ಕೊಡಗು: ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತ ಹೆಣ್ಣುಮಕ್ಕಳ ಬೆತ್ತಲೆ ಫೋಟೊ ಕ್ಲಿಕ್ಕಿಸಿ ವಿಕೃತಿ (Psychopath Person) ಮೆರೆದಿದ್ದ ಕಡಗದಾಳು ನಿವಾಸಿ ಸೈಯದ್ (24) ಎಂಬಾತನನ್ನು ಮಾನ ಭಂಗ ಯತ್ನ ಆರೋಪದಡಿ ಬಂಧಿಸಲಾಗಿದೆ.
ಈತ ಈ ಹಿಂದೆ ಶವಾಗಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಮೃತ ಹೆಣ್ಣುಮಕ್ಕಳ ಬೆತ್ತಲೆ ಫೋಟೊ ತೆಗೆಯುತ್ತಿದ್ದ ಆರೋಪದಡಿ ಈತನನ್ನು ಅಮಾನತು ಮಾಡಲಾಗಿತ್ತು. ಈಗ ಮಡಿಕೇರಿಯ 74 ವರ್ಷದ ವೃದ್ಧೆಯೋರ್ವರ ಮನೆಗೆ ನುಗ್ಗಿದ ಸೈಯದ್, ಅವರನ್ನು ಅತ್ಯಾಚಾರ ಮಾಡಲು ಯತ್ನ ಮಾಡಿದ್ದ. ಈ ಸಂಬಂಧ ವೃದ್ಧೆಯು ನ. 13ರಂದು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಸೈಯದ್‌ನನ್ನು ಬಂಧಿಸಲಾಗಿದೆ.
ಕಳೆದ ಸೆಪ್ಟೆಂಬರ್ 22 ರಂದು ರಾತ್ರಿ ಸುಮಾರು 11 ಗಂಟೆಗೆ ವೃದ್ಧೆ ಮನೆಗೆ ಆಗಮಿಸಿದ ಸೈಯದ್, ಬಾಗಿಲು ಬಡಿದಿದ್ದಾನೆ. ವೃದ್ಧೆ ಬಾಗಿಲು ತೆರೆದಾಕ್ಷಣ ಸೈಯದ್ ಮನೆ ಒಳಗೆ ನುಗ್ಗಿ ಮಾನ ಭಂಗಕ್ಕೆ ಯತ್ನಿಸಿದ್ದಾನೆ. ವೃದ್ಧೆ ಈ ಸಂದರ್ಭದಲ್ಲಿ ಜೋರಾಗಿ ಕಿರುಚಿಕೊಂಡಿದ್ದು, ಪಕ್ಕದ ಮನೆಯವರು ಹೊರಬರುವಷ್ಟರಲ್ಲಿ ಸೈಯದ್ ಓಡಿಹೋಗಿ ತಲೆಮರಿಸಿಕೊಂಡಿದ್ದಾನೆ. ಈ ವೇಳೆ ತನ್ನ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | kukke temple | ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಬಾರಿ ಎಡೆ ಸ್ನಾನಕ್ಕೆ ಅವಕಾಶವಿದೆ, ಮಡೆ ಸ್ನಾನಕ್ಕೆ ನಿರ್ಬಂಧ
ದೂರಿನನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಸೆಕ್ಷನ್ 446 ಹಾಗೂ 354ನಡಿ ಪ್ರಕರಣ ದಾಖಲಿಸಿ ಸೈಯದ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಸೈಯದ್ ಮೊಬೈಲ್ ಫೋನ್ ಅನ್ನು ದೂರುದಾರರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈಯದ್ ಶವಾಗಾರದಲ್ಲಿನ ಮೃತ ದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಫೋನಿನಲ್ಲಿ ಸೆರೆ ಹಿಡಿಯುತ್ತಿದ್ದ ಎಂಬುದಾಗಿ ಈ ಹಿಂದೆ ಹಿಂದು ಪರ ಸಂಘಟನೆ ದೂರು ನೀಡಿತ್ತು. ಈ ಪ್ರಕರಣದ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ಮಡಿಕೇರಿ ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.
ಮಡಿಕೇರಿ ಜಿಲ್ಲಾಸ್ಪತ್ರೆ ಸಿಬ್ಬಂದಿಯ ಕಾಮ ಚೇಷ್ಟೆ!
ಕೋವಿಡ್ ಆರಂಭದ ದಿನದಿಂದಲೂ ವಾರಿಯರ್ಸ್ ಎನ್ನುವ ಹಣೆಪಟ್ಟಿಯನ್ನು ಹೊತ್ತುಕೊಂಡಿದ್ದ ಸೈಯದ್, ತಾನು ಅಷ್ಟು ಕಷ್ಟಪಟ್ಟೆ, ಇಷ್ಟು ಕಡೆ ಹೋಗಿಬಂದೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಂಡು ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವು ಮಹಿಳಾ ಸಿಬ್ಬಂದಿಯೊಂದಿಗೆ ಸಿಂಪತಿ ಗಿಟ್ಟಿಸಿಕೊಂಡಿದ್ದನಂತೆ. ಹೆಣ್ಣುಮಕ್ಕಳ ಜತೆಗಿನ ಸಲುಗೆಯನ್ನು ಬಳಸಿ ತನ್ನ ಕಾಮತೃಷೆ ತೀರಿಸಲು ಆರಂಭಿಸಿದ್ದ ಎನ್ನಲಾಗಿದೆ. ಈತ ಆಸ್ಪತ್ರೆಯ ಕೆಲ ಯುವತಿಯರು ಹಾಗೂ ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ಮಾಡಿ ದೈಹಿಕ ಕಿರುಕುಳ ನೀಡುತ್ತಿದ್ದ ಎಂಬುದು ಆತನ ಮೊಬೈಲ್‌ನ ವಿಡಿಯೊ, ಆಡಿಯೊ ರೆಕಾರ್ಡಿಂಗ್ ಮೂಲಕ ಗೊತ್ತಾಗಿದೆ.
ಶವವನ್ನೇ ಕಾಮ ದೃಷ್ಟಿಯಿಂದ ನೋಡುತ್ತಿದ್ದ ಸೈಯದ್‌ನ ಮೋಸದ ಬಲೆಗೆ ಬಿದ್ದವರಲ್ಲಿ ಅತಿ ಹೆಚ್ಚು ವಿವಾಹಿತೆಯರೇ ಎನ್ನುವ ಮಾಹಿತಿಯೂ ಇದೆ. ಹಿಂದು ಸಂಘಟನೆಯ ಪ್ರಮುಖರು ಈ ವಿಷಯವನ್ನು ಜಿಲ್ಲಾಸ್ಪತ್ರೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯೂ ಕೂಡ ಈತ ಶವಾಗಾರದಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜತೆ ಸಿಕ್ಕಿಬಿದ್ದಿದ್ದರೂ ಇದನ್ನು ಆಸ್ಪತ್ರೆಯವರು ಮುಚ್ಚಿಹಾಕಿದ್ದರು ಎನ್ನಲಾಗಿದೆ. ಸೈಯದ್ ಜತೆ ಒಂದು ತಂಡವೇ ಇದೆಯಾ ಎಂಬ ಅನುಮಾನ ಇದೀಗ ಮೂಡಿದೆ. ಸದ್ಯ ವಿಕೃತಿ ಸೈಯದ್‌ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆದರೆ, ಶೋಷಣೆಗೆ ಒಳಪಟ್ಟ ಯುವತಿಯರು ಹಾಗೂ ಮಹಿಳೆಯರು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.
ಈ ಸೈಯದ್ ಶವಾಗಾರಕ್ಕೆ ಬರುವ ಹೆಣ್ಣುಮಕ್ಕಳ ಮೃತದೇಹದ ಬೆತ್ತಲೆ ಫೋಟೊಗಳನ್ನು ತನ್ನ ಮೊಬೈಲ್‌ನಲ್ಲಿ ಗೌಪ್ಯವಾಗಿ ಇಟ್ಟುಕೊಂಡಿರುವುದು ತಿಳಿದು ಬಂದಿದೆ. ಜತೆಗೆ ಆಸ್ಪತ್ರೆಯ ಕೆಲವು ಮಹಿಳಾ ಸಿಬ್ಬಂದಿಯನ್ನು ಶವಾಗಾರಕ್ಕೆ ಕರೆಸಿ ದೈಹಿಕವಾಗಿ ಬಳಸಿಕೊಂಡಿರುವುದರ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | Delhi Crime | ಶ್ರದ್ಧಾ ಹತ್ಯೆಗೆ ದಿ ಫ್ಯಾಮಿಲಿ ಮ್ಯಾನ್ 2 ಸಿರೀಸ್‌ನ ಸಮಂತಾ ಪಾತ್ರ ಸ್ಫೂರ್ತಿ?