ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂಧ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮೈಸೂರಿನಲ್ಲಿ ನಾಳೆ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಮೋದಿಯವರಿಗೆ ಮೈಸೂರು ಪೇಟ
ಮೈಸೂರಿಗೆ ಭೇಟಿ ನೀಡಲಿರುವ ಮೋದಿಯವರಿಗೆ ಆಕರ್ಷಕ ಮೈಸೂರು ಪೇಟ ನೀಡಿ ಗೌರವಿಸಲಾಗುವುದು.
ಮೈಸೂರು ಮಹಾರಾಜರಂತೆ ಕೆಂಪು ಪೇಟ ತೊಡಿಸಲು ತಯಾರಿ ನಡೆದಿದೆ. ಮೋದಿಗಾಗಿ ಆಕರ್ಷಕ ಪೇಟವನ್ನು
ಮೈಸೂರಿನ ಕಲಾವಿದ ನಂದನ್ ತಯಾರಿಸಿದ್ದಾರೆ.
ರೇಷ್ಮೆ ನೂಲಗಳಿಂದ ಈ ಮೈಸೂರು ಪೇಟವನ್ನು ತಯಾರಿಸಲಾಗಿದೆ. ಕೆಂಪು ಹಾಗೂ ಗೋಲ್ಡ್ ಕಲರ್ ಇರುವ ಮೈಸೂರು ಸಾಂಪ್ರದಾಯಿಕ ಶೈಲಿಯ ಪೇಟ ಇದಾಗಿದೆ. ಇಂದು ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿಗೆ ಮೈಸೂರು ಪೇಟ ತೊಡಿಸಲಾಗುವುದು.
ಪಿಎಂ ನರೇಂದ್ರ ಮೋದಿ ಅವರ ಪ್ರವಾಸದ ವಿವರಗಳು ಇಂತಿವೆ.
ಇಂದು ಬೆಳಿಗ್ಗೆ 9-20 ಕ್ಕೆ ದೆಹಲಿ ಏರ್ಪೋರ್ಟ್ ಬಿಡಲಿರುವ ಸಿಎಂ ಬಸವರಾಜ ಬೊಮ್ಮಯಿ
11-20ಕ್ಕೆ ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಗೆ ಆಗಮನ
ಪಿಎಂ ಬರಮಾಡಿಕೊಳ್ಳಲಿರುವ ಸಿಎಂ ಬಸವರಾಜ ಬೊಮ್ಮಯಿ
12-30 ಯಿಂದ 12-50 ರ ತನಕ ಬ್ರೈನ್ ರಿಸರ್ಚ್ ಸೆಂಟರ್ ಉದ್ಘಾಟನೆ,ಪಾರ್ಥಸಾರಥಿ ಆಸ್ಪತ್ರೆ ಶಂಕುಸ್ಥಾಪನೆಯ ಕಾರ್ಯಕ್ರಮ
01-30ಕ್ಕೆ ಕೊಮ್ಮಘಟ್ಟ ಹೆಲಿಕಾಪ್ಟರ್ ಮೂಲಕ ತೆರಳುವುದು
01-45ಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ
ಡಾ.ಬಿ.ಆರ್ ಅಂಬೇಡ್ಕರ್
ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಉದ್ಘಾಟನೆ
ಉನ್ನತೀಕರಿಸಿದ ಕೈಗಾರಿಕಾ ತರಬೇತಿ ಸಂಸ್ಥೆಗಳ ಲೋಕಾರ್ಪಣೆ
02-45-04 ಗಂಟೆ ವರೆಗೂ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ
04-30 ಕ್ಕೆ ಕೊಮ್ಮಘಟ್ಟ ಹೆಲಿಪ್ಯಾಡ್ ಇಂದ ಮೈಸೂರಿಗೆ ಹೊರಡುವುದು
05-30 ಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವುದು.
07 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ ಮಾಡಿ ಶ್ರೀಗಳ ಅಶಿರ್ವಾದ ಪಡೆಯುವುದು
8 ಗಂಟೆಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಮತ್ತು ದೇವಿಗೆ ವಿಶೇಷ ಪೂಜೆ ಸಲ್ಲಿಸಲಿರುವ ಬೊಮ್ಮಯಿ
08-25ಕ್ಕೆ ಪಿಎಂ ಮೈಸೂರಿಗೆ ವಾಪಸು ಹಾಗು ವಾಸ್ತವ್ಯ..