ಬೆಂಗಳೂರು: ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರಿನ ರೀತಿಯಲ್ಲೆ ಇಎಸ್‌ಐ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ ಎಂಬ ಚಕ್ರವರ್ತಿ ಸೂಲಿಬೆಲೆ ಆರೋಪದ ವಿಚಾರಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮಾನಹಾನಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲಸ ಇಲ್ಲದವರು ಮೈ ಎಲ್ಲಾ ಪರಚಿಕೊಂಡ್ರಂತೆ. ಸೂಲಿಬೆಲೆ ಹಾಗೂ ಬಿಜೆಪಿಯವರು ಪ್ರಚಾರ ಮಾಡ್ತಲೇ ಇದ್ದಾರೆ ಇದನ್ನು. ಹಾಗಾದರೆ ಡಿಮಾಲಿಷ್ ಮಾಡಿ, ಯಾರು ಬೇಡ ಅಂದ್ರು? ಮೈಮೇಲೆ ಪ್ರಜ್ಞೆ ಇದ್ಯಿಯಾ ಇವರಿಗೆ? ಪ್ರಬುದ್ಧರು ಅಂತಾರ ಇವರಿಗೆ?
ಸೂಲಿಬೆಲೆ 10 ವರ್ಷಗಳಿಂದ ಎಷ್ಟು ಸುಳ್ಳು ಹೇಳಿದ್ದಾನೆ ತೆಗೆದು ನೋಡಿ. ನಾನು ವಾರ್ನಿಂಗ್ ಮಾಡ್ತೇನೆ, ಇವರು ಕ್ರಿಮಿನಲ್ ಡಿಫಾಮೆಷನ್ ಎದುರಿಸಬೇಕಾಗುತ್ತದೆ. ಬಡವರಿಗೆ ಕಟ್ಟಿರುವ ಆಸ್ಪತ್ರೆ ಅದು. ಸರ್ಕಾರ ಬಂದು 9 ವರ್ಷ ಆಯಿತು. ಇವರಿಗೆ ESI ಕಟ್ಟೋದು ಬಿಡಿ, ಆಸ್ಪತ್ರೆಗೆ ಪೇಂಟ್ ಮಾಡುವ ಯೋಗ್ಯತೆ ಇಲ್ಲ.
ಇವರು ಬಾಡಿಗೆ ಭಾಷಣಕಾರರು. ಎಷ್ಟು ಬಾಡಿಗೆ ಕೊಡ್ತಾರೆ, ಅಷ್ಟು ಭಾಷಣ ಮಾಡ್ತಾರೆ. ಯಾರಾದರೂ ಆ ರೀತಿ ಮಾಡ್ತಾರಾ? ವೈಜ್ಞಾನಿಕವಾಗಿ ಕಟ್ಟಿರುತ್ತಾರೆ. ಮೋದಿ ಇವರ ಸಮೀಪದವರು ಅಲ್ಲವಾ? ಆಕ್ಷನ್ ತೆಗೆದುಕೊಳ್ಳಿ. ಅವನು ಯಾವನೋ ಹೇಳ್ತಾನೆ ಅಂತ ಮಾಧ್ಯಮದವರು ನಂಬಬೇಡಿ.
10 ವರ್ಷಗಳಿಂದ ಅಪಪ್ರಚಾರ ಮಾಡ್ತಾ ಇದ್ದಾರೆ. ತಾಳ್ಮೆ ಪರೀಕ್ಷೆಮಾಡಬೇಡಿ ಬಿಜೆಪಿ ಅವರೇ, ಕ್ರಿಮಿನಲ್ ಡಿಫಮೆಷನ್ ಗೆ ರೆಡಿ ಆಗಿದೆ. ಕಾನೂನಾತ್ಮಕವಾಗಿ ತುಳಿಬೇಕಾಗುತ್ತದೆ ನಿಮಗೆ. ಖರ್ಗೆ ಸಾಹೇಬರು ರಾಜ್ಯಸಭೆಯಲ್ಲಿ, ನಾನು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ತತ್ವದ ಬಗ್ಗೆ ಮಾತಾಡುತ್ತೇನೆ ಆದ್ದರಿಂದ ಟಾರ್ಗೆಟ್ ಮಾಡ್ತಾರೆ. ಈ ಹಿಂದೆ ಗಣೇಶ್ ಎಂಬುವವರು ಐವತ್ತು ಸಾವಿರ ಕೋಟಿ ರೂ. ಆಸ್ತಿ ಇದೆ ಎಂದಿದ್ದರು. ಅವರಿಗೆ ಲೀಗಲ್ ನೋಟಿಸ್ ಕೊಟ್ಟಿದ್ದೆ, ಅವರು ಕ್ಷಮೆ ಕೇಳಿದ್ರು. ಇಬ್ಬರಿಗೆ ಕ್ರಿಮಿನಲ್ ಡಿಫಮೆಷನ್ ಹಾಕಲಾಗಿದೆ, ಅವರು ಒಳಗೆ ಹೋಗ್ತಾರೆ.
ಬಾಡಿಗೆ ಭಾಷಣಕಾರರಿಗೆ ನಾನು ಉತ್ತರ ಕೊಡಲ್ಲ. ಆದರೆ ಅದೇನು ಪ್ರಚಾರ ಮಾಡಿದ್ದಾರೆ ನೋಡ್ತೇನೆ. ಅದು ಏನಾದರೂ ಇದ್ರೆ, 100% ಕ್ರಮ ಆಗುತ್ತದೆ ಎಂದರು.
ಬಿಜೆಪಿ ಅಭ್ಯರ್ಥಿಗಳ ಪರ ನಟ ಸುದೀಪ್ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವ್ರ ಸ್ವಾಮೀಜಿಗಳು ಎರಡು ತಿಂಗಳು ಸತ್ಯಾಗ್ರಹ ಕೂತಿದ್ರು. ಆಗ ಯಾಕೆ ಸ್ವಾಮೀಜಿಗಳಿಗೆ ಬೆಂಬಲ ಕೊಟ್ಟಿಲ್ಲ? ಬೊಮ್ಮಾಯಿ ಮಾಮಾ ಜೊತೆ ಮಾತಾಡ್ತೀನಿ ಅಂತಾ ಸುದೀಪ್ ಹೇಳಬಹುದಿತ್ತಲ್ವಾ? ಅವ್ರ ಮಾಮ ಜೊತೆ ಮಾತಾಡಿ ಎಸ್‌ಸಿಎಸ್‌ಟಿಯವರಿಗೆ ಮೀಸಲಾತಿ ಕೊಡಿಸಬಹುದಿತ್ತಲ್ವಾ?
ಬಾಲಿವುಡ್ ವರ್ಸಸ್ ಸ್ಯಾಂಡಲ್ ವುಡ್ ಎಂದಾಗ ಕನ್ನಡ ಅಸ್ಮಿತೆ ಪರ ಸುದೀಪ್ ನಿಂತಿದ್ರು. ಇದು 40% ಬಿಜೆಪಿ ಸರ್ಕಾರ. ಅವರ ಸಿನಿಮಾಗಳನ್ನ ಬಿಜೆಪಿಯವ್ರು ಮಾತ್ರ ನೋಡ್ತಾರಾ? ಅವ್ರ ಅಭಿಮಾನಿಗಳು ಎಲ್ಲಾ ಪಾರ್ಟಿಗಳಲ್ಲೂ ಇದ್ದಾರೆ ಎಂದರು.
ಚುನಾವಣೆ ಈಗಾಗಲೇ ಘೋಷಣೆಯಾಗಿದೆ. ಬಿಜೆಪಿ ಯಾವ ಧಿಕ್ಕಿನಕಡೆ ಕೊಂಡೊಯ್ಯುತ್ತಿದೆ? ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ ಅಂತ ಕಟೀಲ್ ಹೇಳ್ತಾರೆ. ಬಿಜೆಪಿಯವರು ಸಂಪೂರ್ಣ ಹತಾಶರಾಗಿದ್ದಾರೆ. ನಿಜವಾದ ವಿಚಾರಗಳನ್ನ ಮುಚ್ಚಿ ಹಾಕ್ತಿದ್ದಾರೆ. ಬಿಜೆಪಿಯವರು ಕರ್ನಾಟಕವನ್ನ ಒಡೆಯುತ್ತಿದ್ದಾರೆ.
ಈ ನೆಲ, ಜಲದ ಬಗ್ಗೆ ಅವರಿಗೆ ಪ್ರೀತಿಯಿಲ್ಲ. ಕರ್ನಾಟಕ ಏಕೀಕರಣದ ಬಗ್ಗೆ ಗಮನವಿಲ್ಲ. ರಾಯಚೂರನ್ನ ಆಂಧ್ರಕ್ಕೆ ಸೇರಿಸಬೇಕು ಎಂದು ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಹೇಳ್ತಾರೆ. ಆನಂದ್ ಸಿಂಗ್ ಕರ್ನಾಟಕ ಒಡೆಯಬೇಕು ಅಂತಾರೆ. ಉತ್ತರ, ದಕ್ಷಿಣ ಕರ್ನಾಟಕ ಮಾಡೋಣ ಅಂತಾರೆ. ಆದರೂ ಇವರ ಮಾತಿಗೆ ಬಿಜೆಪಿ ಕಡಿವಾಣ ಹಾಕಲ್ಲ. ಬಿಜೆಪಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಲ್ಲ? ಈಗ ಮಹಾರಾಷ್ಟ್ರದವರು ಕೆಣಕುತ್ತಿದ್ದಾರೆ. ಮೋದಿ, ಶಾ ಪದೇ ಪದೇ ಇಲ್ಲಿಗೆ ಬರ್ತಿದ್ದಾರೆ.
ವಿಶ್ವ, ರಾಷ್ಟ್ರದ ಬಗ್ಗೆ ಅವರು ಮಾತನಾಡ್ತಾರೆ, ಕಮಲ ಅರಳುತ್ತೆ ಅಂತ ಹೇಳ್ತಾರೆ. ಇಲ್ಲಿ ನನ್ನ ಮೇಲೆ ಸಂಚು ನಡೆಯುತ್ತಿದೆ ಅಂತಾರೆ. ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡೋಕೆ ಆಗುತ್ತೆ, ರಾಜ್ಯದ ಬಗ್ಗೆ ಮಾತನಾಡೋಕೆ ಆಗಲ್ಲ. ಮಹಾರಾಷ್ಟ್ರದ ಬಗ್ಗೆ ಇವರು ಮಾತನಾಡ್ತಿಲ್ಲ. ಪದೇ ಪದೇ ಅವರು ಕನ್ನಡಿಗರನ್ನ ಕೆಣಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Priyank Kharge: ಸರ್ಕಾರದ ವಿರುದ್ಧ ಮಾತನಾಡಿದರೆ ಎಫ್‌ಐಆರ್ ದಾಖಲಾಗುತ್ತಿದೆ: ಪ್ರಿಯಾಂಕ್ ಖರ್ಗೆ ಆರೋಪ