Site icon Vistara News

Pranavananda Swamiji | ಪಂಚಾಯತ್ ರಾಜ್‌ನಲ್ಲಿ ಭ್ರಷ್ಟಾಚಾರ ಆರೋಪ; ಗ್ರಾಪಂಗೆ ಸ್ವಾಮೀಜಿ ರಾಜೀನಾಮೆ

Pranavananda Swamiji

ಹಾವೇರಿ: ಪಂಚಾಯತ್ ರಾಜ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಣೆಬೆನ್ನೂರಿನ ಶರಣಬಸವೇಶ್ವರರ ಆಶ್ರಮದ ಪ್ರಣವಾನಂದ ಸ್ವಾಮೀಜಿ (Pranavananda Swamiji) ಅವರು ಅರೆಮಲ್ಲಾಪುರ ಗ್ರಾಮ ಪಂಚಾಯಿತಿಯ ೨ನೇ ವಾರ್ಡಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಹಿಂದೆ ಪಂಚಾಯತ್ ರಾಜ್ ಇಲಾಖೆಯ ಭ್ರಷ್ಟ ವ್ಯವಸ್ಥೆಗೆ ಗುತ್ತಿಗೆದಾರ ಸಂತೋಷ ಬಲಿಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಇದೇ ಇಲಾಖೆ ಮೇಲೆ ಈಗ ಇದೇ ಇಲಾಖೆ ಮೇಲೆ ಮತ್ತೊಂದು ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದೆ.

ಈ ಸಂಬಂಧ ಹಾವೇರಿಯಲ್ಲಿ ಪ್ರಣವಾನಂದ ಸ್ವಾಮೀಜಿ‌ ಸುದ್ದಿಗೋಷ್ಠಿ ನಡೆಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳು ಜನರ ಮನೆಗೆ ಸೇರುತ್ತಿಲ್ಲ. ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಜೀವವಿಲ್ಲದಂತಾಗಿದ್ದು, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ, ಈ ನಿಟ್ಟಿನಲ್ಲಿ ನನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿರುವುದಾಗಿ ಹೇಳಿದರು.

ಇಒ ಮತ್ತು ಸಿಒಗಳಿಗೆ ದುಡ್ಡು ಮಾಡಿಕೊಡಲು ಇರುವ ಹುದ್ದೆ ಎಂದರೆ ಅದು ಪಿಡಿಒ. ಗ್ರಾಮ ಪಂಚಾಯತ್‌ಗೆ ಪಿಡಿಒಗಳೇ ಕಂಟಕವಾಗಿದ್ದು, ಜನರ ಜೀವನದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಪಿಡಿಒನಿಂದ ಹಿಡಿದು ಎಲ್ಲರೂ ಹಗರಣದಲ್ಲಿ ಮುಳುಗಿ ಹೋಗಿದ್ದಾರೆಂದು ಕಿಡಿಕಾರಿದ್ದಾರೆ.

ಜೀವ ಬೇದರಿಕೆ ಆರೋಪ

ಗ್ರಾಮ ಪಂಚಾಯತ್ ಸಭೆಯಲ್ಲಿ ಮಾಹಿತಿ ಕೇಳಿದರೆ ಜೀವಬೆದರಿಕೆ ಹಾಕುತ್ತಾರೆ. ಆಳ್ವಿಕೆ ವ್ಯವಸ್ಥೆಯಿಂದ ಆಡಳಿತ ವ್ಯವಸ್ಥೆ ಬರಬೇಕೆಂದು ಪ್ರಯತ್ನಪಟ್ಟೆ. ಆದರೆ, ನನ್ನ ಮೇಲೆ ಜಾತಿ ನಿಂದನೆ ಕೇಸ್ ಹಾಕಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Independence Day | ಕೆಂಪು ಕೋಟೆಯಲ್ಲಿ ಹಾವೇರಿ ಕುವರಿಯ ಕೀರ್ತಿ ಪತಾಕೆ!

Exit mobile version