ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದೇಶವ್ಯಾಪಿ ಪಾದಯಾತ್ರೆಯಾದ ಭಾರತ್ ಜೋಡೊ, ಸೆಪ್ಟೆಂಬರ್ 7 ರಂದು (Bharat Jodo Yatra) ಆರಂಭವಾಗುವ ಹಿನ್ನೆಲೆಯಲ್ಲಿ ಇಂದು ಪಕ್ಷದ ಸಿದ್ಧತೆ ಬಗ್ಗೆ ಸಭೆ ನಡೆಯಲಿದೆ.
ಇಂದು ಸಂಜೆ 7 ಗಂಟೆಗೆ ಖಾಸಗಿ ಹೊಟೇಲ್‌ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಭಾಗವಹಿಸಲಿದ್ದಾರೆ.
ಮಾಜಿ ಸಚಿವ ಯುಟಿ ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷರಗಳಾದ ಈಶ್ವರ ಖಂಡ್ರೆ, ಸಲೀ ಅಹ್ಮದ್, ರಾಮಲಿಂಗರೆಡ್ಡಿ, ಸತೀಶ್ ಜಾರಕಿಹೊಳಿ, ಆರ್ ಧ್ರುವನಾರಾಯಣ್ ಸೇರಿದಂತೆ ಶಾಸಕರು, ಪರಿಷತ್ತು ಸದಸ್ಯರು ಹಾಜರಾಗಲಿದ್ದಾರೆ. ಭಾರತ್ ಜೋಡೊ ತಯಾರಿ ಹಾಗೂ ಸೆಪ್ಟೆಂಬರ್ 12 ರಂದು ಅಧಿವೇಶನ ಪ್ರಾರಂಭದ ಬಗ್ಗೆ ಚರ್ಚೆ ನಡೆಯಲಿದೆ.
ರಾಜ್ಯದಲ್ಲಿ ಪಾದಯಾತ್ರೆ ಸಂಚರಿಸುವ ಎಂಟು ಜಿಲ್ಲೆಗಳಲ್ಲಿ ಇಂದು ಭಾರತ್ ಜೋಡೋ ಲೋಗೊ ಬಿಡುಗಡೆಯಾಗಲಿದೆ. ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಲೊಗೊ ಬಿಡುಗಡೆ ಮಾಡಲಿದ್ದಾರೆ. ಒಟ್ಟು ೩,೫೦೦ ಕಿ.ಮೀಟರ್ ಉದ್ದದ ಈ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಲಿದೆ.
ಇದನ್ನೂ ಓದಿ:Ghulam Nabi Azad | ಅಪ್ರಬುದ್ಧತೆಯಿಂದ ಸಿಡುಕಿನವರೆಗೆ… ರಾಹುಲ್ ಗಾಂಧಿ ವಿರುದ್ಧ ಗುಲಾಂ ನಬಿ ಮಾಡಿದ 10 ಟೀಕೆಗಳು!