ಮಡಿಕೇರಿ: ಇಲ್ಲಿನ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಶವಾಗಾರದ ಜವಾನನೊಬ್ಬ ವಿಕೃತಿ (Psychopath Person) ಮೆರೆದಿದ್ದಾನೆ. ಹೆಣ್ಣುಮಕ್ಕಳ ಮೃತದೇಹದ ಬೆತ್ತಲೆ ಫೋಟೊಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಸ್ಪತ್ರೆಯ ಶವಾಗಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸೈಯದ್ ವಿಕೃತಿ ಮೆರೆದವನು.
ಈ ಸೈಯದ್ ಶವಾಗಾರಕ್ಕೆ ಬರುವ ಹೆಣ್ಣುಮಕ್ಕಳ ಮೃತದೇಹದ ಬೆತ್ತಲೆ ಫೋಟೊಗಳನ್ನು ತನ್ನ ಮೊಬೈಲ್‌ನಲ್ಲಿ ಗೌಪ್ಯವಾಗಿ ಇಟ್ಟುಕೊಂಡಿರುವುದು ತಿಳಿದು ಬಂದಿದೆ. ಜತೆಗೆ ಆಸ್ಪತ್ರೆಯ ಕೆಲವು ಮಹಿಳಾ ಸಿಬ್ಬಂದಿಯನ್ನು ಶವಾಗಾರಕ್ಕೆ ಕರೆಸಿ ದೈಹಿಕವಾಗಿ ಬಳಸಿಕೊಂಡಿರುವುದರ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋವಿಡ್ ಆರಂಭದ ದಿನದಿಂದಲೂ ವಾರಿಯರ್ಸ್ ಎನ್ನುವ ಹಣೆಪಟ್ಟಿಯನ್ನು ಹೊತ್ತುಕೊಂಡಿದ್ದ. ಹೀಗಾಗಿ ತಾನು ಅಷ್ಟು ಕಷ್ಟಪಟ್ಟೆ, ಇಷ್ಟು ಕಡೆ ಹೋಗಿಬಂದೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಂಡು ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವು ಮಹಿಳಾ ಸಿಬ್ಬಂದಿಯೊಂದಿಗೆ ಸಿಂಪತಿ ಗಿಟ್ಟಿಸಿಕೊಂಡಿದ್ದನಂತೆ. ಹೆಣ್ಣುಮಕ್ಕಳ ಜತೆಗಿನ ಸಲುಗೆಯನ್ನು ಬಳಸಿ ತನ್ನ ಕಾಮತೃಷೆ ತೀರಿಸಲು ಆರಂಭಿಸಿದ್ದ ಎನ್ನಲಾಗಿದೆ. ಈತ ಆಸ್ಪತ್ರೆಯ ಕೆಲ ಹೆಣ್ಣುಮಕ್ಕಳಿಗೆ ಬ್ಲ್ಯಾಕ್‌ಮೇಲ್ ಮಾಡಿ ದೈಹಿಕ ಕಿರುಕುಳ ನೀಡುತ್ತಿದ್ದ ಎಂಬುದು ಆತನ ಮೊಬೈಲ್‌ನ ವಿಡಿಯೊ, ಆಡಿಯೊ ರೆಕಾರ್ಡಿಂಗ್ ಮೂಲಕ ಗೊತ್ತಾಗಿದೆ.
ಶವವನ್ನೇ ಕಾಮ ದೃಷ್ಟಿಯಿಂದ ನೋಡುತ್ತಿದ್ದ ಸೈಯದ್‌ನ ಮೋಸದ ಬಲೆಗೆ ಬಿದ್ದವರಲ್ಲಿ ಅತಿ ಹೆಚ್ಚು ವಿವಾಹಿತೆಯರೇ ಎನ್ನುವ ಮಾಹಿತಿಯೂ ಇದೆ. ಹಿಂದು ಸಂಘಟನೆಯ ಪ್ರಮುಖರು ಈ ವಿಷಯವನ್ನು ಜಿಲ್ಲಾಸ್ಪತ್ರೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯೂ ಕೂಡ ಈತ ಶವಾಗಾರದಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜತೆ ಸಿಕ್ಕಿಬಿದ್ದಿದ್ದರೂ ಇದನ್ನು ಆಸ್ಪತ್ರೆಯವರು ಮುಚ್ಚಿಹಾಕಿದ್ದರು ಎನ್ನಲಾಗಿದೆ. ಸೈಯದ್ ಜತೆ ಒಂದು ತಂಡವೇ ಇದೆಯಾ ಎಂಬ ಅನುಮಾನ ಇದೀಗ ಮೂಡಿದೆ. ಸದ್ಯ ವಿಕೃತಿ ಸೈಯದ್‌ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆದರೆ, ಶೋಷಣೆಗೆ ಒಳಪಟ್ಟ ಯುವತಿಯರು ಹಾಗೂ ಮಹಿಳೆಯರು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | Modi In Bengaluru | ಕಾಶಿ ಯಾತ್ರಾ ಸೌಲಭ್ಯ ಪಡೆದ ಮೊದಲ ರಾಜ್ಯ ಕರ್ನಾಟಕ; ಪಿಎಂ ಮೋದಿ ಟ್ವೀಟ್