ಬೆಂಗಳೂರು: ಡ್ರಗ್ ಸಮಸ್ಯೆ ದೇಶದ ಹಲವು ಕಡೆ ಕಾಡುತ್ತಿದ್ದು, ಇದನ್ನು ಅಂತ್ಯಗಾಣಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್ (Drugs case) ಗಳನ್ನು ಮಟ್ಟ ಹಾಕಲು ಬೆಂಗಳೂರು ಸಿಸಿಬಿ ಪೊಲೀಸರು ಮುಂದಾಗಿದ್ದು, ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಇದೇ ಮೊದಲ ಬಾರಿ ಬೆಂಗಳೂರು ಸಿಸಿಬಿ ಪೊಲೀಸರು ಪೆಡ್ಲರ್ ಒಬ್ಬನ ಮೇಲೆ ಸೀಜಿಂಗ್ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಇತ್ತೀಚೆಗೆ ಕೆ.ಆರ್ ಪುರಂ ಬಳಿ ಮೃತ್ಯುಂಜಯ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿ ಮೃತ್ಯುಂಜಯ 2006ರಿಂದ ಗಾಂಜಾ ಹಾಗೂ ಅಫೀಮು ಮಾರಾಟ ಮಾಡುತ್ತಿದ್ದ. ಈ ಹಿನ್ನಲೆಯಲ್ಲಿ ಮೃತ್ಯುಂಜಯ ಅಲಿಯಾಸ್ ಎಂ.ಜೆ ಮೇಲೆ ಸೀಜಿಂಗ್ ಅಸ್ತ್ರ ಪಯೋಗಿಸಿದ್ದು, ಆತನ ಸ್ವತ್ತನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ | Drugs case: ವಿಚಾರಣೆಗೆ ಕರೆದರೂ ಬಾರದ ನಟ ಸಿದ್ಧಾಂತ್ ಕಪೂರ್, ಆ. 15ರ ನಂತರ ಬರ್ತಾನಂತೆ!
ಮೃತ್ಯಂಜಯನಿಂದ ಕೆಜಿಗಟ್ಟಲೆ ಗಾಂಜಾವನ್ನು ವಶಪಡಿಸಿಕೊಂಡಿರುವ ಸಿಸಿಬಿ ಪೊಲೀಸರು, ತನಿಖೆ ನಡೆಸಿದ್ದಾರೆ. ಬಳಿಕ ಚೆನೈ SOFEMA ಅಥಾರಿಟಿಯಿಂದ ಅನುಮತಿ ಪಡೆದುಕೊಂಡಿರುವ ಸಿಸಿಬಿ ಪೊಲೀಸರು NDPS ಕಾಯ್ದೆಯಡಿ ಆರೋಪಿ ಮೃತ್ಯುಂಜಯ ಸಂಪಾದಿಸಿದ್ದ 3 ಕೋಟಿ ರೂಪಾಯಿಗೂ ಹೆಚ್ಚಿನ ಆಸ್ತಿಯನ್ನು ಸೀಜ್ ಮಾಡಿದ್ದಾರೆ. ಈ ಮೂಲಕ ಡ್ರಗ್ ಪೆಡ್ಲರ್‌ಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಇದನ್ನೂ ಓದಿ | Drugs case | ಆಯುರ್ವೇದಿಕ್ ಡ್ರಗ್ಸ್ ಮಾಫಿಯಾ, ಮಾರಾಟಕ್ಕೆ ನಿರುದ್ಯೋಗಿಗಳೇ ಟಾರ್ಗೆಟ್!