ಬೆಂಗಳೂರು: ಮಂಗಳವಾರ ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರಿನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರ್ ಅವರು ಜೂನ್ ೨೯ರಂದು ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಅವರ ಭೀಕರ ಕೊಲೆಯನ್ನು ತೀವ್ರವಾಗಿ ಖಂಡಿಸಿದ್ದರು.
ಆ ಘಟನೆಯನ್ನು ಖಂಡಿಸಿ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಅವರು, ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಕನ್ಹಯ್ಯ ಲಾಲ್ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಾದ ರಿಯಾಜ್ ಅಟ್ಟಾರಿ ಮತ್ತು ಮಹಮ್ಮದ್ ಗೌಸ್ ಕತ್ತು ಕೊಯ್ದು ಕೊಲೆ ಮಾಡಿದ್ದರು. ಪ್ರವೀಣ್ ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.
ಆವತ್ತು ಕನ್ಹಯ್ಯ ಲಾಲ್ ಅವರ ಹತ್ಯೆಯನ್ನು ಖಂಡಿಸಿ ಮಾಡಿದ ಪೋಸ್ಟ್‌ನಲ್ಲಿ ಪ್ರವೀಣ್ ಅವರು ಶೈಲಜಾ ಅಮರನಾಥ್, ಪ್ರತಿಭಾ ಕುಳಾಯಿ, ನಜ್ಮಾ ನಝೀರ್, ರಮ್ಯಾ ದಿವ್ಯ ಸ್ಪಂದನಾ ಮೊದಲಾದವರನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದರು.
ʻʻರಾಷ್ಟ್ರೀಯ ಚಿಂತನೆಗೆ ಬೆಂಬಲಿಸಿದ ಮಾತ್ರಕ್ಕೆ ಇಂದು ಓರ್ವ ಬಡಪಾಯಿ ಟೈಲರ್‌ನನ್ನು ಬಹಿರಂಗವಾಗಿ ಕತ್ತು ಕೊಯ್ದು ವಿಡಿಯೊ ಮಾಡಿ ಇನ್ನು ನಮ್ಮ ಮುಂದಿನ ಟಾರ್ಗೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತ ಬೊಗಳುತ್ತಿದ್ದಾವೆ ಅಲ್ವಾ ಈ ಮತಾಂಧ ನಾಯಿಗಳು.. ಈಗ ಎಲ್ಲಿದ್ದೀರಿ.. ನೀವೆಲ್ಲರೂ.. ಈಗ ಯಾಕೆ ನಿಮ್ಮ ಧ್ವನಿ ಪೆಟ್ಟಿಗೆ ಸುಟ್ಟು ಹೋಯಿತೇ? ನಿಮ್ಮದೇ ಕೃಪಾಪೋಷಿತ ಕಾಂಗ್ರೆಸ್ ಸರಕಾರ ಇರುವ ರಾಜ್ಯದ ಒಂದು ಸ್ಥಳದಲ್ಲಿ ಈ ರೀತಿ ಆಗುತ್ತಿದೆ ಅಲ್ವಾ? ಈಗ ನಿಮ್ಮ ನಾಲಿಗೆ ಅಲ್ಲಾಡುವುದಿಲ್ಲವೇ? ಆ ಬಡಪಾಯಿ ಜೀವದ ಬಗ್ಗೆ ಕರುಣೆ ಇಲ್ಲದೆ ಹೋಯಿತೇ ನಿಮ್ಮಂಥ ಕಪಟಿ ಕನಿಕರದ ಮುಖವಾಡಗಳಿಗೆ..? ಉತ್ತರಿಸಿʼʼ ಎಂದು ಬರೆಯಲಾಗಿತ್ತು.
ಕನ್ಹಯ್ಯಲಾಲ್ ಹಂತಕರು ಕೇವಲ ಉದಯಪುರದಲ್ಲಿ ಮಾತ್ರವಲ್ಲ ರಾಜಸ್ಥಾನದ ಹಲವು ಭಾಗಗಳಲ್ಲಿ ಅಮಾಯಕರ ಹತ್ಯೆಗೆ ಸಂಚು ನಡೆಸಿದ್ದರು. ಪಾಕಿಸ್ತಾನ, ದುಬೈ ಮತ್ತು ನೇಪಾಳದಲ್ಲಿ ತರಬೇತು ಪಡೆದಿದ್ದ ಈ ದುಷ್ಟರಿಗೆ ಪಾಕಿಸ್ತಾನದ ಮೂಲಭೂತವಾದಿ ಧಾರ್ಮಿಕ ಸಂಘಟನೆ ದವಾತ್ ಇ ಇಸ್ಲಾಮಿ ಸಂಘಟನೆಯ ಜತೆ ಸಂಪರ್ಕವಿತ್ತು.
ದೇಶದ ನಾನಾ ಕಡೆ ಕನ್ಹಯ್ಯಲಾಲ್ ಮಾದರಿಯಲ್ಲಿ ಹತ್ಯೆ ನಡೆದಿದೆ. ಪ್ರವೀಣ್ ಅವರ ಚಿಕನ್ ಸೆಂಟರ್‌ಗೆ ಬಂದ ದುಷ್ಕರ್ಮಿಗಳು ಕೂಡಾ ಅದೇ ಸ್ಟೈಲಲ್ಲಿ ಕೊಲೆ ಮಾಡಲು ಸಂಚು ನಡೆಸಿರಬಹುದೇ ಎಂಬ ಸಂಶಯವೂ ಇದ್ದು ಪೊಲೀಸರ ತನಿಖೆಯಿಂದ ಬಯಲಾಗಬೇಕಾಗಿದೆ.
ಇದನ್ನೂ ಓದಿ | Praveen Nettaru | ಕಟೀಲ್‌ಗೆ ಹಿಂದು ಕಾರ್ಯಕರ್ತರ ಮುತ್ತಿಗೆ, ಕಾರು ಮಗುಚಲು ಯತ್ನ