Site icon Vistara News

Assembly Session: ಟ್ರೋಲ್‌ಗೆ ಡೋಂಟ್‌ ಕೇರ್‌ ಈಶ್ವರ್‌: ಧೈರ್ಯದಿಂದ ಮಾತಾಡೋ ಮಹಾಶೂರ ಎಂದ ಯು.ಟಿ. ಖಾದರ್

Pradeep Eshwar and UT Khader

ವಿಧಾನಸಭೆ: ಸದನದಲ್ಲಾಗಲಿ (Assembly Session) ಎಲ್ಲೇ ಆಗಲಿ ಮಾತನಾಡಿದ್ದನ್ನು ಟ್ರೋಲ್‌ ಮಾಡುವವರಿಗೆ ತಲೆ ಕೆಡಿಸಿಕೊಳ್ಳದೆ ಧೈರ್ಯವಾಗಿ ಮಾತನಾಡಿದ ಎಂದು ಹೊಸದಾಗಿ ಶಾಸಕರಾಗಿರುವ ಪ್ರದೀಪ್‌ ಈಶ್ವರ್‌ ಅವರಿಗೆ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತು ಮಾತನಾಡಲು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರು ಎದ್ದು ನಿಂತಾದ ಸ್ಪೀಕರ್‌ ಈ ಮಾತು ಹೇಳಿದರು. ಇತ್ತೀಚೆಗೆ ಪ್ರದೀಪ್‌ ಈಶ್ವರ್‌ ಮಾತನಾಡಲು ಎದ್ದು ನಿಂತಾಗ ಸ್ಪೀಕರ್‌ ಖಾದರ್‌ ಗದರಿಸಿ ಕೂರಿಸಿದ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಪ್ರದೀಫ್‌ ಈಶ್ವರ್‌ಗೆ ಯಾವ ವಿಷಯ ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗಿತ್ತು.

ಟ್ರೋಲ್ ಮಾಡವರ ಬಗ್ಗೆ ತೆಲೆಕೆಡಿಸಕೊಳ್ಳಬೇಡಿ. ನಾನು ಈ ಸ್ಪೀಕರ್ ಸ್ಥಾನದಲ್ಲಿ ಕೂರಲು ಟ್ರೋಲ್ ಮಾಡಿದವರು ಕಾರಣ. ಅವರು ನಮ್ಮ ಬೆಳವಣಿಗೆಗೆ ಕಾರಣ ಆಗುತ್ತಾರೆ. ಹೊಸದಾಗಿ ಶಾಸಕರಾದಾಗ‌ ಮಾತನಾಡುವುದು ಸಹಜ. ಹೆದರಿಕೆ ಬೇಡ, ದೈರ್ಯವಾಗಿ ಮಾತನಾಡಿ ಎಂದರು.

ರಾಜ್ಯಪಾಲರ ಭಾಷಣದ ಮೇಲೆ ಪ್ರದೀಪ್ ಈಶ್ವರ್ ಮಾತು ಆರಂಭಿಸಿದರು. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ. ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಿಂದ ರೇಷನ್ ಅಷ್ಟೇ. ಆದರೆ ನನ್ನಂಥವನ ದೃಷ್ಟಿಯಲ್ಲಿ ಅನ್ನ ಅನ್ನೋದು ದೇವರು. ಗೃಹಜ್ಯೋತಿ ಯೋಜನೆ ಕೇವಲ ಮನೆಯನ್ನು ಬೆಳಗುತ್ತಿಲ್ಲ, ಕೋಟ್ಯಾಂತರ ಮಕ್ಕಳು ತಡರಾತ್ರಿಯವರೆಗೆ ಓದಲು ಸಹಾಯಕವಾಗಿದೆ.

ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಆದ್ಯತೆ ನೀಡಬೇಕಿದೆ. ಅದರ ಬಗ್ಗೆ ಸಂಬಂಧಿಸಿದ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಂಗ್ಲಿಷ್‌ ಭಾಷಾ ಇರೋದೇ ತಪ್ಪು ಮಾತನಾಡಲು. ಆದರೆ ಕನ್ನಡ ಇರೋದು ಸರಿಯಾಗಿ ಮಾತನಾಡಲು. ಬಡವರ ದೇವಾಲಯ ಕನ್ನಡ ಶಾಲೆ. ಬಡವರ ಮಕ್ಕಳು ವಿಧಾನಸೌಧಕ್ಕೆ ಬರೋದು ಸಾಧ್ಯವಾಗಿರೋದು ಸಂವಿಧಾನದಿಂದ.

ನಮ್ಮ ಪಕ್ಷದ ನಾಯಕರು ನನ್ನಂತಹ ಬಡವರ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಸರ್ಕಾರ ಆಸ್ಪತ್ರೆಯ ಚಿಕಿತ್ಸಾ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಉತ್ತಮ ಚಿಕಿತ್ಸೆ ಸಿಗದೆ ನನ್ನ ಅಪ್ಪ – ಅಮ್ಮನನ್ನು ಕಳೆದುಕೊಂಡೆ. ಅಂತಹ ಸ್ಥಿತಿ ಯಾರಿಗೂ ಬರಬಾರದು. ಅದಕ್ಕಾಗಿ ಸರ್ಕಾರ ಆಸ್ಪತ್ರೆ ಉಳಿಸಬೇಕು.

ಇದನ್ನೂ ಓದಿ: ವಿಧಾನಸೌಧ ರೌಂಡ್ಸ್‌ : ಸಿದ್ದರಾಮಯ್ಯ ಬೊಂಬಾಟ್‌ ಬಜೆಟ್‌, ಪ್ರದೀಪ್‌ ಈಶ್ವರ್‌ ಮಾತಿನ ಎಡವಟ್‌!

ಸಿದ್ಧರಾಮನಹುಂಡಿಯಲ್ಲಿ ಹುಟ್ಟಿದ ಸಿದ್ಧರಾಮಯ್ಯರಿಗೆ ಹಸಿವಿನ ಅನುಭವ ಇದೆ. ಅದಕ್ಕೆ ಅನ್ನಭಾಗ್ಯ ತಂದಿದ್ದಾರೆ. ಐಎಎಸ್ ಮತ್ತು ಮೆಡಿಕಲ್ ಓದಲು ಬರುವ ಕನ್ನಡ ಮಾಧ್ಯಮದವನ್ನು ಸರ್ಕಾರ ಆದ್ಯತೆ ಮೇಲೆ ಪರಿಗಣಿಸಬೇಕು. ಉನ್ನತ ಶಿಕ್ಷಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಗೆ ಮರೀಚಿಕೆ ಆಗಬಾರದು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.

Exit mobile version