Site icon Vistara News

Praveen Nettaru | ಪ್ರವೀಣ್ ಕುಟುಂಬಕ್ಕೆ ಸಂಘ ಪರಿವಾರದಿಂದ 50 ಲಕ್ಷ ರೂ. ನೆರವು

Praveen Nettaru

ಪುತ್ತೂರು: ಬೆಳ್ಳಾರೆಯಲ್ಲಿ ಮಂಗಳವಾರ (ಜುಲೈ 26) ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು (34) ಅವರ (Praveen Nettaru) ಕುಟುಂಬಕ್ಕೆ ಸಂಘ ಪರಿವಾರದ ವತಿಯಿಂದ 50 ಲಕ್ಷ ರೂ. ಆರ್ಥಿಕ ನೆರವು ಘೋಷಿಸಲಾಗಿದೆ. ಈ ಮೂಲಕ ಹಿಂದು ಕಾರ್ಯಕರ್ತನ ಮನೆಯವರ ನೆರವಿಗೆ ಧಾವಿಸಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ದಕ್ಷಿಣ ಪ್ರಾಂತ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸೇವಾ ಪ್ರಮುಖ್ ನಾ. ಸೀತಾರಾಮ ಅವರು, ಸಂಘ ಪರಿವಾರದ ವತಿಯಿಂದ ಮೃತ ಪ್ರವೀಣ್‌ ನೆಟ್ಟಾರು ಕಟುಂಬಕ್ಕೆ 50 ಲಕ್ಷ ರೂ. ಆರ್ಥಿಕ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | Praveen Nettar| ‌ಪ್ರವೀಣ್‌ ಕೊಲೆಗೆ ಉದಯಪುರದ ಕನ್ಹಯ್ಯಲಾಲ್‌ ಹತ್ಯೆ ಲಿಂಕ್‌

Exit mobile version