Site icon Vistara News

Pralhad Joshi: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಪ್ರಲ್ಹಾದ್ ಜೋಶಿ

Pralhad joshi

ಹುಬ್ಬಳ್ಳಿ: ವ್ಯಕ್ತಿಯೊಬ್ಬನನ್ನು ಠಾಣೆಗೆ ಕರೆಸಿ ಹೊಡೆದಿದ್ದ ಹಿನ್ನೆಲೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಯುವಕನಿಗೆ ಹೊಡೆಯಲು ನಿಮಗೇನು ಅಧಿಕಾರ ಇದೆ. ನಿಮ್ಮನ್ನು ಮನೆಗೆ ಕಳಿಸುತ್ತೇನೆ, ಸುಮ್ಮನೆ ಬಿಡಲ್ಲ. ಕಾಂಗ್ರೆಸ್ ಸರ್ಕಾರದ ಮಾತು ಕೇಳಿ ಮನಬಂದಂತೆ ವರ್ತಿಸುತ್ತಿದ್ದೀರಿ ಎಂದು ಧಾರವಾಡ ಶಹರ ಠಾಣೆ ಇನ್ಸ್‌ಪೆಕ್ಟರ್ ಕಾಡದೇವರಮಠ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಧಾರವಾಡ ಶಹರ ಠಾಣೆ ಇನ್ಸ್‌ಪೆಕ್ಟರ್ ಎನ್‌.ಸಿ. ಕಾಡದೇವರಮಠ ಅವರನ್ನು ಮನೆಗೆ ಕರೆಸಿದ್ದ ಕೇಂದ್ರ ಸಚಿವರು, ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ದಬ್ಬಾಳಿಕೆ ಮಾಡಿದ್ದೀರಿ, ನಾವೂ ಅಧಿಕಾರಕ್ಕೆ ಬರುತ್ತೇವೆ, ಎಚ್ಚರಿಕೆಯಿಂದ ಇರಿ ಎಂದು ಚಳಿ ಬಿಡಿಸಿದ್ದಾರೆ.

ಇದನ್ನೂ ಓದಿ | DK Shivakumar : ಗ್ಯಾರಂಟಿ ಬಗ್ಗೆ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ: ಡಿಕೆಶಿ ತಿರುಗೇಟು

ಬಿ.ವೈ. ವಿಜಯೇಂದ್ರ 3 ವರ್ಷಕ್ಕೆ ಅಧ್ಯಕ್ಷ, ನಂತರ ಮತ್ತೊಬ್ಬರು ಎಂದ ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ (BJP State President) ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್‌ ನಿರ್ಧಾರ ಅತ್ಯಂತ ಸೂಕ್ತವಾಗಿದೆ. ನಮ್ಮ ರಾಷ್ಟ್ರೀಯ ನಾಯಕತ್ವ ಯುವಕರಿಗೆ ಆದ್ಯತೆ ನೀಡಿದೆ. ವಿಜಯೇಂದ್ರ ಅವರನ್ನು ನಾನು ಅತ್ಯಂತ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ವಿಜಯೇಂದ್ರ ನಾಯಕತ್ವದಲ್ಲಿ, ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ನಾವು ಪಕ್ಷವನ್ನು ಗಟ್ಟಿಗೊಳಿಸುತ್ತೇವೆ. ಬಿ.ವೈ. ವಿಜಯೇಂದ್ರ ಮೂರು ವರ್ಷ ಮಾತ್ರ ಅಧ್ಯಕ್ಷರಾಗಿರುತ್ತಾರೆ. ನಂತರ ಮತ್ತೊಬ್ಬ ಕಾರ್ಯಕರ್ತ ಅಧ್ಯಕ್ಷರಾಗುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಲ್ಹಾದ್​ ಜೋಶಿ,​ ಬಿ.ಎಸ್.​ ಯಡಿಯೂರಪ್ಪ ಒಂದು ಜಾತಿ, ಸಮುದಾಯಕ್ಕೆ ಸೀಮಿತರಾದ ನಾಯಕರಲ್ಲ. ಯಡಿಯೂರಪ್ಪ ಪಕ್ಷಾತೀತ ನಾಯಕ. ಎಲ್ಲ ಸಮುದಾಯದವರೂ ಅವರಿಗೆ ಬೆಂಬಲ ಕೊಡುತ್ತಿದ್ದಾರೆ. ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಿಗೆ ಕೆಲಸ ಮಾಡುತ್ತೇವೆ

ವಿಜಯೇಂದ್ರ 15 ವರ್ಷಗಳಿಂದ ಪಕ್ಷದ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ವಿಜಯೇಂದ್ರ ಆ ಹುದ್ದೆಗೆ ಬರುವ ಮುನ್ನ, ಅವರು ಯುವ ಮೋರ್ಚಾದಲ್ಲಿ ಕೆಲಸ ಮಾಡಿದ್ದಾರೆ. ಇದು ವಂಶಪಾರಂಪರ್ಯದ ಅಧಿಕಾರವಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್‌ ಖರ್ಗೆ ಅವರದ್ದು ವಂಶಪಾರಂಪರ್ಯ ಆಡಳಿತವಾಗಿದೆ. ಈಗ ಅಸಮಾಧಾನಿತರ ಜತೆ ನಾನು ಮಾತನಾಡುತ್ತೇನೆ. ವಿಜಯೇಂದ್ರ ಅವರಿಗೆ ನಾವು ಎಲ್ಲ ರೀತಿತ ಬೆಂಬಲವನ್ನೂ ಕೊಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) 25 ಸ್ಥಾನವನ್ನು ಗೆಲ್ಲಬೇಕಿದೆ. ವಿಜಯೇಂದ್ರ ನೇತೃತ್ವದಲ್ಲಿ ನಾನೂ ಸೇರಿದಂತೆ ಎಲ್ಲ ನಾಯಕರೂ ಕೆಲಸ ಮಾಡುತ್ತೇವೆ. ಇದು ಸಮುದಾಯದ ಆಧಾರದ ಮೇಲೆ ಕೊಟ್ಟಿರುವ ಹುದ್ದೆ ಅಲ್ಲ ಎಂದು ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ | Three phase power : ಕಾಡಂಚಿನ ಗ್ರಾಮಗಳಿಗೆ ಹಗಲು ಹೊತ್ತಲ್ಲೇ 3 ಫೇಸ್ ವಿದ್ಯುತ್: ಸಿಎಂಗೆ ಈಶ್ವರ ಖಂಡ್ರೆ ಮನವಿ

ಈಗ ದೇಶದಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ಏನಾಗಿದೆ?

ರಾಜ್ಯದಲ್ಲಿ ನಮ್ಮದೇ ತಪ್ಪುಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದಿದೆ. ದೇಶದಲ್ಲಿ ಕಾಂಗ್ರೆಸ್‌ನ ಪರಿಸ್ಥಿತಿ ಏನಿದೆ? ಎಂದು ಪ್ರಲ್ಹಾದ್‌ ಜೋಶಿ ಪ್ರಶ್ನೆ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರನ್ನು ಕಂಡರೆ ಮೋದಿಗೆ ಭಯ ಎಂದು ಹೇಳಿಕೆ‌ ನೀಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ್‌ ಜೋಶಿ, ಈ ಹಿಂದೆ ರಾಹುಲ್ ಗಾಂಧಿ ಸಹ ಬಾಲಿಶ ಹೇಳಿಕೆ‌ ನೀಡಿದ್ದರು. ಮೋದಿಯವರು ನನ್ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ ಎಂದಿದ್ದರು. ಈಗ ಸಿದ್ದರಾಮಯ್ಯ ಸಹ ರಾಹುಲ್ ಗಾಂಧಿ ಲೆವಲ್‌ಗೆ ಇಳಿದು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.

Exit mobile version