೆಗಳಲ್ಲಿ ಒಟ್ಟು 280 ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್ಸ್ ನಲ್ಲಿ 43 ಸ್ಪರ್ಧಿಗಳಿದ್ದರು.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಟಗಾರರು ಅನೇಕ ಸ್ಪರ್ಧಿಗಳನ್ನು ಸೋಲಿಸಿದ ಅನಂತರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗುತ್ತಾರೆ. ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವು ಆತಿಥೇಯ ರಾಷ್ಟ್ರದ ಅತಿದೊಡ್ಡ ಸಾಧನೆಯಾಗಿದೆ. ಅಮೆರಿಕ ಈವರೆಗೆ 9 ಬಾರಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದೆ. ಇದು ಇತರ ದೇಶಗಳಿಗಿಂತ ಹೆಚ್ಚಿನದಾಗಿದೆ. ಇದುವರೆಗೆ 6 ಒಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಿದ ಫ್ರಾನ್ಸ್ ಅನಂತರದ ಸ್ಥಾನದಲ್ಲಿದೆ.

ಮೊದಲ ಒಲಿಂಪಿಕ್ ಕ್ರೀಡಾಕೂಟದ ಹತ್ತು ಪ್ರಮುಖ ಸಂಗತಿಗಳು

1. ಮೊದಲ ಒಲಂಪಿಕ್ಸ್ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ 1896ರ ಏಪ್ರಿಲ್ 6ರಿಂದ 15ರವರೆಗೆ ನಡೆಯಿತು.

2. ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್ ಗೇಮ್ಸ್‌ ಅನ್ನು ಕಿಂಗ್ ಜಾರ್ಜ್ I ಉದ್ಘಾಟಿಸಿದ್ದರು.

3. ಮೊದಲ ಒಲಿಂಪಿಕ್ಸ್‌ನಲ್ಲಿ ಒಟ್ಟು 14 ದೇಶಗಳು ಭಾಗವಹಿಸಿವೆ.

First Olympic Games


4. 1896ರ ಏಪ್ರಿಲ್ 6ರಂದು ಅಮೆರಿಕನ್ ಆಟಗಾರ ಜೇಮ್ಸ್ ಕೊನೊಲಿ ಟ್ರಿಪಲ್ ಜಂಪ್ ಅನ್ನು ಗೆದ್ದು ಮೊದಲ ಒಲಿಂಪಿಕ್ ಚಾಂಪಿಯನ್ ಆದರು. ಎತ್ತರ ಜಿಗಿತದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಅವರು ಗಳಿಸಿದರು.

5. ಜರ್ಮನಿಯ ಕಾರ್ಲ್ ಶುಹ್ಮನ್ ಅವರು 1896ರಲ್ಲಿ ಅಥೆನ್ಸ್‌ನ ಸ್ಟಾರ್ ತಾರೆಯಾಗಿದ್ದರು. ಜಿಮ್ನಾಸ್ಟಿಕ್ಸ್, ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್ ಮತ್ತು ಗ್ರೀಕೊ-ರೋಮನ್ ಕುಸ್ತಿಯಲ್ಲಿ ಸ್ಪರ್ಧಿಸಿ ಅವರು ಉದ್ಘಾಟನಾ ಆಧುನಿಕ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು.

6. ಮೊದಲ ಒಲಿಂಪಿಕ್ಸ್ ನಲ್ಲಿ ಅಮೆರಿಕವು ಗರಿಷ್ಠ ಸಂಖ್ಯೆಯ 14 ಚಿನ್ನದ ಪದಕಗಳನ್ನು ಗೆದ್ದುಕೊಂಡಿತು.

7. ಮೊದಲ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 241 ಆಟಗಾರರು ಸ್ಪರ್ಧಿಸಿದ್ದರು.

7. ಅಥೆನ್ಸ್‌ನಲ್ಲಿ ಒಲಿಂಪಿಕ್ಸ್ ಅಂಗವಾಗಿ ಒಟ್ಟು 43 ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.

8. ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಥಾನ ಪಡೆದ ವಿಜೇತರಿಗೆ ಬೆಳ್ಳಿ ಪದಕ ಮತ್ತು ಆಲಿವ್ ಗುಚ್ಛ ನೀಡಲಾಯಿತು. ಎರಡನೇ ಸ್ಥಾನದಲ್ಲಿರುವವರಿಗೆ ತಾಮ್ರದ ಪದಕ, ಲಾರೆಲ್ ಗುಚ್ಛ ಮತ್ತು ಪ್ರಮಾಣಪತ್ರ ನೀಡಲಾಯಿತು.

First Olympic Games


9. ಪದಕದ ಮುಂಭಾಗದ ಭಾಗವು ಜೀಸಸ್‌ನ ಮುಖವನ್ನು ಹೊಂದಿದ್ದು, ಅವನು ಕೈಯಲ್ಲಿ ರೆಕ್ಕೆಯ ವಿಜಯದೊಂದಿಗೆ ಗ್ಲೋಬ್ ಅನ್ನು ಹಿಡಿದಿದ್ದಾನೆ. ಗ್ರೀಕ್ ಭಾಷೆಯಲ್ಲಿ “ಒಲಿಂಪಿಯಾ” ಎಂಬ ಶೀರ್ಷಿಕೆಯನ್ನು ಇದು ಒಳಗೊಂಡಿತ್ತು. ಹಿಂಭಾಗವು ಆಕ್ರೊಪೊಲಿಸ್ ಸೈಟ್ ಅನ್ನು ಗ್ರೀಕ್ ಭಾಷೆಯಲ್ಲಿ “1896ರಲ್ಲಿ ಅಥೆನ್ಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ” ಎಂಬ ಶೀರ್ಷಿಕೆಯೊಂದಿಗೆ ಹೊಂದಿತ್ತು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

10. ಅಥೆನ್ಸ್ 1896ರ ಒಲಿಂಪಿಕ್ ಕ್ರೀಡಾಕೂಟದ ಅಧಿಕೃತ ವರದಿಯು ಎರಡು ಭಾಗಗಳನ್ನು ಒಳಗೊಂಡಿತ್ತು. “ದ ಒಲಿಂಪಿಕ್ ಗೇಮ್ಸ್ ಇನ್ ಏನ್ಷಿಯಂಟ್ ಟೈಮ್ಸ್” ಶೀರ್ಷಿಕೆಯಲ್ಲಿ ಕ್ರೀಡಾಕೂಟದ ಮೊದಲು ಪ್ರಕಟವಾಯಿತು. 1896ರಲ್ಲಿ ಒಲಿಂಪಿಕ್ ಗೇಮ್ಸ್ ಕ್ರೀಡಾಕೂಟದ ಅನಂತರ ಪ್ರಕಟವಾಯಿತು.
ಎರಡು ಸಂಪುಟಗಳನ್ನು ಫ್ರೆಂಚ್-ಗ್ರೀಕ್ ಮತ್ತು ಇಂಗ್ಲಿಷ್-ಜರ್ಮನ್ ಎಂಬ ಎರಡು ದ್ವಿಭಾಷಾ ಆವೃತ್ತಿಗಳ ರೂಪದಲ್ಲಿ ನಾಲ್ಕು ಭಾಷೆಗಳಲ್ಲಿ ಪ್ರಕಟಿಸಲಾಯಿತು. ಈ ಅಧಿಕೃತ ವರದಿಯು ವಿವಿಧ ಹೊಸ ಆವೃತ್ತಿಗಳ ವಿಷಯವಾಗಿತ್ತು.

Continue Reading

Latest

Pani Puri Machine: ಬೆಂಗಳೂರಿಗೆ ಬಂದಿದೆ ಪಾನಿಪುರಿ ನೀಡುವ ಮೆಷಿನ್! ಇದು ಹೇಗಿದೆ ನೋಡಿ

Pani Puri Machine: ಮಳೆ ಇರಲಿ, ಸೆಕೆ ಇರಲಿ ಪಾನಿಪುರಿ ಅಂಗಡಿ ನೋಡಿದಾಕ್ಷಣ ಕಾಲು ಅಲ್ಲಿಯೇ ನಿಂತು ಬಿಡುತ್ತದೆ. ಹೌದು ಅದರ ರುಚಿಯೇ ಅಂಥಹದ್ದು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನ ಸ್ವಯಂಚಾಲಿತ ಪಾನಿಪುರಿ ಮಾರಾಟ ಯಂತ್ರ ಕಂಡುಬಂದಿದೆ. “ಡಬ್ಲ್ಯುಟಿಎಫ್ – ವಾಟ್ ದಿ ಫ್ಲೇವರ್ಸ್” ಎಂದು ಹೆಸರಿಸಲಾದ ಈ ಯಂತ್ರದ ಪಾನಿಪುರಿ ಎಲ್ಲರ ಗಮನ ಸೆಳೆದಿದೆ. ಇದರಿಂದ ನಿಮಗಿಷ್ಟವಾದ ಫ್ಲೇವರ್ಸ್‍ನಲ್ಲಿ ಪಾನಿಪುರಿಯನ್ನು ಸವಿಯಬಹುದು. ಈ ಸ್ವಯಂಚಾಲಿತ ಪಾನಿಪುರಿ ಮೆಷಿನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

VISTARANEWS.COM


on

Pani Puri Machine
Koo

ಬೆಂಗಳೂರು : ಪಾನಿಪುರಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಶಾಪಿಂಗ್‌ಗೆಂದು ಹೊರಗೆ ಹೊರಟರೆ ಬೀದಿ ಬದಿಯಲ್ಲಿ ಪಾನೀಪುರಿ ಮಾರುತ್ತಿದ್ದರೆ ಅದನ್ನು ತಿನ್ನದೇ ಮುಂದೆ ಹೋಗಲು ಇಷ್ಟವಾಗುವುದಿಲ್ಲ. ಪತಿ ತಮ್ಮ ಪತ್ನಿಯನ್ನು ಓಲೈಸಲು, ಪೋಷಕರು ತಮ್ಮ ಮಕ್ಕಳಿಗೆ ಖುಷಿ ಪಡಿಸಲು ಹಾಗೂ ಯುವಕರು ತಮ್ಮ ಪ್ರೇಯಸಿಯ ಪ್ರೀತಿಯನ್ನು ಗಳಿಸಲು ಒಂದು ಪ್ಲೇಟ್ ಪಾನೀಪುರಿ ಕೊಡಿಸುವುದಂತು ಖಂಡಿತ. ಇದೀಗ ಪಾನಿಪುರಿ ಪ್ರಿಯರಿಗೆ ಖುಷಿ ವಿಚಾರ. ಅದೇನೆಂದರೆ ಈಗ ಪಾನಿಪುರಿ ( Pani Puri Machine) ವಿತರಿಸುವ ಮೆಷಿನ್ ಬಂದಿದೆಯಂತೆ. ಅದರಿಂದ ನಿಮಗಿಷ್ಟವಾದ ಫ್ಲೇವರ್ಸ್‍ನಲ್ಲಿ ಪಾನಿಪುರಿಯನ್ನು ಸವಿಯಬಹುದು. ಈ ಸ್ವಯಂಚಾಲಿತ ಪಾನಿಪುರಿ ಮೆಷಿನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Pani Puri Machine

ಹೌದು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್‍ನಲ್ಲಿ ಸ್ವಯಂಚಾಲಿತ ಪಾನಿಪುರಿ ಮಾರಾಟ ಯಂತ್ರ ಕಂಡುಬಂದಿದೆ. “ಡಬ್ಲ್ಯುಟಿಎಫ್ – ವಾಟ್ ದಿ ಫ್ಲೇವರ್ಸ್” ಎಂದು ಹೆಸರಿಸಲಾದ ಈ ಯಂತ್ರದ ಪಾನಿಪುರಿ ಎಲ್ಲರ ಗಮನ ಸೆಳೆದಿದೆ. ಬೆನೆಡಿಕ್ಟ್ ಎಂಬ ಬಳಕೆದಾರರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಮೆಷಿನ್‌ನ ಪೋಟೊವನ್ನು ಪೋಸ್ಟ್ ಮಾಡಿದ್ದಾರೆ. ಈ ಯಂತ್ರವು ಗ್ರಾಹಕರಿಗೆ ಆಯ್ಕೆ ಮಾಡಲು ವಿವಿಧ ಪರಿಮಳಯುಕ್ತ ಪಾನೀಯವನ್ನು ವಿತರಿಸುವ ಅನೇಕ ನಲ್ಲಿಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಸಂಜೆಯ ವೇಳೆ ಫುಡ್ ಕೌಂಟರ್‌ಗಳಲ್ಲಿ ಕಿಕ್ಕಿರಿದ ಜನಸಂದಣಿಯಿಂದ ತುಂಬಿರುವ ಸ್ಥಳಗಳಲ್ಲಿ ಇಂತಹ ಮೆಷಿನ್ ಬಂದಿದ್ದು ಬಹಳ ಅನುಕೂಲಕರವಾಗಿದೆ ಎಂದೇ ಹೇಳಬಹುದು.

ಆದರೆ ಈ ಸ್ವಯಂಚಾಲಿತ ಪಾನಿಪುರಿ ಮಾರಾಟ ಯಂತ್ರದ ಬಗ್ಗೆ ಆನ್‍ಲೈನ್‍ನಲ್ಲಿ ಅನೇಕ ಚರ್ಚೆಗಳು ಹುಟ್ಟಿಕೊಂಡಿವೆ. ಅನೇಕರು ಈ ಯಂತ್ರ ಬೆಂಗಳೂರಿಗೆ ಮಾತ್ರವೇ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಇದು ಕೊನೆಯಲ್ಲಿ ಸುಕ್ಕಾ ಪುರಿಯನ್ನು ನೀಡುತ್ತದೆಯೇ?” ಎಂದು ತಮಾಷೆಯ ಪ್ರಶ್ನೆ ಕೇಳಿದ್ದಾರೆ.
ಕರ್ನಾಟಕದಲ್ಲಿ ಬೀದಿ ಆಹಾರದ ಗುಣಮಟ್ಟದ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಅಂಬಾನಿ ಮದುವೆ ಸಮಾರಂಭದೊಳಗೆ ನುಸುಳಿದ್ದ ಇಬ್ಬರು ʼನಕಲಿ ಅತಿಥಿʼಗಳ ಬಂಧನ!

ಈ ಆಹಾರದಿಂದ ಅನೇಕ ಕಾಯಿಲೆಗಳು ಹರಡುತ್ತದೆ ಮತ್ತು ಇಲ್ಲಿ ಸ್ವಚ್ಛತೆ ಕಡಿಮೆ ಎಂದು ಹೇಳಲಾಗಿದೆ. ಅಲ್ಲದೇ ಆಹಾರ ಸುರಕ್ಷತಾ ಅಧಿಕಾರಿಗಳ ಇತ್ತೀಚಿನ ಆಹಾರ ತಪಾಸಣೆಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಕೃತಕ ಬಣ್ಣಗಳು ಮತ್ತು ಕ್ಯಾನ್ಸರ್ ಕಾರಕಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿವೆ, ಇದು ಪಾನಿಪುರಿ ಮಳಿಗೆಗಳ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ ಎನ್ನಲಾಗಿದೆ.

Continue Reading
Advertisement
Kannada In Madrasa
ಕರ್ನಾಟಕ1 min ago

Kannada In Madrasa: ರಾಜ್ಯದ ಮದರಸಾಗಳಲ್ಲಿ ಇನ್ನು ಕನ್ನಡ ಕಲಿಕೆ ಕಡ್ಡಾಯ; ಶೀಘ್ರವೇ ಆದೇಶ!

murder case set fire bagalakote
ಕ್ರೈಂ11 mins ago

Horrible Murder Case: ಶೆಡ್‌ ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಇಟ್ಟ ದುಷ್ಟರು; ಇಬ್ಬರು ಸಜೀವ ದಹನ

Iti Acharya
ಸಿನಿಮಾ21 mins ago

Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

Karnataka Assembly
ಕ್ರೀಡೆ22 mins ago

Karnataka Assembly: ಬಿಜೆಪಿಯಿಂದಲೇ ರಾಹುಲ್​ಗೆ ಶ್ಲಾಘನೆ; ಸದನದಲ್ಲಿ ಅಭಿನಂದನೆಗೆ ನಿರ್ಣಯ

Anant Radhika Wedding
ವಾಣಿಜ್ಯ25 mins ago

Anant Radhika Wedding: ನಮ್ಮಿಂದ ಏನಾದರು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ; ನೀತಾ ಅಂಬಾನಿ ವಿನಮ್ರ ಮನವಿ!

valmiki corporation scam culprits
ಪ್ರಮುಖ ಸುದ್ದಿ49 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮತ್ತೊಬ್ಬನ ಬಂಧನ; ಛತ್ತೀಸ್‌ಗಢದಲ್ಲೂ ವಂಚಿಸಿದ್ದ!

Anant Ambani Wedding
ದೇಶ53 mins ago

Anant Ambani Wedding: ಮಗನ ಮದುವೆಯಲ್ಲಿ ರಿಲಯನ್ಸ್ ಉದ್ಯೋಗಿಗಳಿಗೂ ಭರ್ಜರಿ ಔತಣ ನೀಡಿದ ಮುಖೇಶ್ ಅಂಬಾನಿ

Former MPs
ದೇಶ53 mins ago

Formers MPs: ಚುನಾವಣೆಯಲ್ಲಿ ಸೋತರೂ ಸರ್ಕಾರಿ ಬಂಗಲೆ ಬಿಡದ 200 ಮಾಜಿ ಸಂಸದರು; ನೋಟಿಸ್‌ ಜಾರಿ

Hardik Pandya
ಕ್ರೀಡೆ57 mins ago

Hardik Pandya: ರೋಡ್​ ಶೋದಲ್ಲಿ ಚಕ್ ದೇ! ಇಂಡಿಯಾ ಹಾಡಿದ ಹಾರ್ದಿಕ್​ ಪಾಂಡ್ಯ; ವಿಡಿಯೊ ವೈರಲ್​

Monkey Attack
Latest2 hours ago

Monkey Attack: ಹುಡುಗಿಯ ಮೇಲೆ ಏಕಾಏಕಿ ದಾಳಿ ಮಾಡಿದ ಕೋತಿ; ವಿಡಿಯೊ ಇದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ16 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ23 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌