Site icon Vistara News

Pulakeshinagar Election Results : ಪುಲಿಕೇಶಿನಗರದಲ್ಲಿ ಮತ್ತೆ ಮಿನುಗಿದ ಕಾಂಗ್ರೆಸ್​

Pulakeshinagar Election Results A C Srinivas Winner

#image_title

ಬೆಂಗಳೂರು: ಬಡವರು ಹೆಚ್ಚಿರುವ ಹಾಗೂ ಹಾಲಿ ಚುನಾವಣೆಯಲ್ಲಿ ಕೌತುಕು ಮೂಡಿಸಿದ್ದ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ (Pulakeshinagar Election Results) ಕಾಂಗ್ರೆಸ್​ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್​ನ ಎ. ಸಿ ಶ್ರೀನಿವಾಸ್​ ಅವರು 87,055 ಮತಗಳನ್ನು ಪಡೆದು ಬಿಎಸ್​ಪಿಯ ಅಖಂಡ ಶ್ರೀನಿವಾಸ ಮೂರ್ತಿ 76527 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್​​ನ ಬಿ ಪ್ರಸನ್ನಕುಮಾರ್ ವಿರುದ್ಧ ದಾಖಲೆಯ 81,626 ಮತಗಳ ಅಂತರದಿಂದ ಗೆದ್ದಿದ್ದರು. ಇದು ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಮಟ್ಟಿಗೆ ದಾಖಲೆಯ ಅಂತರದ ಗೆಲುವು.   

2008ರ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರವನ್ನು ವಿಂಗಡಿಸಿ ಪುಲಿಕೇಶಿ ನಗರ ಕ್ಷೇತ್ರ ರಚಿಸಲಾಯಿತು. ಇದು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದೆ. 2008ರಲ್ಲಿ ಪ್ರಸನ್ನ ಕುಮಾರ್ ಅವರು ಈ ಕ್ಷೇತ್ರದಲ್ಲ ಮೊದಲ ಬಾರಿಗೆ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಗೆಲುವು ಸಾಧಿಸಿದ್ದರು. 2013ರಲ್ಲಿ ಪ್ರಸನ್ನ ಕುಮಾರ್ ಅವರನ್ನು ಅಖಂಡ ಶ್ರೀನಿವಾಸ ಮೂರ್ತಿ ಸೋಲಿಸಿದ್ದರು. ಆದರೆ, ಜೆಡಿಸ್​ ವಿರುದ್ಧ ಅಡ್ಡ ಮತದಾನ ಮಾಡಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡರು.

2020ರ ಆಗಸ್ಟ್ 10ರಂದು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಅಂದು ನೂರಾರು ಜನ ಸ್ಥಳೀಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯ ಮೇಲೂ ಕೆಲವು ಕಿಡಿಗೇಡಿಗಳು ದಾಳಿ ಮಾಡಿದ್ದರು.

ಇದನ್ನೂ ಓದಿ : Mahalakshmi Layout Election Results : ಮಹಾಲಕ್ಷ್ಮೀ ಲೇಔಟ್​ನಲ್ಲಿ ಗೋಪಾಲಯ್ಯಗೆ ಭರ್ಜರಿ ವಿಜಯ

ಈ ಕ್ಷೇತ್ರದಲ್ಲಿ ಮುಸ್ಲಿಮರ ಮತವೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ಒಟ್ಟು 2,56,000 ಮತದಾರರು ಇದ್ದಾರೆ. 71,000 ಮುಸ್ಲಿಮರು, ಒಕ್ಕಲಿಗರು 25,000, ಎಸ್ಸಿ-ಎಸ್‌ಟಿ 45,000, ಬ್ರಾಹ್ಮಣ 24,000, ಒಬಿಸಿ 5,000, ತಿಗಳ 4,000, ಕುರುಬ 2,000, ಲಿಂಗಾಯತರು 2,000, ದೇವಾಂಗ 2,000, ಯಾದವ 1,000 ಹಾಗೂ ಇತರೇ ಮತದಾರರು 7,000 ಇದ್ದಾರೆ.

Exit mobile version