Site icon Vistara News

PSI Scam | ಎಡಿಜಿಪಿ ಅಮೃತ್‌‌ ಪಾಲ್ ಆಪ್ತರ ಹೆಸರಲ್ಲಿ ಕೋಟಿ ಕೋಟಿ ಆಸ್ತಿ

PSI Scam

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ‌ (PSI Scam) ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ಅವರ ಇಬ್ಬರು ಆಪ್ತರಿಗೂ ಸಿಐಡಿ ತನಿಖೆ ಬಿಸಿ ತಟ್ಟಿದೆ. ಮಂಗಳವಾರ ಜಕ್ಕೂರಿನ ಶಂಭುಲಿಂಗ ಹಾಗೂ ಬೊಮ್ಮಸಂದ್ರದ ಹುಸ್ಕೂರು ಆನಂದ ಎಂಬುವವರ ಮನೆ ಮೇಲೆ ಮಂಗಳವಾರ ಸಿಐಡಿ ದಾಳಿ ಮಾಡಿ ದಾಖಲೆಗಳನ್ನು ಜಪ್ತಿ ಮಾಡಿದ್ದು, ಇವರಿಗೂ ನೇಮಕಾತಿ ಅಕ್ರಮದಲ್ಲಿ ಪಾಲುದಾರಿಕೆ ಇದೆಯೇ ಎಂಬ ಅನುಮಾನಗಳು ಮೂಡಿವೆ.

ಜಕ್ಕೂರಿನ ಶಂಭುಲಿಂಗ ರಾಯಚೂರು ಮೂಲದ ಎಎಸ್‌ಐ ಪುತ್ರ. ಈತ ಬೆಂಗಳೂರಿಗೆ ಬಂದು ಕೇವಲ 10 ವರ್ಷವಾಗಿದೆ. ಆದರೆ, ಈತನ ಹೆಸರಲ್ಲಿ ಜಕ್ಕೂರಿನಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಪ್ಲಾಟ್‌ ಹಾಗೂ 15 ಕೋಟಿ ರೂ. ಮೌಲ್ಯದ ಭೂಮಿ ಇದೆ.

ಸಾಮಾನ್ಯ ಎಎಸ್‌ಐ ಮಗ, ಕೊಡಿಗೆಹಳ್ಳಿಯಲ್ಲಿ ಕೃಷಿ ಉತ್ಪನ್ನಗಳ ಅಂಗಡಿ ಇಟ್ಟುಕೊಂಡಿರುವ ಶಂಭುಲಿಂಗನಿಗೆ ಇಷ್ಟೆಲ್ಲ ಹಣ ಎಲ್ಲಿಂದ ಬಂತು ಎಂಬ ಅನುಮಾನಗಳು ಮೂಡಿದ್ದು, ಎಡಿಜಿಪಿ ಅಮೃತ್ ಪೌಲ್ ಕೃಪಾಕಟಾಕ್ಷದಿಂದ ಕೋಟಿ ಕೋಟಿ ರೂಪಾಯಿ ಆಸ್ತಿಯನ್ನು ಬೇನಾಮಿಯಾಗಿ ಹೊಂದಿದ್ದನೇ ಎಂಬ ಅನುಮಾನ ವ್ಯಕ್ತವಾಗಿದೆ.

ಇನ್ನು ಹುಸ್ಕೂರು ಆನಂದ ಕೂಡ ಪಾಲ್ ಜತೆ ಸೇರಿ ಕೋಟಿ ಕೋಟಿ ಕೊಳ್ಳೆಹೊಡೆದಿದ್ದಾನೆ ಎನ್ನಲಾಗಿದೆ. ಹುಸ್ಕೂರು, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈತನಿಗೆ 30 ಕೋಟಿ ರೂಪಾಯಿ ಪ್ರಾಪರ್ಟಿ ಇದೆ ಎನ್ನಲಾಗಿದೆ. ಪಿಎಸ್‌ಐ ಅಕ್ರಮದಲ್ಲೂ ಈ ಇಬ್ಬರಿಗೂ ಪಾಲುದಾರಿಕೆ ಇದೆಯೇ ಎಂಬ ವಿಷಯದ ಬಗ್ಗೆ ಸಿಐಡಿ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಇದನ್ನೂ ಓದಿ | KPSC Result Late | ಕೆಪಿಎಸ್‌ಸಿ ಬರೆಯಲು ಬಂದ ಯುವಕ-ಆಗುವನು ಮುದುಕ; ಪ್ರತಿಭಟನಾಕಾರರ ಕಿಡಿನುಡಿ

Exit mobile version