ಧಾರವಾಡ: ರಾಜ್ಯದಲ್ಲಿ 10 ಮುಸ್ಲಿಂ ಮಹಿಳಾ ಕಾಲೇಜುಗಳ ಸ್ಥಾಪನೆಗೆ ಸರಕಾರ ಮುಂದಾಗಿದೆ ಎಂಬ ವರದಿಗಳನ್ನು ಆಕ್ಷೇಪಿಸಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ಗೆ ಬೆದರಿಕೆ ಕರೆ ಬಂದಿದೆ.
ಮುಸ್ಲಿಂ ಮಹಿಳಾ ಕಾಲೇಜುಗಳನ್ನು ತೆರೆಯಬೇಕು ಎಂಬ ವಕ್ಫ್ ಬೋರ್ಡ್ ಪ್ರಸ್ತಾವನೆಗೆ ಸರ್ಕಾರದಿಂದಲೂ ಅನುಮತಿ ಸಿಕ್ಕಿದೆ ಅನ್ನೋ ಒಂದು ಮಾತು ಇದೀಗ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಕಾಲೇಜುಗಳ ಆರಂಭದ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಸರ್ಕಾರ ಇಂಥ ಮಾನಸಿಕತೆಯಿಂದ ಹೊರಬರಬೇಕು, ಈ ರೀತಿಯ ಪ್ರತ್ಯೇಕತೆಯಿಂದಲೇ ಪಾಕಿಸ್ತಾನ ನಿರ್ಮಾಣವಾಗಿದ್ದು ಎಂದು ಗಂಭೀರ ಆರೋಪವನ್ನು ಮಾಡಿದ್ದರು.
ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಮುತಾಲಿಕ್ ವಿರುದ್ಧ ವಾಟ್ಸ್ ಆಪ್ ಸಂದೇಶಗಳು ಬಂದಿವೆ. 8277476700 ಮೊಬೈಲ್ ನಂಬರ್‌ನಿಂದ ವಾಯ್ಸ್ ಮೆಸೇಜ್‌ಗಳು ಬಂದಿತ್ತು. ಇದರಲ್ಲಿ ಆ ವ್ಯಕ್ತಿ ಪ್ರಮೋದ್ ಮುತಾಲಿಕ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಮೇಲೆ ಧಾರವಾಡದ ಉಪನಗರ ಠಾಣೆಯಲ್ಲಿ ಮುತಾಲಿಕ್ ಅವರು ದೂರು ದಾಖಲಿಸಿದ್ದಾರೆ.
ಈ ನಡುವೆ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ವಕ್ಫ್ ನ ಸಚಿವೆ ಶಶಿಕಲಾ ಜೊಲ್ಲೆ ಅವರು ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಯ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಹೇಳಿದ್ದಾರೆ. ಅದರೆ, ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಅವರು ಮಾತ್ರ ಇದು ವಕ್ಫ್ ಮಂಡಳಿಯ ಪ್ರಸ್ತಾವನೆ, ಇನ್ನೂ ಸರಕಾರದ ಮುಂದಿಟ್ಟಿಲ್ಲ ಎಂದಿದ್ದಾರೆ. ಇದು ಮಹಿಳಾ ಕಾಲೇಜು ಪ್ರಸ್ತಾವನೆ, ಹಾಗಂತ ಮುಸ್ಲಿಂ ಮಹಿಳಾ ಕಾಲೇಜು ಅಲ್ಲ, ಯಾರು ಬೇಕಾದರೂ ಸೇರಬಹುದು ಎಂದಿದ್ದಾರೆ.
ಇದನ್ನೂ ಓದಿ | Muslim college | ವಕ್ಫ್ ಅಧ್ಯಕ್ಷರ ಹೇಳಿಕೆ ವೈಯಕ್ತಿಕ, ಮಹಿಳಾ ಕಾಲೇಜಿನ ಪ್ರಸ್ತಾಪವಿಲ್ಲ ಎಂದ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ