ರಾಯಚೂರು: ಜಿಲ್ಲೆಯಲ್ಲಿ ನಡೆಯುವ ಭಾರತ ಜೋಡೋ ಯಾತ್ರೆಯಲ್ಲಿ (Bharat jodo) ಅ.22 ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭಾಗಿಯಾಗಲಿದ್ದಾರೆ. ರಾಯಚೂರಿನಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಜನರನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ತಿಳಿಸಿದ್ದಾರೆ.
ಅ.22ರಂದು ಸಂಜೆ 4 ಗಂಟೆಯಿಂದ ಭಾರತ ಜೋಡೋ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿಯಾಗಲಿದ್ದಾರೆ. ಅವರ ಭಾಷಣದ ವೇಳೆ 20ರಿಂದ 30 ಸಾವಿರ ಮಹಿಳೆಯರು ಸೇರುವ ನಿರೀಕ್ಷೆ ಇದೆ. ಬಳಿಕ ಯರಮರಸ್‌ನಲ್ಲಿ ಪ್ರಿಯಾಂಕಾ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ಅಲ್ಲಿಂದ ತೆಲಂಗಾಣದವರೆಗೂ ಯಾತ್ರೆಯಲ್ಲಿ ಪ್ರಿಯಾಂಕಾ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | ರಾಜ್ಯ ಕಾಂಗ್ರೆಸ್‌ನಲ್ಲಿ 3ನೇ ಪವರ್ ಸೆಂಟರ್; ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ಆ್ಯಕ್ಟಿವ್ ಆಯ್ತಾ ಖರ್ಗೆ ಬಣ?
ಅ.21ರಂದು ರಾಯಚೂರಿಗೆ ಯಾತ್ರೆ ಆಗಮನ
ಅ.21ರಂದು ಆಂಧ್ರ ಪ್ರದೇಶದ ಮಂತ್ರಾಲಯದ ಮೂಲಕ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಭಾರತ್ ಜೋಡೋ ಯಾತ್ರೆ ಆಗಮಿಸಲಿದೆ. ಬೆಳಗ್ಗೆ 7.30 ತುಂಗಭದ್ರಾ ಬ್ರಿಡ್ಜ್ ಬಳಿ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಮಾಡಲಾಗುತ್ತದೆ. ಪಾದಯಾತ್ರೆ ಬ್ರಿಡ್ಜ್‌ನಿಂದ ಗಿಲ್ಲೆಸಗೂರಿಗೆ ತೆರಳಿದ ಬಳಿಕ 10.30 ರಿಂದ 11 ಗಂಟೆ ಉಪಾಹಾರದ ವಿರಾಮ ಇರಲಿದೆ.
ಬಳಿಕ ಗಿಲ್ಲೆಸಗೂರಿನಲ್ಲಿ 4ಗಂಟೆವರೆಗೂ ರೈತರು, ಕಾರ್ಮಿಕರ ಜತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. 4 ಗಂಟೆಗೆ ಯಾತ್ರೆ ಪುನಃ ಆರಂಭವಾಗಲಿದೆ. ನಂತರ ಯರಗೇರಾದ ವಾಲ್ಮೀಕಿ ವೃತ್ತದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. 15ರಿಂದ 20 ಕಾಂಗ್ರೆಸ್ ಹಿರಿಯ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯ ಬಳಿಕ ಯರಗೇರಾ ಗ್ರಾಮದಲ್ಲಿ ಆ ರಾಹುಲ್ ಗಾಂಧಿ ವಾಸ್ತವ್ಯವಿರಲಿದ್ದಾರೆ.
ಅ.22 ರಂದು ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಆರಂಭವಾಗಲಿದ್ದು, ಬೃಂದಾವನ ಹೋಟೆಲ್‌ವರೆಗೂ ತೆರಳಿದ ಬಳಿಕ ಅಲ್ಲಿ ಉಪಾಹಾರದ ವ್ಯವಸ್ಥೆ ಇರಲಿದೆ. ನಂತರ ರಾಯಚೂರು ನಗರದಲ್ಲಿ ಬಸವ ವೃತ್ತ ಮತ್ತು ಗಂಜ್ ಸರ್ಕಲ್‌ನಲ್ಲಿ ಸಭೆ ನಡೆಯುತ್ತದೆ. ಆನಂತರ ಯರಮರಸ್ ಬಳಿಯ ಆನಂದ ಶಾಲೆಯಲ್ಲಿ ಆ ದಿನ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ಅ.23 ರಂದು ಬೆಳಗ್ಗೆ 6.30ಕ್ಕೆ ತೆಲಂಗಾಣದ ಕಡೆ ಪಾದಯಾತ್ರೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | ಕಾಂಗ್ರೆಸ್ ಭ್ರಷ್ಟಾಚಾರದ ಸಮಗ್ರ ದಾಖಲೆ ರಾಹುಲ್ ಗಾಂಧಿಗೆ ರವಾನೆ: ಸಿಎಂ ಬಸವರಾಜ ಬೊಮ್ಮಾಯಿ