Site icon Vistara News

PSI Scam : ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್‌ ಆರ್.ಡಿ ಪಾಟೀಲ್‌ ನ್ಯಾಯಾಲಯಕ್ಕೆ ಶರಣು

PSI Scam

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮದ ಪ್ರಕರಣದ (PSI Scam) ಪ್ರಮುಖ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ನ್ಯಾಯಾಲಯದ ಮುಂದೆ ಶರಣಾಗಿದ್ದು, ಆರೋಪಿಗೆ ೧೪ ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳನ್ನು ತಳ್ಳಿ ಆರ್.ಡಿ.ಪಾಟೀಲ್ ಪರಾರಿಯಾಗಿದ್ದ. ಬಳಿಕ ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷನಾಗಿದ್ದ. ನಂತರ ಅಫಜಲಪುರದಲ್ಲಿ ಕಟೌಟ್, ಬ್ಯಾನರ್‌ನಲ್ಲಿ ಮಿಂಚುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನ ಬಂಧನಕ್ಕೆ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಬಲೆ ಬೀಸಿದ್ದರು.

ಇದನ್ನೂ ಓದಿ | Shivamogga terror: ಉಗ್ರ ಚಟುವಟಿಕೆಗೆ PFI ಮುಖಂಡರಿಂದ ಗೇಮಿಂಗ್ ಆ್ಯಪ್ ಬಳಕೆ; ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌, ಮಂಗ್ಳೂರು ಕುಕ್ಕರ್‌ ಬ್ಲಾಸ್ಟ್‌ಗೂ ಲಿಂಕ್‌!

ಪೊಲೀಸರ ಹುಡುಕಾಟದ ಬೆನ್ನಲ್ಲೇ ಸೋಮವಾರ, ಕಲಬುರಗಿ ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆಗಮಿಸಿ ಆರ್.ಡಿ ಪಾಟೀಲ್ ಶರಣಾಗಿದ್ದಾನೆ. ಹೀಗಾಗಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯ ವಿಚಾರಣೆಗಾಗಿ ೧೪ ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಸಿಐಡಿ ಅಧಿಕಾರಿಗಳನ್ನು ತಳ್ಳಿ ಎಸ್ಕೇಪ್ ಆಗಿದ್ದ ಆರ್.ಡಿ.ಪಾಟೀಲ್‌ ವಿರುದ್ಧ ಕಲಬುರಗಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಸಿಐಡಿ ದೂರು ದಾಖಲಿಸಿತ್ತು. ಈಗ ಆರೋಪಿ ಶರಣಾಗಿರುವ ಹಿನ್ನೆಲೆಯಲ್ಲಿ ಫೆ.6ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Exit mobile version