ಧಾರವಾಡ: ಕರ್ನಾಟಕ ಪೊಲೀಸ್ ಇಲಾಖೆಯು 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಬಂದಿತ್ತು. ಈ ಹಿನ್ನೆಲೆ ಆರೋಪಿಗಳ ತನಿಖೆ ನಡೆಸಲಾಗುತ್ತಿದ್ದು, ದಿನೇದಿನೆ ಅಕ್ರಮದಲ್ಲಿ ಪಾಲ್ಗೊಂಡವರ ಸಂಖ್ಯೆ ಏರಿಕೆಯಾಗುವುದರ ಜತೆಗೆ ಗಣ್ಯರ ಹೆಸರುಗಳು ಸೇರ್ಪಡೆಗೊಳ್ಳುತ್ತಿವೆ. ಇದರ ನಡುವೆಯೇ ಪಿಎಸ್‌ಐ ಪರೀಕ್ಷೆಯ ಕೂಗೆದ್ದಿದೆ.
ಈ ಅಕ್ರಮದ ಮಧ್ಯೆ 545 ಮತ್ತು 402 ಪಿಎಸ್‌ಐ ಪರೀಕ್ಷೆಯ ಮರು ದಿನಾಂಕವನ್ನು ಶೀಘ್ರವೇ ಪ್ರಕಟಿಸುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಳೆ, ಗಾಳಿಯನ್ನು ಲೆಕ್ಕಿಸದೇ ಕೈಯಲ್ಲಿ ಛತ್ರಿ ಹಿಡಿದು ಪಿಎಸ್ಐ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ಪಿಎಸ್ಐ ಅಭ್ಯರ್ಥಿ ರವಿಶಂಕರ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, 2016ರಿಂದ ನಡೆದಿರುವ ಪಿಎಸ್‌ಐ ನೇಮಕಾತಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜತೆಗೆ ಎಫ್‌ಡಿಎ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಕೂಡಲೇ ಪಿಎಸ್‌ಐ ಮರುಪರೀಕ್ಷೆ ದಿನಾಂಕ ಘೋಷಣೆ ಮಾಡಬೇಕು. ಇದರೊಂದಿಗೆ ಪಿ.ಸಿ ವಯೋಮತಿಯನ್ನು 27ರಿಂದ 33ಕ್ಕೆ ಏರಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ | ಪಿಎಸ್‌ಐ ನೇಮಕಾತಿ ಅಕ್ರಮ | ಇಡಿ ತನಿಖೆ ಇಲ್ಲವೆಂದ ಗೃಹ ಸಚಿವ