Site icon Vistara News

Prakash Rai: DYFI ಸಮಾವೇಶದಲ್ಲಿ ಮೋದಿಯನ್ನು ಏಕವಚನದಲ್ಲಿ ಗೇಲಿ ಮಾಡಿದ ಪ್ರಕಾಶ್ ರೈ

Prakash Rai and Narendra modi

ಮಂಗಳೂರು: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ನಟ ಪ್ರಕಾಶ್‌ ರೈ (Prakash Rai) ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮಂತ್ರಿಗಳ ದ್ವಾರಕಾ ಭೇಟಿ ಬಗ್ಗೆ ವ್ಯಂಗ್ಯವಾಡಿರುವ ಅವರು, ನಮ್ಮ ದೇಶದಲ್ಲಿ ಎಂತಹ ನಾಯಕನಿದ್ದಾನೆ, ದೇಶವನ್ನು ಹೇಗೆ ಮಂಗ ಮಾಡುತ್ತಿದ್ದಾನೆ. 2019ರಲ್ಲಿ ಗುಹೆ ಸೇರಿಕೊಂಡ, ಈಗ ಕ್ಯಾಮೆರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ, ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ ಎಂದು ಏಕವಚನದಲ್ಲಿ ಪ್ರಧಾನಿಯನ್ನು ಗೇಲಿ ಮಾಡಿದ್ದಾರೆ.

ನಗರದ ಹೊರವಲಯದ ತೊಕ್ಕೋಟ್ಟುವಿನಲ್ಲಿ ಆಯೋಜಿಸಿದ್ದ ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ (DYFI) 12ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗಿದೆ. ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡಿದ ನಾಯಕರಿದ್ದರು, ಆದರೆ ಈಗ ದೇವಾಸ್ಥಾನದ ಉದ್ಘಾಟನೆಗಾಗಿ ಉಪವಾಸ ಮಾಡುವ ನಾಯಕ ಈಗ ಇದ್ದಾರೆ. ಎಲ್ಲಾ ಧರ್ಮದಲ್ಲಿರುವ ಅಂಧ ಭಕ್ತರದ್ದೆ ನನಗೆ ಸಮಸ್ಯೆ. ಕೆಲವರು ನಾನು ಯಾವ ಪಾರ್ಟಿ ಎನ್ನುತ್ತಾರೆ, ಆದರೆ, ನಾನು ಜನರ ಪಕ್ಷ ಎಂದು ಹೇಳಿದರು.

ಬಿಜೆಪಿ, ಆರ್‌ಎಸ್‌ಎಸ್‌ ಕಿಡ್ನ್ಯಾಪಿಂಗ್ ಟೀಮ್

ಕಲಾವಿದನಾಗಿ ಮಾತನಾಡಬೇಕಿರುವುದು ನನ್ನ ಜವಾಬ್ದಾರಿ. ಸಮಸ್ಯೆಯಾದಾಗ ಬಂದು ನಿಲ್ಲಬೇಕು, ನಾನು ಬಡವ ಅಲ್ಲ, ಜನರ ಶ್ರೀಮಂತಿಕೆ ನನ್ನ ಬಳಿ ಇದೆ. ದೇಹಕ್ಕಾದ ಗಾಯಗಳು ಸುಮ್ಮನಿದ್ದರೂ ಕಡಿಮೆಯಾಗುತ್ತವೆ. ಆದರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಎಂತಹ ನಾಯಕನಿದ್ದಾನೆ, ದೇಶವನ್ನು ಹೇಗೆ ಮಂಗ ಮಾಡುತ್ತಿದ್ದಾನೆ. 2019ರಲ್ಲಿ ಗುಹೆ ಸೇರಿಕೊಂಡ, ಈಗ ಕ್ಯಾಮೆರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡ್ತಾನೆ. ಕರ್ಕಶವಾದ ಲೌಡ್ ಸ್ಪೀಕರ್ ಅವನು, ಈತ ವಂದೇ ಭಾರತ್‌ಗೆ ಬಾವುಟ ತೋರಿಸಿದಷ್ಟು, ಸ್ಟೇಷನ್ ಮಾಸ್ಟರ್ ಸಹ ಬಾವುಟ ತೋರಿಸಿರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ | ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಂತಹ ಕಿಡ್ನ್ಯಾಪಿಂಗ್ ಟೀಮ್ ಈ ದೇಶದಲ್ಲಿ ಬೇರೆ ಯಾವುದೂ ಇಲ್ಲ, ಮಾತೆತ್ತಿದರೆ ರಾಮಮಂದಿರ, ಮಸೀದಿ, ಹಿಂದು ಧರ್ಮ ಎನ್ನುತ್ತಾರೆ. ಎಷ್ಟು ಅಂತ ಅಗೆಯುತ್ತಾ ಹೋಗುತ್ತೀರಿ? ಮುಂದೆ ಹರಪ್ಪ, ಮೊಹೆಂಜೊದಾರೊ ಸಿಗಬಹುದು. ಹಾಗಾದರೆ ಮತ್ತೆ‌ ಶಿಲಾಯುಗಕ್ಕೆ ಹೋಗ್ತೀರಾ? ಪೆಟ್ರೋಲ್ ಮುಸ್ಲಿಂ ರಾಷ್ಟ್ರದಲ್ಲಿ ಸಿಗುತ್ತೆ, ಹಾಗಾದರೆ ಪೆಟ್ರೋಲ್ ಬೇಡ ಅಂತ ಎತ್ತಿನಗಾಡಿಯಲ್ಲಿ ಹೋಗ್ತೀರಾ? ಈ ಸಲ ಗೆದ್ದರೆ ಇನ್ನಷ್ಟು ನಾಚಿಕೆ ಮಾನ ಮರ್ಯಾದೆ ಕಳೆದುಕೊಳ್ಳುತ್ತಾನೆ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.

ಹಿಂದು ರಾಷ್ಟ್ರ ಮಾಡಲು ಈ ಮಂಗಗಳು ತಿರುಗಾಡುತ್ತಿದ್ದಾರೆ. ಹಿಂದುರಾಷ್ಟ್ರ ಆದ ಮೇಲೆ ಮತ್ತೆ ಜಾತಿ ಪದ್ಧತಿ ಶುರು ಮಾಡುತ್ತಾರೆ. ಫೇಕ್ ಡಿಗ್ರಿಯಲ್ಲಿ ಓಡಾಡುತ್ತಿರುವವನಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತದೆ. ಪಾರ್ಲಿಮೆಂಟ್ ಮೇಲೆ ನಾಲ್ಕೈದು ಯುವಕ ಯುವತಿಯರು ದಾಳಿ ಮಾಡಿದರು. ಯಾಕೆ ಹಾಗೆ ಯುವಕರು ಮಾಡಿದರು ಎಂದು ನಾವು ಯೋಚನೆ ಮಾಡಬೇಕು. ನಿರುದ್ಯೋಗ ಸಮಸ್ಯೆ ಇದೆ ಎಂದು ಯುವಕರು ಹೇಳುತ್ತಿದ್ದಾರೆ. ಬಾಲ್ಯದಲ್ಲಿದ್ದಾಗ ಮಂಗಳೂರು ಹೀಗಾಗುತ್ತೆ ಎಂದು ಗೊತ್ತಿರಲಿಲ್ಲ. ಎಷ್ಟು ಜನ ಯುವಕರು ಜೈಲಿನಲ್ಲಿ ಕೊಳೆಯುತ್ತಾ ಇದ್ದಾರೆ. ಗಲಾಟೆ ಮಾಡಿಸುವ ಒಬ್ಬ ಜನಪ್ರತಿನಿಧಿಯ ಮಕ್ಕಳು ಯಾರಾದರೂ ಜೈಲಿನಲ್ಲಿದ್ದಾರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Sedition Case: ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಎಂದ ದೇಶದ್ರೋಹಿಗಳನ್ನು ಬಿಡಲ್ಲ: ಡಾ. ಜಿ. ಪರಮೇಶ್ವರ್‌

ಕಾಮಗಾರಿ ಅಪೂರ್ಣವಾಗಿದ್ದರೂ ರಾಮಮಂದಿರ ಉದ್ಘಾಟನೆಯಾಗಿದೆ. ಇಂತಹ ಕೆಲಸ ಯಾರಾದರೂ ಮಾಡಿದ್ದಾರಾ? ಮಂದಿರಕ್ಕಾಗಿ ಸಂಗ್ರಹಿಸಿದ ದುಡ್ಡೆಲ್ಲಾ ಎಲ್ಲಿ ಎಲ್ಲೋಯ್ತು? ಕೋಟ್ಯಂತರ ಇಟ್ಟಿಗೆ ಎಲ್ಲೋಯ್ತು? ಪ್ರಜಾಪ್ರಭುತ್ವ ಅಂದ್ರೆ ಮೆಜಾರಿಟಿ ಅಲ್ಲ. ಮೆಜಾರಿಟಿ ಮುಖ್ಯವಾದರೆ ಕಾಗೆ ರಾಷ್ಟ್ರೀಯ ಪಕ್ಷಿ ಆಗಬೇಕಿತ್ತು, ಹಸು ರಾಷ್ಟ್ರೀಯ ಪ್ರಾಣಿ ಆಗಬೇಕಿತ್ತು. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟವರಲ್ಲಿ ಅಧಿಕಾರದ‌ ಶಕ್ತಿ ಇದೆ. ಲೋಕಸಭಾ ಚುನಾವಣೆಯಲ್ಲಿ ಮನೆ‌ಮನೆಗೆ ಈ ಸಂದೇಶ ನೀಡಬೇಕು. ಮೋದಿ‌ ಏನು ಕಿಸಿದು ಗುಡ್ಡೆ ಹಾಕಿದ್ದಾನೆ? ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು ಎಂದು ಹೇಳಿದ್ದಾರೆ.

Exit mobile version