Site icon Vistara News

ಮುರುಘಾಮಠ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ: ಕಾನೂನು ಕ್ರಮದ ಸಾಧ್ಯಾಸಾಧ್ಯತೆಗಳೇನು?

ಮುರುಘಾಶ್ರೀ Sexual assault POCSO CASE ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲು

ಸಂತೋಷ್‌ ಪಟೇಲ್‌ ಬೆಂಗಳೂರು

ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಚಿತ್ರದುರ್ಗದ ಮುರುಘಾಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವುದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಸ್ವಾಮೀಜಿ ಸೇರಿ ಪ್ರಕರಣದ ಐವರು ಆರೋಪಿಗಳ ವಿರುದ್ಧ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಕುರಿತು ಕುತೂಹಲ ಮೂಡಿದೆ. ಈ ಕುರಿತ ಸಾಧ್ಯಸಾಧ್ಯತೆಗಳ ವಿವರ ಇಲ್ಲಿದೆ.

ಮುರುಘಾಮಠ ಶ್ರೀಗಳನ್ನು ಬಂಧಿಸದಿರಲು ಕಾರಣಗಳಿವೆಯೆ?

1. ಸಂತ್ರಸ್ತೆಯರು ನೇರವಾಗಿ ದೂರು ನೀಡದ ಕಾರಣ ಆರೋಪಿಗಳ ಬಂಧನ ಮಾಡದಿರಬಹುದು.
2. ಸಂತ್ರಸ್ತೆಯರ ಹೇಳಿಕೆ ಪಡೆಯದೆ ಆರೋಪಿಗಳ ವಿಚಾರಣೆ ಕೂಡ ಅಸಾಧ್ಯ.
3. ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆ ನಡೆಸದೆ ಕಾನೂನು ಕ್ರಮವಿಲ್ಲ.
4. ವೈದ್ಯಕೀಯ ವರದಿ ಬರುವ ತನಕ ಯಾವುದೇ ಕ್ರಮ ಇಲ್ಲ.
5. 18 ವರ್ಷದೊಳಗೆ ಇದ್ದರೆ ಮಾತ್ರ ಪೋಕ್ಸೋ ಪ್ರಕರಣ ದಾಖಲಿಸಬಹುದು.
೬. ಘಟನೆ ನಡೆದಿರುವುದು ಬೇರೆ ಸ್ಥಳದಲ್ಲಿ, ದೂರು ದಾಖಲಾಗಿರುವುದು ಮತ್ತೊಂದು ಸ್ಥಳದಲ್ಲಿ.
೭. ಕೃತ್ಯ ನಡೆದಿದ್ದು ಕೆಲವು ವರ್ಷಗಳ ಹಿಂದೆ ಎಂಬ ಸಂಗತಿಯೂ ಇಲ್ಲಿ ಮುಖ್ಯವಾಗಬಹುದು.
೮. ಇದುವದರೆಗೆ ಸಿಆರ್‌ಪಿಸಿ ಸೆಕ್ಷನ್ 164ಅಡಿ ಹೇಳಿಕೆ ದಾಖಲು ಮಾಡದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಬಂಧನ ಸಾಧ್ಯತೆ ಕಡಿಮೆ.
ಪೋಕ್ಸೋ ಕಾಯ್ದೆ ಅಡಿ ಬಂಧನ ಮಾಡಿದರೆ ಏನೆಲ್ಲಾ ಕಾನೂನು ಕ್ರಮ?
1. ಪೋಕ್ಸೋ ಕಾಯ್ದೆಯ ಆರೋಪಿಯನ್ನು ವಿಚಾರಣೆ ನಡೆಸಿ ಬಿಡಲು ಅವಕಾಶ ಇಲ್ಲ.
2. ಆರೋಪಿಯ ಬಂಧನವಾದರೆ ಜಾಮೀನು ಸಿಗುವುದು ಕಷ್ಟ.
3. ಪ್ರಕರಣದ ಚಾರ್ಜ್‌ಶೀಟ್‌ ಆಗುವತನಕ ಜಾಮೀನು ಸಿಗುವುದಿಲ್ಲ.
4. ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು 90 ದಿನಗಳ ಕಾಲಾವಕಾಶ ಇರುತ್ತದೆ.
5. ಸೂಕ್ಷ್ಮ ಪ್ರಕರಣವಾದ ಹಿನ್ನೆಲೆಯಲ್ಲಿ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ನಲ್ಲಿ ವಿಚಾರಣೆ.
೬. ಇದರ ಮಧ್ಯೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಬಹುದು.
೭. ಬಂಧಿತ ಆರೋಪಿಯ ವೀರ್ಯದ ಮಾದರಿ ಪಡೆದು ಎಫ್ಎಸ್‌ಎಲ್‌ಗೆ ಕಳುಸಬೇಕಾಗುತ್ತದೆ.
9. ಆರೋಪಿಯ ಡಿಎನ್ಎ ತಪಾಸಣೆ ಮಾಡಿಸಲಾಗುತ್ತದೆ.
10. ಆರೋಪಿ ಮತ್ತು ಸಂತ್ರಸ್ತೆಯ ಬಟ್ಟೆ, ಕೂದಲು ಇತ್ಯಾದಿ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತದೆ.
12. ಆರೋಪ ಸಾಬೀತಾದರೆ ಕಡಿಮೆ ಎಂದರೂ 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ಖಚಿತ.

ಪ್ರಕರಣದಲ್ಲಿ ಪೊಲೀಸರು ಏನೆಲ್ಲ ಕ್ರಮ ಕೈಗೊಳ್ಳಬಹುದು?

1. ಪ್ರಕರಣದ ತನಿಖಾಧಿಕಾರಿ ಮೊದಲು ಸಂತ್ರಸ್ತೆಯರನ್ನು ಹಾಜರುಪಡಿಸಲು ದೂರುದಾರರಿಗೆ ಸೂಚನೆ.
2. ಸಂತ್ರಸ್ತೆಯರ ಚಹರೆಯ ಗೌಪ್ಯತೆಯ ಹಿನ್ನೆಲೆಯಲ್ಲಿ ತನಿಖಾಧಿಕಾರಿಯೇ ಹೋಗಬಹುದು.
3. ಸಂತ್ರಸ್ತೆಯರ ಬಳಿ ಮರು ದೂರು ಮತ್ತು ಹೇಳಿಕೆ ಪಡೆದುಕೊಳ್ಳುತ್ತಾರೆ.
4. ಸಂತ್ರಸ್ತೆಯರು ನೀಡುವ ಹೇಳಿಕೆಯನ್ನ ದಾಖಲಿಸುವುದರ ಜೊತೆಗೆ ವಿಡಿಯೊ ರೆಕಾರ್ಡ್ ಮಾಡಲಾಗುತ್ತದೆ.
5. ದಾಖಲಾದ ಹೇಳಿಕೆ ಮತ್ತು ವಿಡಿಯೊ ಹೇಳಿಕೆಯನ್ನು ಗೌಪ್ಯವಾಗಿರಿಸಿ ನ್ಯಾಯಾಲಯಕ್ಕೆ ಸಲ್ಲಿಕೆ.
6. ಸಂತ್ರಸ್ತೆಯರ ಅನುಮತಿ ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಪರೀಕ್ಷೆ ಮಾಡಿಸಲಾಗುತ್ತದೆ.
7. ವೈದ್ಯಕೀಯ ವರದಿ ಬೆನ್ನಲ್ಲೆ ಆರೋಪ ಸಾಬೀತಾದರೆ ವರದಿಯನ್ನು ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ.
8. ಹೇಳಿಕೆ ಮತ್ತು ವರದಿ ಆಧಾರವಾಗಿರಿಸಿಕೊಂಡು ಶ್ರೀಗಳ ಬಂಧನ ಮಾಡಬಹುದು.
9. ಶ್ರೀಗಳ ಬಂಧನದ ಬಳಿಕ ಅವರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
10. ಬಂಧನದ ಬೆನ್ನಲ್ಲೆ ಘಟನಾ ಸ್ಥಳಕ್ಕೆ ಹೋಗಿ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರು ನಡೆಸಲಾಗುತ್ತದೆ.
11. ಘಟನಾ ಸ್ಥಳದಲ್ಲಿ ಸಿಗುವ ಸಾಕ್ಷ್ಯಾಧಾರಗಳನ್ನ ಕಲೆ ಹಾಕಲಾಗುತ್ತದೆ.
12. ಬಂಧಿಸಿದ 24 ಗಂಟೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಮನವಿ ಮಾಡಬಹುದು.
1೩. ಸಂತ್ರಸ್ತೆಯರ ಹೇಳಿಕೆಯ ಪ್ರಕಾರ ಘಟನೆ ದಿನ ಮತ್ತು ಸ್ಥಳವನ್ನು ಗುರುತಿಸಿ ಮಹಜರು.
1೪. ಹಾಸ್ಟೆಲ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಆಗಿರುವ ಬಗ್ಗೆ ಪರಿಶೀಲನೆ, ಸಿಸಿ ಕ್ಯಾಮೆರಾ ದೃಶ್ಯಗಳ ಪರಿಶೀಲನೆ.
16. ಹಾಸ್ಟೆಲ್‌ ವಾರ್ಡನ್‌ ಇರಿಸಿದ ದಾಖಲಾತಿ ಪುಸ್ತಕ ಪರಿಶೀಲನೆ ಹಾಗೂ ವಾರ್ಡನ್ ಹೇಳಿಕೆ ದಾಖಲು ಮಾಡಲಾಗುತ್ತದೆ.
17. ಮಹಜರು ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮಾದರಿ ಕಲೆ ಹಾಕಿ ಎಫ್ಎಸ್ಎಲ್‌ಗೆ ರವಾನೆ.
18. ಶ್ರೀಗಳ ಮೇಲೆ ಬಂದಿರುವ ಆರೋಪದ ಹಿಂದಿನ ಉದ್ದೇಶ ಬಗ್ಗೆ ತನಿಖೆ.
19. ಹಣಕ್ಕಾಗಿ, ಆಸ್ತಿಗಾಗಿ, ಬೇರೊಬ್ಬರ ಆಮಿಷಕ್ಕೆ ಒಳಗಾಗಿದ್ದಾರಾ ಅಥವಾ ಅವರ ಮಾನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆಯಾ ಹೀಗೆ ಹತ್ತು ಹಲವು ಆಯಾಮದಲ್ಲಿ ತನಿಖೆ.
20. ಸಂತ್ರಸ್ಥೆಯ ಹೇಳಿಕೆಯ ಜತೆ ಆರೋಪಿ ನೀಡಿದ ಹೇಳಿಕೆ ಆಧರಿಸಿ ವಿಚಾರಣೆ ಮತ್ತು ತನಿಖೆ.
21. ಈ ಹಿಂದೆ ಶ್ರೀಗಳ ಮೇಲಿರುವ ಆರೋಪಗಳ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗುತ್ತದೆ.
22. ಪ್ರಕರಣಕ್ಕೆ ಸಂಬಂಧಪಟ್ಟ ಶ್ರೀಮಠ, ಹಾಸ್ಟೆಲ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ, ಮಠದಲ್ಲಿ ಕೆಲಸ ಮಾಡುವ ನೌಕರರು, ಸಂತ್ರಸ್ತೆಯರ ಜತೆಯಲ್ಲಿದ್ದವರ ಸಾಕ್ಷಿಗಳಾಗಿ ಹೇಳಿಕೆ ಪಡೆದುಕೊಳ್ಳಬಹುದು.
23. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುತ್ತದೆ.

ಇದನ್ನೂ ಓದಿ | Murugha Shri | ಮಠದಲ್ಲಿ ಇದ್ದವರಿಂದಲೇ ನಮ್ಮ ವಿರುದ್ಧ ಷಡ್ಯಂತ್ರ. ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ!

Exit mobile version