Site icon Vistara News

Pradeep Eshwar: ಶಾಸಕ ಪ್ರದೀಪ್‌ ಈಶ್ವರ್‌ 2ನೇ ಹುಚ್ಚ ವೆಂಕಟ್‌ ಎಂದ ಸಂಸದ ಮುನಿಸ್ವಾಮಿ

Huccha venkat pradeep Eshwar munisway

#image_title

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಮಾತುಗಾರ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ಮತ್ತು ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ (Kolara MP Muniswamy) ಅವರ ಮಧ್ಯೆ ಮಾತಿನ ಸಮರ ನಡೆದಿದೆ.

ಬುಧವಾರ ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಪ್ರದೀಪ್‌ ಈಶ್ವರ್‌ ಅವರು ಬಿಜೆಪಿ ಸಂಸದ ಮುನಿಸ್ವಾಮಿ ಒಂಥರಾ ಚೈಲ್ಡ್ ಆರ್ಟಿಸ್ಟ್ (Child Artist) ಇದ್ದಂಗೆ ಎಂದು ಹೇಳಿದ್ದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮುನಿಸ್ವಾಮಿ ಅವರು ʻಪ್ರದೀಪ್‌ ಈಶ್ವರ್‌ ಎರಡನೇ ಹುಚ್ಚ ವೆಂಕಟ್‌ʼ (Huccha Venkat) ಎಂದರು.

ಪ್ರದೀಪ್‌ ಈಶ್ವರ್‌ ಹೇಳಿದ್ದೇನು?

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ʻʻಮುನಿಸ್ವಾಮಿ ಅಲ್ಲ ಅವರು “ಮನಿ” ಸ್ವಾಮಿ. ನಾನು ಅವರನ್ನು ಮನಿಸ್ವಾಮಿ ಅನ್ಕೊಂಡೆʼʼ ಎಂದರು.

ʻʻಚಿಂತಾಮಣಿ ಹಾಗೂ ಕೋಲಾರದ ಪ್ರಭಾವಿ ನಾಯಕರು ಮನಸ್ಸು ಮಾಡಲಿಲ್ಲ ಅಂದಿದ್ರೆ ಅವರು ಹೇಗೆ ಎಂಪಿ ಆಗ್ತಿದ್ರು? ಅವರು ಒಂದು ತರ ಚೈಲ್ಡ್ ಆರ್ಟಿಸ್ಟಿಗೆ ಬಹಳ ಬೇಜಾರಾಗುತ್ತದೆ. ಒಬ್ಬ ಎಂಪಿ ಹೇಗೆ ಇರಬೇಕು ಅನ್ನುವುದು ಗೊತ್ತಿಲ್ಲ ಅವರಿಗೆʼʼ ಎಂದು ಹೇಳಿದರು.

ʻʻಮುನಿಶಾಮಣ್ಣ ನನಗೆ 5 ವರ್ಷಕ್ಕೆ ಇರೋದು ಹಬ್ಬ, ನಿಮಗೆ ಮುಂದಿನ ವರ್ಷವೇ ಇದೆ ಹಬ್ಬʼʼ ಎಂದು ಗೇಲಿ ಮಾಡಿದರು.

ಇದನ್ನೂ ಓದಿ: Pradeep Eshwar: ಪ್ರತಾಪ್‌ಸಿಂಹ ಅವರೇ ಬಾಯಿ ಮುಚ್ಕೊಂಡಿರ್ಬೇಕು; ಪ್ರದೀಪ್‌ ಈಶ್ವರ್ ಠಕ್ಕರ್‌‌

ಮುನಿಸ್ವಾಮಿ ತಿರುಗೇಟು ನೀಡಿದ್ದು ಹೇಗೆ?

ಚೈಲ್ಡ್ ಆರ್ಟಿಸ್ಟ್ ಎಂಬ ಪ್ರದೀಪ್‌ ಹೇಳಿಕೆಗೆ ತಿರುಗೇಟು ನೀಡಿರುವ ಮುನಿಸ್ವಾಮಿ, ಪ್ರದೀಪ್ ಈಶ್ವರ್ ಎರಡನೇ ಹುಚ್ಚ ವೆಂಕಟ್. ಇಷ್ಟು ಹೇಳಿದ್ರೆ ಸಾಕಲ್ವಾʼ ಎಂದು ಕೇಳಿದರು.

ʻʻಆತ ಇನ್ನೂ ರಾಜಕೀಯದಲ್ಲಿ ತುಂಬ ಪಳಗಬೇಕು. ರಾಜಕೀಯ ಅನುಭವ ಇನ್ನೂ ಕಡಿಮೆ ಇದೆ. ಮನೆ ಮನೆಗೆ ಹೋಗಿ ಅಕ್ಕಾ ಅಣ್ಣ ಅಂತ ಹೇಳೋದು ರಾಜಕೀಯ ಅಂದುಕೊಂಡಿದ್ದಾರೆ. ಮಕ್ಕಳಿಗೆ ಪಾಠ ಹೇಳಿದ ರೀತಿಯಲ್ಲಿ ರಾಜಕೀಯ ಮಾಡಲು ಆಗಲ್ಲ. ಅವರಿಗೆ ಮಕ್ಕಳಿಗೆ ಪಾಠ ಮಾಡಿಕೊಂಡು ಇರಲು ಹೇಳಿʼʼ ಎಂದರು.

ʻʻನಾನು ಸುಮ್ಮಸುಮ್ಮನೆ ರಾಜಕೀಯ ಮಾಡೋನಲ್ಲ. 30 ವರ್ಷದ ಹಿಂದೆ ನಾನು ಗ್ರಾಮ ಪಂಚಾಯತಿಯಿಂದ ಈಗ ಸಂಸದನಾಗಿ ಗೆಲುವು ಸಾಧಿಸಿರುವ ಅನುಭವ ಇದೆ.. ಬೇಕಿದ್ದರೆ ಪ್ರದೀಪ್‌ ಈಶ್ವರ್‌ ನನ್ನ ಬಳಿ ಟ್ಯೂಷನ್‌ಗೆ ಬರಲಿʼʼ ಎಂದು ದೊಡ್ಡಬಳ್ಳಾಪುರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಮುನಿಸ್ವಾಮಿ ಹೇಳಿದರು.

ಶುಕ್ರವಾರ ಮುಂಜಾನೆ ಚಿಕ್ಕಬಳ್ಳಾಪುರದ ಎರಡು ವಾರ್ಡ್‌ಗಳಲ್ಲಿ ಜನರ ಇ ಖಾತೆಗಳನ್ನು ಮನೆ ಮನೆಗೆ ಹಂಚಿ ಅವರ ಕಷ್ಟ ಸುಖ ಕೇಳಿದ ಪ್ರದೀಪ್‌ ಈಶ್ವರ್‌ ಅವರು ಚಿಕ್ಕಬಳ್ಳಾಪುರದಲ್ಲಿ ಭ್ರಷ್ಟಾಚಾರ, ಕಮಿಷನ್‌ ದಂಧೆ ನಡೆಸಿದರೆ ಟ್ರಾನ್ಸ್‌ಫರ್‌ ಮಾಡಿಸ್ತೀನಿ ಎಂದು ಎಚ್ಚರಿಸಿದರು.

ಇದರ ಜತೆಗೆ ಮೈಸೂರಿನ ಸಂಸದ ಪ್ರತಾಪ್‌ಸಿಂಹ ಅವರಿಗೆ ಸುಮ್ನೆ ಬಾಯ್ಮುಚ್ಕೊಂಡು ಇರ್ಬೇಕು ಎಂದು ಎಚ್ಚರಿಕೆ ನೀಡಿದರು.

Exit mobile version