Site icon Vistara News

Price Rise: ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕಿರುವುದು ಕೇಂದ್ರ ಸರ್ಕಾರ: ಸಿಎಂ ಸಿದ್ದರಾಮಯ್ಯ

Siddaramaiah in Kempegowda jayanti

#image_title

ಬೆಂಗಳೂರು:ಹಣ್ಣು ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು(Price Rise) ತಡೆಗಟ್ಟಬೇಕಾಗಿರುವುದು ಕೇಂದ್ರ ಸರ್ಕಾರದ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನಲೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಕೆಂಪೇಗೌಡ ಜಯಂತಿಯನ್ನು ಎಲ್ಲಾ 31 ಜಿಲ್ಲೆಗಳಲ್ಲಿ ಆಚರಿಸುತ್ತಿದ್ದೇವೆ. 5 ದಿಕ್ಕುಗಳಿಂದ ಜ್ಯೋತಿ ತರಲಾಗಿದೆ. ನಮ್ಮ ಸರ್ಕಾರ ಇದ್ದಾಗ ಕೆಂಪೇಗೌಡ ಜಯಂತಿ ಆಚರಣೆ ಆರಂಭ ಮಾಡಿದ್ದೆವು. ಅದಕ್ಕೂ ಮುಂಚೆ ಸರ್ಕಾರದ ವತಿಯಿಂದ ಆಚರಣೆ ಆಚರಣೆ ಆಗ್ತಿರಲಿಲ್ಲ. ಕೆಂಪೇಗೌಡ ಪ್ರಾಧಿಕಾರವನ್ನು ರಚನೆ ಮಾಡಿದ್ದು ನಾವು.

ಬೆಂಗಳೂರು ಏರ್ಪೋರ್ಟ್ ಗೆ ಕೆಂಪೇಗೌಡರ ಹೆಸರನ್ನ ಇಟ್ಟಿದ್ದು ನಾವೆ. ಬೆಂಗಳೂರು ಅಭಿವೃದ್ಧಿ ಆಗಬೇಕಾದರೆ ಕೆಂಪೇಗೌಡರು ಅಡಿಪಾಯ ಹಾಕಿದ್ದರು. ಆ ಕಾಲದಲ್ಲೇ ಎಲ್ಲ ಜನಾಂಗಕ್ಕೆ ಪೇಟೆ ಮಾಡಿದ್ರು. ಬೆಂಗಳೂರು ಬೆಳೆದಿರೋದಕ್ಕೆ ಅವರ ದೂರದೃಷ್ಟಿ ಕಾರಣ. ನಾವು ಅವರಿಂದ ನಮಗೆ ಸ್ಪೂರ್ತಿ ಪಡೆಯಬೇಕಾಗಿದೆ ಎಂದರು.

ಅಹಾರ ಧಾನ್ಯಗಳ ಬೆಲೆ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದನ್ನು ನಿಯಂತ್ರಣ ಮಾಡಬೇಕಾದವ್ರು ಯಾರು? ಕೇಂದ್ರ ಸರ್ಕಾರ ಅಲ್ವಾ? We are Looking to it ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಇಲ್ಲ ವ್ಯತ್ಯಾಸ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರಲ್ಲಿ ಎಷ್ಟಿದೆ ದರ?

ಕರ್ನಾಟಕವಷ್ಟೆ ಅಲ್ಲದೆ ದೇಶದ ವಿವಿಧೆಡೆ ಟೊಮ್ಯಾಟೊ ದರ 100 ರೂ. ಗಡಿ ದಾಟಿದೆ. ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಹಠಾತ್ ಟೊಮ್ಯಾಟೋ ದರ ಏರಿಕೆ ಆಗಿದೆ. ಟೊಮ್ಯಾಟೋ ಇಳುವರಿ ಕಡಿಮೆಯಾದ ಹಿನ್ನೆಲೆ ಮಾರುಕಟ್ಟೆಗಳಲ್ಲಿ ದರ ಏರಿಕೆ ಆಗಿದೆ.

ಕಳೆದ ಕೆಲ ದಿನಗಳಿಂದ ದೇಶದಲ್ಲಿ ಮಳೆ ಪ್ರಾರಂಭಗೊಂಡಿದ್ದು, ಟೊಮ್ಯಾಟೋ ಬೆಳೆ ನಾಶವಾಗತೊಡಗಿದೆ. ಈ ಹಿನ್ನೆಲೆ ದೇಶದ ಬಹುತೇಕ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ದರ 100 ರೂ ದಾಟಿದೆ. ಕಳೆದ ವಾರ 40-50 ರೂ. ಇದ್ದ ಟೊಮ್ಯಾಟೋ ದರ ಇದೀಗ 100ರ ಗಡಿ ದಾಟಿದೆ.

Exit mobile version