Site icon Vistara News

Namma Metro : ರೀಲ್ಸ್‌ ಶೋಕಿಗೆ ಮೆಟ್ರೊದಲ್ಲಿ ಕುಚೇಷ್ಟೆ; ಯುವಕನ ಬಂಧನ

Metro nonsense prank video by youth

ಬೆಂಗಳೂರು: ಮೆಟ್ರೋ ರೈಲು (Namma Metro) ನಿಲ್ದಾಣದಲ್ಲಿ ಕಟ್ಟುನಿಟ್ಟಿನ ನಿಯಮ ಇದೆ. ಅಲ್ಲಿ ನಾವು ಬಸ್ಸು ಮತ್ತು ಇತರ ವಾಹನಗಳಲ್ಲಿ ಸಂಚರಿಸುವ ವೇಳೆ ನಡೆದುಕೊಳ್ಳುವಂತೆ ಬೇಕಾಬಿಟ್ಟಿಯಾಗಿ ವರ್ತಿಸುವಂತಿಲ್ಲ. ಮೆಟ್ರೋ ರೈಲು (Metro train) ಪ್ರವೇಶಿಸುವಾಗ ಸಾಲಲ್ಲಿ ಹೋಗಬೇಕು, ಒಳಗೂ ಬ್ಯಾಗ್‌ ಹಿಡಿದುಕೊಳ್ಳುವುದಕ್ಕೆ, ನಿಲ್ಲುವುದಕ್ಕೆ ಒಂದು ನಿಯಮ ಇದೆ. ಕೆಲವೊಮ್ಮೆ ಪೀಕ್‌ ಅವರ್‌ನಲ್ಲಿ ಇದು ಸ್ವಲ್ಪ ವ್ಯತ್ಯಯವಾಗುವುದು ಬಿಟ್ಟರೆ ಮೆಟ್ರೋ ತುಂಬಾ ಶಿಸ್ತುಬದ್ಧವಾಗಿಯೇ ಇರುತ್ತದೆ. ಇಂಥ ಮೆಟ್ರೋ ರೈಲಿನ ಒಳಗಡೆ ಯಾವುದೇ ತಿನಿಸನ್ನು ತಿನ್ನಬಾರದು (Eatables are not allowed in Metro) ಎನ್ನುವ ನಿಯಮವೂ ಇದೆ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ. ಇನ್ನು ಅಲ್ಲಿ ಸಹಜ ವರ್ತನೆಯನ್ನು ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈಗ ಮೆಟ್ರೋದ ಎಸ್ಕಲೇಟರ್‌ ಬಳಿ ವೃದ್ಧೆಯೊಬ್ಬರ ಬಳಿ ಕುಚೇಷ್ಟೆ ಮಾಡಿದ್ದಲ್ಲದೆ, ರೈಲಿನೊಳಗೆ ಕರೆಂಟ್‌ ಶಾಕ್‌ ಹೊಡೆದಂತೆ ನಟಿಸಿದ್ದ ಕಾರಣಕ್ಕೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜ್ವಲ್ (23) ಬಂಧಿತ ಆರೋಪಿ. ಈತ ಸೋಷಿಯಲ್‌ ಮೀಡಿಯಾ ಬಳಕೆದಾರನಾಗಿದ್ದು, ತನ್ನ ಒಂದು ವಿಡಿಯೊಗೋಸ್ಕರ ಚಿತ್ರವಿಚಿತ್ರವಾಗಿ ಆಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Metro nonsense prank video by youth

ಈತ ಮಾಡಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಪ್ರಾಂಕ್ ವಿಡಿಯೊಗಳನ್ನು ಪೋಸ್ಟ್ ಮಾಡುವ ಪ್ರಜ್ವಲ್‌, ಈ ಬಾರಿ ಇದಕ್ಕಾಗಿ ಮೆಟ್ರೋ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅಲ್ಲಿಗೆ ಬಂದ ಪ್ರಜ್ವಲ್‌, ಎಸ್ಕಲೇಟರ್‌ ಬಳಿ ಬಂದಿದ್ದಾನೆ. ಅಲ್ಲಿ ಮಹಿಳಾ ಪ್ರಯಾಣಿಕರೊಬ್ಬರನ್ನು ಹೆದರಿಸಲು ಪ್ರಯತ್ನಿಸಿದ್ದ. ಇದನ್ನು ವಿಡಿಯೊ ಮಾಡಿಕೊಂಡಿದ್ದ.

Metro nonsense prank video by youth

ಅಲ್ಲದೆ, ಚಲಿಸುತ್ತಿರುವ ಮೆಟ್ರೋದಲ್ಲಿ ಮೊದಲು ಕರೆಂಟ್‌ ಶಾಕ್‌ ಹೊಡೆದವನಂತೆ ನಾಟಕ ಮಾಡಿದ್ದಾನೆ. ಇದರಿಂದ ಅಕ್ಕಪಕ್ಕದವರು ಗಾಬರಿಯಾಗಿದ್ದಾರೆ. ಸಹ ಪ್ರಯಾಣಿಕರು ಆತನನ್ನೇ ದಿಟ್ಟಿಸಿ ನೋಡಿದ್ದಾರೆ. ತನಗೆ ಮೆಟ್ರೋ ಕಂಬಿಯಿಂದ ಏನೋ ಆಗಿದೆ ಎಂಬಂತೆ ಅದನ್ನೇ ನೋಡಿ ಇನ್ನೊಂದು ಕಡೆ ಬಂದು ನಿಂತಿದ್ದಾನೆ. ತನಗೆ ತಲೆ ಸುತ್ತಿದಂತೆ ನಟಿಸಿದ್ದಾನೆ. ಈ ವಿಡಿಯೊವನ್ನು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದು, “ಹೆಂಗೆ ಹೆಂಗಿದೆ ಓಪನಿಂಗ್‌ ಥ್ರಿಲ್‌” ಎಂದು ಹೇಳಿಕೊಂಡಿದ್ದಾನೆ. ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Metro nonsense prank video by youth

ಗೋಬಿ ತಿಂದವನಿಗೆ ಬಿತ್ತು ದಂಡ

ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಕುಳಿತು ಗೋಬಿ ಮಂಚೂರಿ (Gobi Manchuri) ತಿಂದವನಿಗೆ 500 ರೂ. ದಂಡ ವಿಧಿಸಲಾಗಿದೆ. ಜಯನಗರದ ಪ್ರತಿಷ್ಠಿತ ಆಭರಣ ಮಳಿಗೆ ಉದ್ಯೋಗಿ ಸುನೀಲ್‌ ಕುಮಾರ್ ಅವರೇ ದಂಡನೆಗೆ ಒಳಗಾದವರು. ಅವರು ಇತ್ತೀಚೆಗೆ ಮೆಟ್ರೋ ಬೋಗಿಯೊಳಗೆ ಕುಳಿತು ಆರಾಮವಾಗಿ ಗೋಬಿ ಮಂಚೂರಿ ತಿಂದಿದ್ದಾರೆ.

Metro nonsense prank video by youth

ಪ್ರತಿದಿನ ಸಂಪಿಗೆ ಮೆಟ್ರೋ ರೋಡ್ ಮೆಟ್ರೋ ನಿಲ್ದಾಣದಿಂದ ಜಯನಗರಕ್ಕೆ ಬರುತ್ತಿದ್ದ ಸುನೀಲ್ ಅದೊಂದು ದಿನ ರೈಲಿನಲ್ಲೇ ಗೋಬಿ ಮಂಚೂರಿ ಪಾರ್ಸೆಲ್‌ ತಂದು ಅದನ್ನು ಬಿಚ್ಚಿ ತಿಂದಿದ್ದರು. ಮೆಟ್ರೋ ನಿಯಮದ ಉಲ್ಲಂಘನೆಯ ವಿಷಯ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಮೆಟ್ರೋ ಅಧಿಕಾರಿಗಳು ನಿಯಮ ಉಲ್ಲಂಘನೆಗೆ ಸಂಬಂಧಿಸಿ ಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಜಯನಗರ ಪೊಲೀಸರು 500 ರೂ. ದಂಡ ವಿಧಿಸಿದರು.

ಗೋಬಿ ತಿಂದಿದ್ದು ಹೇಗೆ ಗೊತ್ತಾಯ್ತು?

ಹಾಗಿದ್ದರೆ ಸುನಿಲ್‌ ಕುಮಾರ್‌ ಅವರು ಗೋಬಿ ಮಂಚೂರಿ ತಿಂದಿದ್ದು ಅಧಿಕಾರಿಗಳಿಗೆ ಹೇಗೆ ಗೊತ್ತಾಯ್ತು ಅನ್ನೋ ಕುತೂಹಲ ನಿಮಗಿದೆಯಾ? ನಿಜವೆಂದರೆ, ಸುನಿಲ್‌ ಅವರು ಮೆಟ್ರೋದಲ್ಲಿ ಕುಳಿತು ಗೋಬಿ ಮಂಚೂರಿ ತಿನ್ನುವುದನ್ನು ವಿಡಿಯೋ ಮಾಡಿ ಅದನ್ನು ವೈರಲ್‌ ಮಾಡಿದ್ದು ಅವರ ಗೆಳೆಯರೆ. ತಮಾಷೆಗಾಗಿ ಮಾಡಿದ ವಿಡಿಯೊ ಅದನ್ನು ವೈರಲ್‌ ಮಾಡಿದ್ದರಿಂದ ಸುನಿಲ್‌ ವಿವಾದಕ್ಕೆ ಸಿಲುಕಿಕೊಂಡರು.

ಇದನ್ನೂ ಓದಿ: Namma Metro : ಮೆಟ್ರೋಗೆ ಚೀನಾದಿಂದ ಬರಲಿದೆ 12 ಬೋಗಿ; 2024ಕ್ಕೆ ಚಾಲಕ ರಹಿತ ಓಡಾಟ

ಹಾಗಿದ್ದರೆ ಮೆಟ್ರೋದಲ್ಲಿ ಪಾಲಿಸಬೇಕಾದ ಸಾಮಾನ್ಯ ನಿಯಮಗಳೇನು?

Exit mobile version