Site icon Vistara News

Praveen Nettaru | ತಾಕ್ಕತ್ತಿದ್ರೆ ಒಬ್ಬನೇ ಒಬ್ಬ ಕಾರ್ಯಕರ್ತನ ಮುಟ್ಟಿ ನೋಡಿ ಎಂದಿದ್ದ ನಳಿನ್‌ ಕುಮಾರ್‌ ಕಟೀಲ್!

Praveen nettaru

ಗದಗ: ನಾನು ಕರಾವಳಿ ಜಿಲ್ಲೆಯಲ್ಲಿ ಹೋರಾಟ ಮಾಡಿ ಬಂದವನು. ತಾಕ್ಕತ್ತಿದ್ರೆ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ಮುಟ್ಟಿ ನೋಡಿ. ಭಾರತೀಯ ಜನತಾ ಪಾರ್ಟಿ ಇದಕ್ಕೆ ಉತ್ತರ ಕೊಡಲು ಸಿದ್ಧವಿದೆ. ನಮ್ಮ ಯಾವ ಕಾರ್ಯಕರ್ತನೂ ಭಯ ಪಡುವ ಅವಶ್ಯಕತೆಯಿಲ್ಲ. ಗೂಂಡಾಗಿರಿಯ ರಾಜಕಾರಣ ಮುಗಿದುಹೋಯ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಗದಗದಲ್ಲಿ ಕೆಲ ತಿಂಗಳ ಹಿಂದೆ ಮಾತನಾಡಿದ್ದ ವಿಡಿಯೊ ಹಾಗೂ ಫೇಸ್‌ಬುಕ್‌ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರವೀಣ್‌ ನೆಟ್ಟಾರು (‌Praveen Nettaru) ಹತ್ಯೆ ಪ್ರಕರಣದಲ್ಲಿ ಈ ಹೇಳಿಕೆ ಭಾರಿ ಮಹತ್ವವನ್ನು ಪಡೆದುಕೊಂಡಿದೆ.

ಈ ಹಿಂದೆ ಗದಗ ನಗರದ ನೂತನ ಬಿಜೆಪಿ ಕಚೇರಿ ಶಿಲಾನ್ಯಾಸಕ್ಕೆ ಕಟೀಲ್‌ ಆಗಮಿಸಿದ್ದ ವೇಳೆ, ಹಿಂದು ಕಾರ್ಯಕರ್ತರಿಗೆ, ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ಸಿಗಲಿದೆ ಎಂಬ ಮಾತುಗಳನ್ನು ಆಡಿದ್ದರು. ಈಗ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಕಟೀಲ್‌ ಅವರ ಹೇಳಿಕೆಯುಳ್ಳ ವಿಡಿಯೊ ಹಾಗೂ ಪೋಸ್ಟರ್‌ಗಳು ಫೇಸ್‌ಬುಕ್‌ ಸಹಿತ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.‌

ಸೋಷಿಯಲ್‌ ಮೀಡಿಯಾದಲ್ಲಿ ಕಾಲೆಳೆದ ನೆಟ್ಟಿಗರು

ಇದನ್ನೂ ಓದಿ | Praveen Nettaru| ಪ್ರವೀಣ್‌ ಕುಟುಂಬದ ಸ್ಥಿತಿ ಶತ್ರುವಿಗೂ ಬರಬಾರದು, ನೆಟ್ಟಾರಿನಲ್ಲಿ ವಿಜಯೇಂದ್ರ ಹೇಳಿಕೆ

ಪಕ್ಷಾತೀತವಾಗಿ ವಿಡಿಯೊ ಶೇರ್!‌

ಹಿಂದು ಕಾರ್ಯಕರ್ತನ್ನು ಮುಟ್ಟಿ ನೋಡಿ ಎಂದು ಹೇಳಿಕೆ ನೀಡಿದ್ದ ನಳಿನ್‌ ಕುಮಾರ್‌ ಕಟೀಲ್‌ ಅವರ ವಿಡಿಯೊವನ್ನು ಪ್ರತಿಪಕ್ಷ ಮತ್ತು ಸ್ವಪಕ್ಷದವರಾದಿಯಾಗಿ ಪಕ್ಷಾತೀತವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಲಾಗುತ್ತಿದೆ. ಈ ಮೂಲಕ ನಿಮ್ಮ ಮಾತಿಗೆ ಬದ್ಧರಾಗಿಲ್ಲ ಏಕೆ ಎಂದು ಜನತೆ ಪ್ರಶ್ನೆ ಮಾಡುತ್ತಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ಸಹ ಪ್ರಶ್ನೆ ಮಾಡುತ್ತಿದ್ದು, “ಈಗ ನಿಮ್ಮ ಜಿಲ್ಲೆಯಲ್ಲೇ ನಿಮ್ಮದೇ ಯುವ ಕಾರ್ಯಕರ್ತರಿಂದ ಮುತ್ತಿಗೆ ಹಾಕಿಸಿ ಕೊಂಡಿದ್ದೀರಾ?” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಈಗ ಎಲ್ಲಿ ಹೋಯಿತು ನಿಮ್ಮ ಧೈರ್ಯ, ರೋಷ, ಆವೇಶದ ಬಗ್ಗೆ ಹೇಳಿ BJP KARNATAKA? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ | Praveen Nettaru | ಮೃತ ಪ್ರವೀಣ್ ಕುಟುಂಬಕ್ಕೆ ₹10 ಲಕ್ಷ ವೈಯಕ್ತಿಕ ನೆರವು; ಸಚಿವ ಡಾ.ಅಶ್ವತ್ಥನಾರಾಯಣ

Exit mobile version