ಮಂಡ್ಯ: ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಮಾನ ಮನಸ್ಕರ ವೇದಿಕೆಯಿಂದ ಆಯೋಜಿಸಿದ್ದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಪಠ್ಯ ಪರಿಷ್ಕರಣೆ ಆದೇಶ ಮತ್ತು ಸಮಿತಿ ಶಿಫಾರಸುಗಳನ್ನು ಸುಟ್ಟು ಹಾಕಿದರು.
ಪಠ್ಯ ಪುಸ್ತಕಗಳ ಪರಿಷ್ಕರಣೆ ಹೆಸರಿನಲ್ಲಿ ಸನಾತನ, ಪುರೋಹಿತಶಾಹಿ ವಿಚಾರ ಬಿತ್ತಲಾಗುತ್ತಿದೆ. ಮಹಿಳಾ ಮತ್ತು ದಲಿತ ವಿರೋಧಿ ಧೋರಣೆ ಹೇರಿಕೆ ಮಾಡಲಾಗುತ್ತಿದೆ.
ಕುವೆಂಪು ಮತ್ತು ನಾಡಗೀತೆಗೆ ಅವಮಾನ ಮಾಡಿರುವ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಂಧನ ಆಗಲೇಬೇಕೆಂದು ಘೋಷಣೆ ಕೂಗಿ ಒತ್ತಾಯ ಮಾಡಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಕಲಿಕೆ ನಷ್ಟವಾಗಿರುವುದರಿಂದ ಪ್ರಯೋಗ ಕೈಬಿಟ್ಟು, ಹಳೆಯ ಪಠ್ಯ ಮುಂದುವರಿಸಬೇಕು.
ಬ್ರಾಹ್ಮಣ್ಯದ ಅಹಂ ಪ್ರದರ್ಶನ ಮಾಡುತ್ತಿರುವ ಸಚಿವ ನಾಗೇಶ್ ಅವರನ್ನೂ ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಇದನ್ನೂ ಓದಿ: 25ನೇ ದಿನಕ್ಕೆ ಕಾಲಿಟ್ಟ ಮಹಾಲಿಂಗಪುರ ತಾಲೂಕು ಹೋರಾಟ: ಬೆಂಗಳೂರಲ್ಲಿ ಇಂದು ಸಿಎಂ ಭೇಟಿ