Site icon Vistara News

Pramod Mutalik : ಆನ್‌ಲೈನ್‌ ಮದುವೆ ನೋಂದಣಿಯಿಂದ ಲವ್‌ ಜಿಹಾದ್‌ ಹೆಚ್ಚಳ; ಮುತಾಲಿಕ್‌ ತೀವ್ರ ವಿರೋಧ

Pramod mutalik

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಜೆಟ್‌ನಲ್ಲಿ (Karnataka Budget 2023-24) ಘೋಷಿಸಿದ ಆನ್‌ಲೈನ್‌ ಮದುವೆ ನೋಂದಣಿಯ (Online Marriage Registration) ಹೊಸ ಅವಕಾಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತೀಯ ಜನತಾ ಪಕ್ಷ ಬಜೆಟ್‌ ಮಂಡನೆಯ ಬೆನ್ನಿಗೇ ಇದನ್ನು ಆಕ್ಷೇಪಿಸಿದ್ದರೆ, ಈಗ ಶ್ರೀರಾಮ ಸೇನೆ (Sreerama Sene) ಸಂಚಾಲಕ ಪ್ರಮೋದ್‌ ಮುತಾಲಿಕ್‌ (Pramod Mutalik) ಅವರು ಕೂಡಾ ಧ್ವನಿ ಎತ್ತಿದ್ದಾರೆ.

ಆನ್‌ಲೈನ್‌ ವಿವಾಹ ನೋಂದಣಿಯು ಲವ್‌ ಜಿಹಾದ್‌ (Love Jihad cases) ಪ್ರಕರಣಗಳಿಗೆ ಪೂರಕವಾಗಿದೆ. ಇದರಿಂದ ಹಿಂದು ಹೆಣ್ಮಕ್ಕಳ ಲವ್‌ ಜಿಹಾದ್‌ ಹೆಚ್ಚಾಗಲಿದೆ ಎಂದು ಮುತಾಲಿಕ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಹೀಗಾಗಿ ಆನ್‌ಲೈನ್‌ ಮದುವೆ ನೋಂದಣಿ ಪ್ರಸ್ತಾಪವನ್ನು ಹಿಂದೆ ಪಡೆಯಬೇಕು, ಈ ಹಿಂದೆ ಇದ್ದ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

ವಿರೋಧಕ್ಕೆ ಮುತಾಲಿಕ್‌ ನೀಡಿದ ಕಾರಣಗಳು

  1. ಕೆಲವು ಮುಸ್ಲಿಂ ಅಥವಾ ಕ್ರಿಶ್ಚಿಯನ್‌ ಯುವಕತು ತಂದೆ-ತಾಯಿಗೆ ಗೊತ್ತಾಗದೇ ಹಿಂದು ಯುವತಿಯರನ್ನು ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಮದುವೆ ಆಗುವ ಸಾಧ್ಯತೆ ಇರುತ್ತದೆ. ಈ ಮದುವೆ ವಿಚಾರಗಳು ಹೆತ್ತವರಿಗೆ ತಿಳಿಯದೆಯೇ ಕಾನೂನು ಮಾನ್ಯತೆ ಪಡೆದುಕೊಂಡರೆ ಲವ್‌ ಜಿಹಾದ್‌ಗೆ ಲಾಭವಾಗುತ್ತದೆ.
  2. ಆಫ್‍ಲೈನ್ ನೋಂದಣಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಆಕ್ಷೇಪಣೆಗೆ ಅವಕಾಶ ಇತ್ತು. ಆದರೆ ಆನ್‍ಲೈನ್ ನೋಂದಣಿಯಲ್ಲಿ ಆಕ್ಷೇಪಣೆಗೆ ಅವಕಾಶ ಇಲ್ಲ. ಇದರಿಂದ ವಿವಾಹ ವಿಚಾರದಲ್ಲಿ ಮೋಸ ಆಗುವ ಸಾಧ್ಯತೆಗಳು ಹೆಚ್ಚಿವೆ.
  3. ನೇರವಾಗಿ ರಿಜಿಸ್ಟ್ರಾರ್ ಆಫೀಸ್ ಗೆ ತೆರಳಿ ನೋಂದಣಿ ಮಾಡುವ ಪದ್ಧತಿಯೇ ಯೋಗ್ಯವಾಗಿದೆ. ಹೀಗಾಗಿ ಆನ್‌ಲೈನ್‌ ಮದುವೆ ನೋಂದಣಿಯನ್ನು ಯಾವ ಕಾರಣಕ್ಕೂ ಜಾರಿಗೆ ತರಬಾರದು.

ಆನ್‌ಲೈನ್‌ ವಿವಾಹ ನೋಂದಣಿ: ಬಜೆಟ್‌ನಲ್ಲಿ ಹೇಳಿದ್ದೇನು?

ಹೊಸದಾಗಿ ಮದುವೆಯಾಗುವ ನವಜೋಡಿಗಳಿಗೆ ಸಿದ್ದರಾಮಯ್ಯ (CM Siddaramaiah) ಬಜೆಟ್‌ನಲ್ಲಿ ಶುಭ ಸುದ್ದಿ ನೀಡಿದ್ದರು. ಮದುವೆ ನೋಂದಣಿಗೆ ನೀವು ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ (Sub Registrar office) ಹೋಗಬೇಕಾಗಿಲ್ಲ. ಆನ್‌ಲೈನ್‌ ಮೂಲಕವೇ ನೋಂದಣಿ (ಆನ್‌ಲೈನ್‌ ಮದುವೆ ನೋಂದಣಿ) ಮಾಡಿಸಿಕೊಳ್ಳುವ ಅವಕಾಶ ಅಥವಾ ಆಯಾ ಗ್ರಾಮ ಪಂಚಾಯಿತಿಗಳಿಗೇ ಹೋಗಿ ನೋಂದಣಿ ಮಾಡುವ ಅವಕಾಶವನ್ನೂ ನೀಡಿದ್ದರು.

ಕಾವೇರಿ ತಂತ್ರಾಂಶದಲ್ಲಿ ನೋಂದಣಿಗೆ ಅವಕಾಶ

ವಧು-ವರರು ಕಾವೇರಿ 2.0 ತಂತ್ರಾಶದಲ್ಲಿ ಆನ್​ಲೈನ್ ಮೂಲಕ ಮದುವೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಜೊತೆಗೆ ಗ್ರಾಮ ಪಂಚಾಯತಿ ಬಾಪೂ ಸೇವಾ ಕೇಂದ್ರ ಹಾಗೂ ಗ್ರಾಮ ಒನ್​​ನಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

ಇದನ್ನು ಓದಿ: Karnataka Budget 2023 : ಬಜೆಟ್‌ನಲ್ಲಿ 7ನೇ ವೇತನ ಆಯೋಗಕ್ಕೆ ದುಡ್ಡಿಲ್ಲ, ಓಪಿಎಸ್‌ ಜಾರಿಯ ಸುದ್ದಿ ಇಲ್ಲ; ನೌಕರರಿಗೆ ನಿರಾಸೆ

ಈವರೆಗೆ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿ ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು.

Exit mobile version