Site icon Vistara News

Pralhad Joshi : ಅಯೋಧ್ಯೆಗೆ ಹೋದ್ರೆ ಕಾಂಗ್ರೆಸ್‌ಗೆ ಮುಸ್ಲಿಮರ ಮತ ತಪ್ಪೋ ಭಯ ಎಂದ ಪ್ರಲ್ಹಾದ್‌ ಜೋಶಿ

Rama Mandir Congress Pralhad Joshi

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ (Ayodhye Rama Mandir) ಉದ್ಘಾಟನೆಗೆ ಹೋಗಲೂ ಕಾಂಗ್ರೆಸ್ಸಿಗರು ಮತಗಳ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ (Pralhad Joshi) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಗ್ಗೆ ದೇವಸ್ಥಾನ ಸ್ವಚ್ಛತಾ ಅಭಿಯಾನದಲ್ಲಿ (Swaccha Abhiyana) ಪಾಲ್ಗೊಂಡ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಅಯೋಧ್ಯೆಯಲ್ಲಿ ನಾವು ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ನಾವು ಕೊಟ್ಟ ಆಹ್ವಾನವನ್ನು ಅವರು ಸಹಜವಾಗಿ ಸ್ವೀಕರಿಸಿಲ್ಲ. ಆಹ್ವಾನ ಸ್ವೀಕರಿಸಿದರೆ ಏನಾಗುತ್ತೋ ಎನ್ನುವ ಭಯದಲ್ಲಿ ಅವರು ಇದರಲ್ಲೂ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಜೋಶಿ ಆರೋಪಿಸಿದರು.

ʻʻರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ಸಿಗರೂ ಸಹಜವಾಗಿ ಬಂದಿದ್ದರೆ ಒಳ್ಳೆಯದಾಗುತ್ತಿತ್ತು. ಆದರೆ, ಬಂದರೆ- ಬರದಿದ್ದರೆ ಎಲ್ಲಿ ಯಾರ ವೋಟ್ ಕೈ ತಪ್ಪುತ್ತವೆಯೋ..? ಎಂಬ ಲೆಕ್ಕಾಚಾರದ ಚಿಂತನೆಯಲ್ಲಿ ತೊಡಗಿದ್ದಾರೆʼʼ ಎಂದು ಲೇವಡಿ ಮಾಡಿದರು.

ಅಯೋಧ್ಯೆಗೆ ಹೋದರೆ ಒಂದು ವರ್ಗದ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹೋಗದೇ ಇದ್ದರೆ ಮತ್ತೊಂದು ವರ್ಗದ ಮತಗಳು ಕೈ ತಪ್ಪುತ್ತವೆ ಎಂಬ ಗೊಂದಲ ಕಾಂಗ್ರೆಸ್ಸಿಗರನ್ನು ಆಲೋಚಿಸುವಂತೆ ಮಾಡಿದೆ ಎಂದು ಸಚಿವ ಜೋಶಿ ಹೇಳಿದರು. ರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ನೀಡಿದ ಆಹ್ವಾನವನ್ನು ಕಾಂಗ್ರೆಸ್ ನಾಯಕರು ತಿರಸ್ಕರಿಸಿದ ಬಗ್ಗೆ ಬಿಜೆಪಿ ನಾಯಕರು ಯಾರೂ ಪ್ರತಿಕ್ರಿಯಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲು ಹೋಗಲ್ಲ ಎಂದು ಮಾತು ಬದಲಿಸಿದ ಸಿದ್ದರಾಮಯ್ಯ

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ರಾಮ ಮಂದಿರ ಅಲ್ಲಿ ಮಾತ್ರ ಇರುವುದಾ? ನಮ್ಮ ಊರಿನ ರಾಮ ಮಂದಿರಕ್ಕೆ ಹೋದರೆ ಆಗುವುದಿಲ್ವಾ ಎಂದು ಕೇಳಿದ್ದರು. ಸಂಪುಟದ ಹಲವು ಸಚಿವರು ಕೂಡಾ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ನಾನು ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದಷ್ಟೇ ಹೇಳಿದ್ದೇನೆ. ಉದ್ಘಾಟನೆಯಾದ ಬಳಿಕ ಭೇಟಿ ನೀಡುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದರು.

ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿಯು ರಾಜಕೀಯಗೊಳಿಸಿದೆ ಎಂದು ಹೇಳುತ್ತಿರುವ ಕಾಂಗ್ರೆಸ್‌ ಈ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ರಾಷ್ಟ್ರ ಮಟ್ಟದಲ್ಲೇ ತೀರ್ಮಾನ ಕೈಗೊಂಡಿದೆ. ಆದರೆ, ಕೆಲವು ಕಾಂಗ್ರೆಸ್‌ ನಾಯಕರು ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗುವ ಉತ್ಸಾಹ ತೋರಿಸಿದ್ದಾರೆ.

ಕಾಂಗ್ರೆಸ್‌ನ ಈ ಇಬ್ಬಂದಿತನವನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದು, ಕಾಂಗ್ರೆಸ್‌ ನಾಯಕರಿಗೆ ಮುಸ್ಲಿಮರ ಮತ ತಪ್ಪಿ ಹೋಗುವ ಭಯ ಕಾಡುತ್ತಿದೆ. ಹೀಗಾಗಿ ಅವರು ರಾಮ ಮಂದಿರದ ವಿಚಾರದಲ್ಲಿ ಏನೇನೋ ಹೇಳುತ್ತಿದ್ದಾರೆ ಎಂದು ನುಡಿದರು.

Exit mobile version