ಸುಳ್ಯ: ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡನ (Praveen Nettaru Murder) ಮೃತ ದೇಹದ ಅಂತಿಮ ಯಾತ್ರೆ ಆರಂಭವಾಗಿದೆ. ಪುತ್ತೂರಿನ ಧರ್ಬೆಯಿಂದ ಬೆಳ್ಳಾರೆಗೆ ಮೆರವಣಿಗೆ ಹೊರಡುತ್ತಿದೆ. ಆಂಬ್ಯುಲೆನ್ಸ್ ಮೂಲಕ ಮೃತದೇಹ ಕೊಂಡೊಯ್ಯಲಾಗುತ್ತಿದೆ.
ಕೇರಳದಿಂದ ಬಂದರೇ ಪ್ರವೀಣ್ ಹಂತಕರು?
ಪ್ರವೀಣ್ ಹಂತಕರು ಕೇರಳದಿಂದ ಕಾಸರಗೋಡು ಮೂಲಕ ಬೈಕ್‌ನಲ್ಲಿ ಆಗಮಿಸಿ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರವೀಣ್ ಹತ್ಯೆಗೆ ಕೆರಳಿದ ಮಂಗಳೂರು
ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಸುಳ್ಯ ಮತ್ತಿತರ ಕಡೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪ್ರವೀನ್ ಮೃತದೇಹ ಮೆರವಣಿಗೆಗೆ ಕುಟುಂಬಸ್ಥರು ಹಾಗೂ ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಇದೀಗ ಪುತ್ತೂರಿನ ಮೂರು ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಈಗಾಗಲೇ ಆರೋಪಿಗಳನ್ನು ಹುಡಕಾಡಲು ಐದು ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಕೆಲವೇ ಕ್ಷಣಗಳಲ್ಲಿ ವಿಧಿವಿಜ್ಞಾನ ತಂಡ ಭೇಟಿ ನೀಡಲಿದೆ. ಶರತ್ ಮಡಿವಾಳ ರೀತಿಯಲ್ಲಿಯೇ ತಲ್ವಾರ್‌ನಿಂದ ದಾಳಿ ಆಗಿದ್ದು, ಕರಾವಳಿ ಇದೀಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಬಿಜೆಪಿ ನಾಯಕರು ಸ್ಥಳಕ್ಕೆ ಇನ್ನೂ ಭೇಟಿ ನೀಡದ ಹಿನ್ನೆಲೆಯಲ್ಲಿ ಪ್ರವೀಣ್ ಬೆಂಬಲಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮೃತ ಪ್ರವೀಣ್ ಕುಟುಂಬಸ್ಥರಿಂದ ಆಕ್ರೋಶ
ಮಂಗಳವಾರ (ಜು.26) ರಾತ್ರಿಯಿಂದ ಪ್ರವೀಣ್ ಮೃತದೇಹ ಶವಾಗಾರದಲ್ಲಿತ್ತು. ಮುಖಂಡರು ಬೆಳಗ್ಗೆ ಆಗಮಿಸಲು ತಡ ಮಾಡಿದ ಕಾರಣ ಪ್ರವೀಣ್ ಕುಟುಂಬಸ್ಥರು ಆಕ್ರೋಶ ಹೊರ ವ್ಯಕ್ತಪಡಿಸಿದ್ದರು. ʻಅಂತಿಮ ಸಂಸ್ಕಾರ ಮಾಡುವುದು ನಮಗೆ ಗೊತ್ತಿದೆ. ಯಾರೂ ಮೃತ ದೇಹದ ಜತೆ ಬರುವ ಅಗತ್ಯ ಇಲ್ಲ. ಬಡವರು ಸತ್ತರೆ ನೀವು ತೋರಿಸುವ ಹಿಂದುತ್ವ ಇದೇನಾʼ ಎಂದು ಪ್ರವೀಣ್ ಅವರ ಮಾವ ಜಯರಾಮ್ ಪ್ರಶ್ನಿಸಿದರು.
ಇದನ್ನೂ ಓದಿ | Praveen Nettaru Murder | ಪುತ್ತೂರಿನಲ್ಲಿ ಪರಿಸ್ಥಿತಿ ಉದ್ವಿಗ್ನ, ಹಲವೆಡೆ ಸ್ವಯಂಪ್ರೇರಿತ ಬಂದ್
ಹಿಂದೂ ಮುಖಂಡರು ಜಯರಾಮ್ ಅವರನ್ನು ಮನವೊಲಿಸಿದರು. ಪ್ರವೀಣ್ ಅವರ ಮನೆಗೆ ಹಿರಿಯ ನಾಯಕರು ಬರುವುದಾಗಿ ಭರವಸೆ ನೀಡಿದರು. ಭರವಸೆ ಬಳಿಕ ಮೃತ ದೇಹವನ್ನು ಆಸ್ಪತ್ರೆಯಿಂದ ಸಾಗಿಸಲಾಯಿತು.
ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಚಿಕನ್ ಸೆಂಟರ್ ನಡೆಸುತ್ತಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (೨೯) ಅವರನ್ನು ಅವರ ಅಂಗಡಿ ಬಳಿಯೇ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದಿದ್ದ ಮೂವರು ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಬೈಕ್ ಕೇರಳ ರಿಜಿಸ್ಟ್ರೇಷನ್ ಹೊಂದಿತ್ತು ಎಂಬುದು ಗೊತ್ತಾಗಿದೆ. ಹೀಗಾಗಿ ಕೇರಳ ಮೂಲದ ದುಷ್ಕರ್ಮಿಗಳು ಕೊಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಬೈಕ್ ಬಗ್ಗೆ ಮತ್ತಷ್ಟು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಇದನ್ನೂ ಓದಿ | ಕೇರಳ ರಿಜಿಸ್ಟ್ರೇಷನ್ ಬೈಕ್‌ನಲ್ಲಿ ಬಂದಿದ್ದ 3 ದುಷ್ಕರ್ಮಿಗಳಿಂದ ಪ್ರವೀಣ್ ನೆಟ್ಟಾರು ಹತ್ಯೆ