Site icon Vistara News

Prajwal Revanna Case: ರೇವಣ್ಣ ಜಾಮೀನು ರದ್ದು ಕೋರಿದ್ದ ಎಸ್‌ಐಟಿ ಅರ್ಜಿ ವಿಚಾರಣೆ 3 ವಾರ ಮುಂದೂಡಿಕೆ

Prajwal Revanna Case

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಜಾಮೀನು ರದ್ದು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಕೆ.ಆರ್. ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಜಾಮೀನು ರದ್ದು ಕೋರಿ ಎಸ್‌ಐಟಿ ಅರ್ಜಿ ಸಲ್ಲಿಸಿತ್ತು. ಆದರೆ, ಅರ್ಜಿ ವಿಚಾರಣೆಯನ್ನು 3 ವಾರಗಳ ಕಾಲ ಹೈಕೋರ್ಟ್‌ ಮುಂದೂಡಿದೆ.

ಇದೇ ವೇಳೆ ಪ್ರಕರಣ ರದ್ದು ಕೋರಿ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯೂ ಮುಂದೂಡಿಕೆಯಾಗಿದೆ. ಅಲ್ಲದೇ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ಪ್ರಜ್ವಲ್ ರೇವಣ್ಣ ಹಿಂಪಡೆದಿದ್ದಾರೆ. ಸೆಷನ್ಸ್ ಕೋರ್ಟ್‌ನಲ್ಲೇ ಅರ್ಜಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ಹೈಕೋರ್ಟ್‌ ಅವಕಾಶ ನೀಡಿದ್ದರಿಂದ ಅರ್ಜಿ ಹಿಂಪಡೆಯಲಾಗಿದೆ.

ಇದನ್ನೂ ಓದಿ | Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಶಾಕ್‌! ಜು.25ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್‌ ನಯ ವಂಚಕ; ಡಿಸಿ, ಜಡ್ಜ್‌ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ

ಬೆಂಗಳೂರು: ಖತರ್ನಾಕ್‌ ವಂಚಕನೊಬ್ಬ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಎಂ ಜಂಟಿ ಕಾರ್ಯದರ್ಶಿ, ಜಿಲ್ಲಾಧಿಕಾರಿ, ನ್ಯಾಯಾಧೀಶರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಸುರೇಶ್ ಎಂಬಾತನನ್ನು (Fraud Case) ಬಂಧಿಸಿದ್ದಾರೆ.

ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ರಾಮಯ್ಯ ಅವರ ಹೆಸರಿನಲ್ಲಿ ಮಹಿಳಾ ಅಧಿಕಾರಿಯಿಂದ 7 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದ. ಬಾಗಲಕೋಟೆ ಡಿಎಚ್‌ಓ ಡಾ. ಜಯಶ್ರೀ ಅವರಿಗೆ ವರ್ಗಾವಣೆ ಮಾಡಿಸುವುದಾಗಿ ಹೇಳಿ ಹಂತ ಹಂತವಾಗಿ ಹಣ ಪಡೆದಿದ್ದ. ಅಂದಹಾಗೇ ಡಾ.‌ಜಯಶ್ರೀ ಜಾಗಕ್ಕೆ ಮಾಜಿ ಸಚಿವ ಮೇಟಿ ಅಳಿಯ ರಾಜಕುಮಾರ್ ವರ್ಗಾವಣೆಯಾಗಿದ್ದರು. ಇದನ್ನು ತೆರವುಗೊಳಿಸಲು ಜಯಶ್ರೀ ವಿಧಾನಸೌಧಕ್ಕೆ ಅಲೆದಾಡಿ ಮುಖ್ಯಮಂತ್ರಿ ಮತ್ತು ಸಚಿವರಿಗೆ ಮನವಿ ಸಲ್ಲಿಸಿದ್ದರು.

ಇದನ್ನು ಗಮನಿಸಿದ ನಯ ವಂಚಕ ಸುರೇಶ, ಜಯಶ್ರೀ ಲೆಟರ್ ನೋಡಿ ಅದರಲ್ಲಿದ್ದ ಫೋನ್ ನಂಬರ್ ಗಮನಿಸಿದ್ದಾನೆ. ಬಳಿಕ ಜಯಶ್ರೀಗೆ ಕರೆ ಮಾಡಿ ನಾನು ಸಿಎಂ ಜಂಟಿ ಕಾರ್ಯದರ್ಶಿ ರಾಮಯ್ಯ ಮಾತನಾಡೋದು. ನಿಮ್ಮ ಲೆಟರ್ ನೋಡಿದ್ದೇನೆ, ನಾನು ಮಿನಿಸ್ಟರ್ ಬಳಿ ಮಾತನಾಡುತ್ತೇನೆ. ಆದರೆ ಸ್ವಲ್ಪ ಹಣ ಖರ್ಚಾಗುತ್ತೆ ಎಂದು ಸುಮಾರು 7 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದ.

ಇದನ್ನೂ ಓದಿ | Drowned In Water : ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಇಳಿದಾಗ ಕೊಚ್ಚಿ ಹೋದ ಯುವತಿ

ಇನ್ನೂ ಈ ಖತರ್ನಾಕ್‌ ಸುರೇಶ್ ತಾನೊಬ್ಬ ಜಡ್ಜ್‌ ಎಂದು ಫೋನ್‌ ಮಾಡಿ ಈ ಹಿಂದೆ ವಿಜಯಸಂಕೇಶ್ವರ್‌ ಅವರಿಗೂ ವಂಚನೆಗೆ ಯತ್ನಿಸಿದ್ದ. ದೇವಸ್ಥಾನ ಕಟ್ಟೋದಿದೆ ನಾನು ಹಣ ಹಾಕಿದ್ದೇನೆ, ನೀವು ಸ್ವಲ್ಪ ಸಹಾಯ ಮಾಡಿ ಎಂದು ಹೇಳಿದ್ದ. ಇದಕ್ಕೆ ಸಮ್ಮತಿಸಿದ್ದ ಸಂಕೇಶ್ವರ್ ಹಣ ಕೊಡಲು ಮುಂದಾದಾಗ ಬೇರೆ ಅಕೌಂಟ್ ನಂಬರ್ ನೋಡಿ ನಕಲಿ ಎಂದು ಗೊತ್ತಾಗಿತ್ತು. ಬಳಿಕ ಹುಬ್ಬಳ್ಳಿಯ ಕೇಶವಪುರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಇಷ್ಟೇ ಅಲ್ಲದೆ ಮದ್ದೂರು, ಮಂಡ್ಯದಲ್ಲಿ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಿ ತಾನು ಡಿಸಿ ಎಂದೇಳಿ ಹೇಳಿ ಬಿಲ್ ಕೊಡದೆಯೂ ಹೋಗಿದ್ದಾನೆ. ಕೆಲ ತಹಶೀಲ್ದಾರ್‌ಗಳಿಗೆ ಕರೆ ಮಾಡಿ ಕೆಲಸ ಮಾಡಿಸಿಕೊಂಡಿರುವ ಆರೋಪ ಕೂಡ ಇದೆ.

Exit mobile version