Site icon Vistara News

ಶೈಕ್ಷಣಿಕ ಕಾರ್ಯಾಗಾರ ಹೆಸರಲ್ಲಿ ಮತಾಂತರ ಪ್ರಚೋದನೆ; ಮುಸ್ಲಿಂ ಸಂಘಟನೆ ಮೇಲೆ ಕೇಸ್‌ ದಾಖಲು

proselytizing in the name of educational workshop File a case against Muslim organization

ಮಂಗಳೂರು: ಶೈಕ್ಷಣಿಕ ಕಾರ್ಯಾಗಾರದ ಹೆಸರಿನಲ್ಲಿ ಮತಾಂತರ ಪ್ರಚೋದನೆಯುಳ್ಳ ಪಾಠ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯ ಸೇರಿ ಮುಸ್ಲಿಂ ಸಂಘಟನೆಯೊಂದರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಖಾಸಗಿ ಸಭಾಂಗಣದಲ್ಲಿ ಯಂಗ್ ಮೆನ್ಸ್ ಅಸೋಸಿಯೇಷನ್ ಎಂಬ ಮುಸ್ಲಿಂ ಸಂಘಟನೆಯೊಂದು ಕಾರ್ಯಾಗಾರವನ್ನು ಏರ್ಪಡಿಸಿತ್ತು. ಈ ಕಾರ್ಯಾಗಾರಕ್ಕೆ ಜನತಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳನ್ನು ಕರೆಸಲಾಗಿತ್ತು.

ಈ ಕಾರ್ಯಾಗಾರದಲ್ಲಿ ಕೋಮು ಪ್ರಚೋದನೆ ಮಾಡಿ ಮತ ಪ್ರಚಾರ ಮಾಡಲಾಗುತ್ತಿದೆ ಎಂದು ಭಾಗವಹಿಸಿದ್ದ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದು, ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಇನ್ನೆರಡು ದಿನದಲ್ಲಿ ನಾರಾಯಣಗುರು ನಿಗಮ ಘೋಷಣೆ; ಯಾರಿಗೂ ಆತಂಕ ಬೇಡ ಎಂದು ಕೋಟ ಶ್ರೀನಿವಾಸ ಪೂಜಾರಿ

ಈ ವೇಳೆ ಮಾತಿನ ಚಕಮಕಿಯೂ ನಡೆದಿದೆ. ಆದರೆ, ಹಿಂಜಾವೇ ಕಾರ್ಯಕರ್ತರು ಕಾರ್ಯಾಗಾರವನ್ನು ನಿಲ್ಲಿಸಿದ್ದಾರೆ.
ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯ ಟಿ.ಆರ್.ನಾಯಕ್, ರಿಫೀಕ್ ಮಾಸ್ಟರ್ ಅತೂರು ಹಾಗೂ ನುಸ್ರತುಲ್ ಇಸ್ಲಾಂ ಹಾಗೂ ಯಂಗ್ ಮೆನ್ಸ್ ಅಸೋಸಿಯೇಷನ್ ಸಂಘಟನೆ ಮೇಲೆ ದೂರು ದಾಖಲು ಮಾಡಲಾಗಿದೆ.

Exit mobile version