ಬಳ್ಳಾರಿ, ಕರ್ನಾಟಕ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉತ್ತಮ ಪ್ರಮಾಣದಲ್ಲಿ ಮತದಾನ ಆಗಿದೆ. ಮತದಾನ (Karnataka Election Voting) ಮಾಡಲು ಬಂದ ತುಂಬು ಗರ್ಭಿಣಿಯೊಬ್ಬಳು ಮತಗಟ್ಟೆಯಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಬಳ್ಳಾರಿ ಜಿಲ್ಲೆಯ ಕರ್ಲಗಿಂಡಿ ಹಳ್ಳಿಯಲ್ಲಿ ನಡೆದಿದೆ.
ಸಮೀಪದ ಕೊರಲಗುಂದಿ ಗ್ರಾಮದ ಮಣಿಲಾ (23) ಗರ್ಭಿಣಿ ಅವರು ಮತ ಚಲಾವಣೆಗೆ ಬಂದಿದ್ದಾರೆ. ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹಾಗಾಗಿ ತಕ್ಷಣವೇ ಸಹಾಯಕ್ಕೆ ಬಂದ ಮತಗಟ್ಟೆಯಲ್ಲಿದ್ದ ಮಹಿಳಾಧಿಕಾರಿಗಳು ಮತ್ತು ಮತದಾರರು ಹೆರಿಗೆ ಮಾಡಿಸಲು ನೆರವು ನೀಡಿದರು. ಸದ್ಯಕ್ಕೆ ತಾಯಿ ಮತ್ತು ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಸಿದ್ದಾರೆ.
ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮೊದಲ ಮತ ಚಲಾಯಿಸಿದ ಗರ್ಭಿಣಿ
ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ 9 ತಿಂಗಳ ಗರ್ಭಿಣಿ ಮೊದಲ ಮತ ಚಲಾಯಿಸಿದ್ದಾರೆ. ಅವರು ಬಾಗಲಗುಂಟೆ ನಿವಾಸಿ ವಿದ್ಯಾ. ದಾಸರಹಳ್ಳಿಯ ಮತಗಟ್ಟೆ 74ರಲ್ಲಿ ಮತಚಲಾವಣೆ ಮಾಡಿದ್ದಾರೆ.
ಮತದಾನ ಮಾಡಿ ಆಸ್ಪತ್ರೆಗೆ ದಾಖಲಾದ ಗರ್ಭಿಣಿ
ಚಿಕ್ಕಮಗಳೂರು: ತುಂಬು ಗರ್ಭೀಣಿಯಿಂದ ಮತಗಟ್ಟೆಗೆ ಬಂದು ಮತದಾನ ಮಾಡಿ, ಬಳಿಕ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಸ್ವಾತಿ ಮತದಾನ ಮಾಡಿ ಆಸ್ಪತ್ರೆಗೆ ಹೋದ ಗೃಹಿಣಿಯಾಗಿದ್ದಾರೆ. ಇವರು ಚಿಕ್ಕಮಗಳೂರು ನಗರದ ನಾರಾಯಣಪುರ ನಿವಾಸಿಯಾಗಿದ್ದಾರೆ.
ಇದನ್ನೂ ಓದಿ: Karnataka Election : ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾದ ಮತದಾನ
ವೈದ್ಯರು ನಿನ್ನೆಯೇ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದರು. ಮತದಾನ ಮಾಡಬೇಕೆಂಬ ಕಾರಣಕ್ಕೆ ಸ್ವಾತಿ ಅವರು ನಿನ್ನೆ ಆಸ್ಪತ್ರೆಗೆ ಹೋಗಿರಲಿಲ್ಲ. ಈಗ ಇಂದು ಮತದಾನ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತದಾನ ಅಮೂಲ್ಯವಾದದ್ದು ಎಲ್ಲರೂ ಮತದಾನ ಮಾಡಿ ಎಂದು ಮನವಿ ಕೂಡ ಮಾಡಿದ್ದಾರೆ.