Site icon Vistara News

Pulse of Karnataka: ಸಮಸ್ತ ಕರ್ನಾಟಕ: ವಿಸ್ತಾರ-ಅಖಾಡ ಸಮೀಕ್ಷೆ: ಬಿಜೆಪಿ-ಕಾಂಗ್ರೆಸ್‌-ಜೆಡಿಎಸ್‌ ಬಲಾಬಲ ಇಲ್ಲಿದೆ; ನಾಯಕತ್ವ ಯಾರಿಗೆ?

pulse-of-karnataka-overall survey tally

#image_title

ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ..? ವಲಯವಾರು ಯಾವ ರಿಸಲ್ಟ್ ಬರಬಹುದು..? ಹೀಗೆ ಒಟ್ಟು 12 ಪ್ರಶ್ನೆ ಹಾಗೂ ಒಂದು ವಲಯವಾರು ಪ್ರಶ್ನೆಯನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ.

ಪಲ್ಸ್ ಆಫ್ ಕರ್ನಾಟಕ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರದಂತಹ ಅತಿದೊಡ್ಡ ಸರ್ವೇ. ರಾಜ್ಯದ ಮೂಲೆಮೂಲೆಯಲ್ಲಿ ನಮ್ಮ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿರೋ ಮಾಹಿತಿ ಇದು. ಕರುನಾಡಿನ ಜನರ ನಾಡಿಮಿಡಿತ ಅರಿಯಲು ಉದ್ಯಮಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಹಿಂದುಳಿದ ವರ್ಗದ ಜನ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗ, ಸಮುದಾಯವನ್ನು ಪ್ರತಿನಿಧಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಥಳೀಯ, ಜಿಲ್ಲಾವಾರು, ರಾಜ್ಯ ಮತ್ತು ಕೇಂದ್ರ ನಾಯಕರು ಹೀಗೆ ಎಲ್ಲಾ ವಲಯ, ವಿಚಾರ, ನಾಯಕರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಯಶ ಪಡೆಯಲಾಗಿದೆ.

ಈ ಸರ್ವೇಯಲ್ಲಿ ಕರ್ನಾಟಕವನ್ನ ಭೌಗೋಳಿಕವಾಗಿ ಆರು ಭಾಗಗಳಾಗಿ ಗುರುತಿಸಲಾಗಿದೆ. ಅದರಲ್ಲಿ ಹಳೆ ಮೈಸೂರು, ಮಧ್ಯ ಕರ್ನಾಟಕ, ಕರಾವಳಿ & ಮಲೆನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವಲಯಗಳಾಗಿ ಗುರುತಿಸಿ ಅದರಡಿ ಬರೋ ವಿಧಾನಸಭಾ ಕ್ಷೇತ್ರಗಳ ಮತದಾರರ ಪಲ್ಸ್ ಅರಿತು ಆ ಸರ್ವೇ ರಿರ್ಪೋಟ್​​ ಅನ್ನು ನಾವು ನಿಮ್ಮ ಮುಂದಿಟ್ಟಿದ್ದೇವೆ. ಇದೀಗ ಸಮಗ್ರ ಕರ್ನಾಟಕದ ಚಿತ್ರಣವನ್ನು ಇರಿಸಲಿದ್ದೇವೆ.


ಪ್ರಶ್ನೆ 1 – ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ನೀಡುತ್ತೀರಿ?

-ಒಟ್ಟಾರೆಯಾಗಿ ಹೇಳುವುದಾದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೆಕ್‌ ಟು ನೆಕ್‌ ಫೈಟ್‌ ಇರುವುದು ಕಂಡುಬರುತ್ತಿದೆ -ಎರಡು ಶೇಕಡಾದಷ್ಟು ಆಡಳಿತಾರೂಢ ಬಿಜೆಪಿಯೇ ಮುನ್ನಡೆ ಕಾಯ್ದುಕೊಂಡಿದೆ -ಸರ್ಕಾರದ ವಿರುದ್ಧ 40ಪರ್ಸೆಂಟ್‌ ಕಮಿಷನ್‌ ಆರೋಪ, ಕೊರೊನಾ ಸಮಯದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಪ್ರತಿಪಕ್ಷಗಳ ಆರೋಗಪಗಳ ನಂತರವೂ ಆಡಳಿತ ವಿರೋಧಿ ಅಲೆಯನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣದಲ್ಲಿಡುವಲ್ಲಿ ಬಿಜೆಪಿ ಸಫಲವಾಗಿದೆ ಎನ್ನಬಹುದು. 123 ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಜೆಡಿಎಸ್‌ ಕನಸು ನನಸಾಗುವುದು ಬಹಳ ಕಷ್ಟ ಎನ್ನುವಂತೆ ಕಾಣುತ್ತಿದೆ -ಆದರೆ ತಟಸ್ಥ ಮತದಾರರು ಸುಮಾರು 10 ಪರ್ಸೆಂಟ್‌ ಇರುವುದು ಮುಖ್ಯ. ಯಾವ ರಾಜಕೀಯ ಪಕ್ಷವು ಮುಂದಿನ 20-30 ದಿನ ಮತದಾರರ ಮನವನ್ನು ಗೆಲ್ಲುತ್ತದೆಯೋ ಅವರಿಗೆ ಈ ತಟಸ್ಥ ಮಗಳು ಲಭಿಸುತ್ತವೆ, ಇದರಿಂದ ಬಹುದೊಡ್ಡ ಬದಲಾವಣೆ ಫಲಿತಾಂಶದ ಮೇಲೆ ಆಗುತ್ತದೆ.

ಪ್ರಶ್ನೆ 2 – ನೀವು ಈ ಬಾರಿ ಮತ ಚಲಾಯಿಸಲು ಇವುಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ವಿಚಾರ ಯಾವುದು.?

-ಪಕ್ಷದ ಅಲೆಯ ಮೇಲೆ ಚುನಾವಣೆ ಗೆಲ್ಲಲು ಹೊರಟಿರುವ ಬಿಜೆಪಿಗೆ ಇದು ಬಹು ದೊಡ್ಡ ಎಚ್ಚರಿಕೆ -ನರೇಂದ್ರ ಮೋದಿ ಸರ್ಕಾರ ಹಾಗೂ ಇತ್ತ ಬೊಮ್ಮಾಯಿ ಸರ್ಕಾರದ ಡಬಲ್‌ ಇಂಜಿನ್‌ ಸರ್ಕಾರದ ಕೆಲಸ ನೋಡಿ ಮತ ನೀಡಿ ಎಂದು ಬಿಜೆಪಿ ಕೇಳುತ್ತಿದೆ -ಆದರೆ ಮತದಾರರು ಪಕ್ಷಕ್ಕಿಂತಲೂ ಬಹುದೊಡ್ಡ ಪ್ರಮಾಣದಲ್ಲಿ ಅಭ್ಯರ್ಥಿಗೆ ಪ್ರಾಮುಖ್ಯತೆ ನೀಡಿದ್ದಾರೆ -ಪಕ್ಷ ಯಾವುದಾದರೇನು? ದಿನನಿತ್ಯದ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವವರು ಅಭ್ಯರ್ಥಿಯೇ ಆದ್ಧರಿಂದ ಅದರ ಕುರಿತು ಹೆಚ್ಚು ಗಮನ ನೀಡಿದ್ದಾರೆ -ಗುಜರಾತ್‌ನಲ್ಲಿ ಬಹಳಷ್ಟು ಶಾಸಕರನ್ನು ದೋಸೆ ಮಗುಚಿದಂತೆ ಬಿಜೆಪಿ ಬದಲಾಯಿಸಿ ಟಿಕೆಟ್‌ ನೀಡಿತ್ತು, ಅಷ್ಟು ದೊಡ್ಡ ಪ್ರಯೋಗಕ್ಕೆ ಇಲ್ಲಿ ಅವಕಾಶ ಇರುವಂತೆ ಕಾಣುತ್ತಿಲ್ಲ

ಪ್ರಶ್ನೆ 3 – ಈ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದನ್ನು ಇವುಗಳಲ್ಲಿ ಯಾವುದರ ಆಧಾರದಲ್ಲಿ ನಿರ್ಧಾರ ಮಾಡುತ್ತೀರಿ?

-ಇಡೀ ದೇಶದಲ್ಲಿ, ವಿದೇಶಗಳಲ್ಲೂ ಸದ್ದು ಮಾಡಿದ ಹಿಜಾಬ್‌ ವಿವಾದ ಆರಂಭವಾಗಿದ್ದು ಕರ್ನಾಟಕದಿಂದ, ಹಲಾಲ್‌ ವಿಚಾರವೂ ಕರ್ನಾಟಕದಿಂದಲೇ ಆರಂಭವಾಯಿತು -ಬಹುಶಃ ಧರ್ಮ ಆಧರಿತ ರಾಜಕಾರಣವು ಸಮುದಾಯಗಳ ನಡುವೆ ಪ್ರತ್ಯೇಕತೆಯನ್ನು ಮೂಡಿಸುತ್ತದೆಯೇ ವಿನಃ ಜೀವನ ಸುಧಾರಿಸುವುದಿಲ್ಲ ಎಂದು ಮತದಾರರು ಭಾವಿಸಿರಬೇಕು -ಧರ್ಮಕ್ಕಿಂತಲೂ, ಜಾತಿಗಿಂತಲೂ ಸ್ಥಳೀಯ ನಾಯಕತ್ವಕ್ಕೇ ಹೆಚ್ಚು ಆಸಕ್ತಿ ತೋರಿದ್ದಾರೆ -ಯಾವ ಸ್ಥಳೀಯ ನಾಯಕತ್ವವು ಅಭಿವೃದ್ಧಿಯನ್ನು ಕೇಂದ್ರವಾಗಿಸಿಕೊಂಡು ಚುನಾವಣೆ ಸ್ಪರ್ಧಿಸುತ್ತದೆಯೋ ಅವರಿಗೆ ಜಯ ಸಿಗುತ್ತದೆ ಎನ್ನುವ ಸಂಕೇತಗಳನ್ನು ರಿಪೋರ್ಟ್‌ ನೀಡುತ್ತಿದೆ.

ಪ್ರಶ್ನೆ 4 – ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತು ನಿಮ್ಮ ಅಭಿಪ್ರಾಯ

-ರಾಜ್ಯ ಬಿಜೆಪಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂಬ ಅಂಶ ರಾಜ್ಯದ ಕೆಲವೆಡೆ 30 ಪರ್ಸೆಂಟ್‌ ದಾಟಿದ್ದರೂ ಒಟ್ಟಾರೆ ರಾಜ್ಯದಲ್ಲಿ ಕೇವಲ 17.2 ಪರ್ಸೆಂಟ್‌ ಇದೆ. -ಆದರೆ ಅತ್ಯುತ್ತಮ, ಉತ್ತಮ ಹಾಗೂ ಸಾಮಾನ್ಯವನ್ನು ಸೇರಿಸಿದರೆ ಮೂರನೇ ಎರಡರಷ್ಟು ಮತದಾರರು ಆಡಳಿತಾರೂಢ ಪಕ್ಷದ ಪರವಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ -ಮೂರೂವರೆ ವರ್ಷ ಆಡಳಿತದಲ್ಲಿದ್ದರು, ನಡುವೆ ಕೊರೊನಾದಂತಹ ಅಡ್ಡಿ ಎದುರಾಗಿದ್ದರೂ ಆಡಳತ ವಿರೋಧಿ ಅಲೆ ಅಷ್ಟಾಗಿ ಇಲ್ಲದಿರುವುದು ಬಿಜೆಪಿಗೆ ಧನಾತ್ಮಕ ಸಂದೇಶಗಳನ್ನು ನೀಡುತ್ತಿದೆ.

ಪ್ರಶ್ನೆ 5 – ಈ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರದ ಶಾಸಕರ ಕಾರ್ಯ ನಿರ್ವಹಣೆ ತೃಪ್ತಿ ನೀಡಿದೆಯೇ?

-ಪಕ್ಷಾತೀತವಾಗಿ ಕ್ಷೇತ್ರದ ಶಾಸಕರ ಕಾರ್ಯ ತೃಪ್ತಿ ತಂದಿರುವುದು ಕಾಣುತ್ತಿದ್ದು, ಈ ಬಾರಿ ಬಹುತೇಕ ಶಾಸಕರು ಮತ್ತೆ ಟಿಕೆಟ್‌ ಪಡೆಯುವ ಸಾಧ್ಯತೆಯನ್ನು ಸೂಚಿಸುತ್ತಿದೆ -ಮುಖ್ಯವಾಗಿ ಕೋವಿಡ್‌ ಕಾಲದಲ್ಲಿ ಎಲ್ಲ ಶಾಸಕರೂ ತಮ್ಮ ಕ್ಷೇತ್ರದ ಜನರಿಗೆ ಆಹಾರ, ಔಷಧ ಲಭಿಸುವಂತೆ ಶ್ರಮಿಸಿದ್ದು ಮತದಾರರು ಕಂಡಿದ್ದಾರೆ -ತೃಪ್ತಿ ತಂದಿಲ್ಲ ಎಂದು ಹೇಳಿದವರ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿರುವುದು, ಮುಂದಿನ ದಿನಗಳಲ್ಲಿ ತಮ್ಮ ವರ್ಚಸ್ಸನ್ನು ಸರಿಪಡಿಸಿಕೊಳ್ಳಲು ಆ ಶಾಸಕರಿಗೆ ಅವಕಾಶವನ್ನು ನೀಡಿದೆ ಎನ್ನಬಹುದು.

ಪ್ರಶ್ನೆ 6 – ಮುಂದಿನ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ?

-ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆಯುತ್ತಿದ್ದರೂ ಕಾಂಗ್ರೆಸ್‌ನ ಇಬ್ಬರು ನಾಯಕರೇ ಮೊದಲ ಎರಡು ಸ್ಥಾನವನ್ನು ಗಳಿಸಿದ್ದಾರೆ. -ಒಟ್ಟಾರೆ ನಾಯಕತ್ವದಲ್ಲಿ ಸಿದ್ದರಾಮಯ್ಯ ಮೊದಲನೆ ಸ್ಥಾನದಲ್ಲಿದ್ದಾರೆ, ಈ ಮೂಲಕ ಸಿಎಂ ಕುರ್ಚಿಯಿಂದ ಕೆಳಗಿಳಿದು ಐದು ವರ್ಷವಾದರೂ ರಾಜ್ಯದ ಪ್ರಮುಖ ನಾಯಕರಾಗಿ ಸ್ಥಾನವನ್ನು ಉಳಿಸಿಕೊಂಡಿರುವುದು ಗಮನಾರ್ಹ. -ಸಿಎಂ ಸ್ಥಾನದಲ್ಲಿರುವ ಬಸವರಾಜ ಬೊಮ್ಮಾಯಿ ಅವರು ಮೂರನೇ ಸ್ಥಾನ ಗಳಿಸಿದ್ದು, ಎಚ್‌.ಡಿ. ಕುಮಾರಸ್ವಾಮಿ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಪ್ರಶ್ನೆ 7- ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಕೇಂದ್ರದ ನಾಯಕ ಯಾರು?

-ಸರಿಸುಮಾರು 60 ಪರ್ಸೆಂಟರ್‌ ಮತದಾರರ ಮನ ಗೆಲ್ಲುವ ಮೂಲಕ ನರೇಂದ್ರ ಮೋದಿ ತಮ್ಮ ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದಾರೆ. -ಕೆಪಿಸಿಸಿ ಅಧ್ಯಕ್ಷರಾದ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಜನಪ್ರಿಯತೆ ಹೆಚ್ಚಿದೆಯಾದರೂ, ಮೋದಿಯವರನ್ನು ಎದುರಿಸಲು ರಾಹುಲ್‌ ಗಾಂಧಿಯೇ ಉತ್ತಮ ಸ್ಪರ್ಧಿ ಎಂದು ತೀರ್ಮಾನಿಸಿದಂತಿದೆ. -ಅರವಿಂದ ಕೇಜ್ರಿವಾಲ್‌ಗೆ ರಾಜ್ಯದ ವಿವಿಧೆಡೆ ಅಲ್ಪ ಪ್ರಮಾಣದ ಜನಪ್ರಿಯತೆ ಇರುವುದು ಕಾಣುತ್ತಿದೆ, ಆದರೆ ಆ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸಿಕೊಳ್ಳಲು ಯಾವುದೇ ಮೆಕ್ಯಾನಿಸಂ ಇದ್ದಂತೆ ಕಾಣುತ್ತಿಲ್ಲ.

ಪ್ರಶ್ನೆ 8 – ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಯಾವ ಮೈತ್ರಿಕೂಟ ನಿಮಗಿಷ್ಟ?

-ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಪೈಪೋಟಿ ಇಲ್ಲಿಯೂ ಮುಂದುವರಿದಿದೆ. -ಅತ್ಯಂತ ಅಲ್ಪ ಪ್ರಮಾಣದಲ್ಲಿ, ರಾಜ್ಯದ ಜನರು ಜೆಡಿಎಸ್‌ನೊಂದಿಗೆ ಮಂತ್ರಿಯನ್ನೇ ಇಷ್ಟ ಪಟ್ಟಿದ್ದಾರೆ. -ಬಿಜೆಪಿಯೊಂದಿಗೆ ಜೆಡಿಎಸ್‌ ಒಂದು ಬಾರಿ ಮೈತ್ರಿ ಸರ್ಕಾರ ನಡೆಸಿದ್ದು, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಹೆಸರು ಗಳಿಸಿತ್ತು -ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡು ಬಾರಿ ಮೈತ್ರಿ ಸರ್ಕಾರ ನಡೆಸಿದ್ದು, ಎರಡು ಬಾರಿಯೂ ಅನೇಕ ವಿವಾದಗಳು, ನಿರ್ಧಾರ ಕೈಗೊಳ್ಳುವಲ್ಲಿ ನಿಧಾನಗತಿಯಂತಹ ಘಟನೆಗಳ ನಂತರ ಪತನವಾಗಿದ್ದವು

ಪ್ರಶ್ನೆ 9 – ಬಿಜೆಪಿಯವರು ಮತಕ್ಕಾಗಿ ಇವುಗಳಲ್ಲಿ ಯಾವ ಅಂಶವನ್ನು ನೆಚ್ಚಿಕೊಂಡಿದ್ದಾರೆ?

-ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಆ ಪಕ್ಷವು ನೆಚ್ಚಿಕೊಂಡಿದೆ ಎನ್ನುವುದಕ್ಕೂ ಮತದಾರರು ಹೆಚ್ಚಿನ ಅಂಕ ನೀಡಿದ್ದಾರೆ, ಆದರೆ ಅದನ್ನೂ ಮೀರಿ ಮೋದಿಯನ್ನು ನೆಚ್ಚಿಕೊಂಡಿದ್ದಾರೆ ಎಂದು ಮತದಾರರು ತಿಳಿಸಿದ್ದಾರೆ. -ಸ್ಥಳೀಯ ನಾಯಕತ್ವವನ್ನು ಬಿಜೆಪಿ ಕಡೆಗಣಿಸಿದೆ ಎಂಬ ವಾದಕ್ಕೆ ಅನುಗುಣವಾಗಿ ಮತದಾರರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. -ಬಿಜೆಪಿಯು ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಹೋಗಲು ಸಾಕಷ್ಟು ಅವಕಾಶವನ್ನು ಮತದಾರರು ನೀಡಿದ್ದಾರೆ.

ಪ್ರಶ್ನೆ 10 – 40% ಕಮಿಷನ್ ಅಥವಾ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ತರುತ್ತಾ?

-ಆಡಳಿತಾರೂಢ ಬಿಜೆಪಿ ಅತ್ಯಂತ ಕಡೆಗಣಿಸಿದ ಹಾಗೂ ರಾಜ್ಯದ ಜನರ ಗಮನವನ್ನು ಅತಿ ಹೆಚ್ಚು ಸೆಳೆದ ವಿಚಾರ ಇದು -40 ಪರ್ಸೆಂಟ್‌ ಆರೋಪ ಸುಳ್ಳು ಎಂದು ಬಿಜೆಪಿ ಹೇಳುತ್ತದೆಯಾದರೂ ಅದು ಸುಳ್ಳು ಎಂದು ಸಾಬೀತುಪಡಿಸುವ ಪ್ರಯತ್ನವನ್ನು ಸಾಕಷ್ಟು ಮಾಡಿಲ್ಲ -ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಂತಹ ಪ್ರಕರಣಗಳು, ಕಾಂಗ್ರೆಸ್‌ ಆರೋಪಕ್ಕೆ ಪುಷ್ಠಿ ನೀಡುತ್ತವೆ -ಇದೀಗ ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷ ಪುತ್ರನ ಮೇಲೆ ಲೋಕಾಯುಕ್ತ ದಾಳಿಯೂ ನಡೆದಿರುವುದು, ನಮ್ಮ ಸರ್ವೇಯು ಈ ದಾಳಿಗೆ ಮುನ್ನ ನಡೆದಿತ್ತು. ಬಹುಶಃ ಈಗ ಸರ್ವೇ ಮಾಡಿದರೆ 40 ಪರ್ಸೆಂಟ್‌ ಕಮಿಷನ್‌ ಆರೋಪದ ಕುರಿತು ಮತದಾರರು ಮತ್ತಷ್ಟು ಆಕ್ರೋಶ ಹೊರಹಾಕುತ್ತಿದ್ದರು.

ಪ್ರಶ್ನೆ 11 – ಕಾಂಗ್ರೆಸ್ ಒಳಜಗಳ ಚುನಾವಣೆಯ ವೇಳೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ?

-ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವಿನ ಸಿಎಂ ಗಾದಿಗಾಗಿನ ಪೈಪೋಟಿಯು ಆ ಪಕ್ಷಕ್ಕೆ ನಷ್ಟ ಉಂಟು ಮಾಡುತ್ತದೆ ಎಂದು ಹೆಚ್ಚಿನ ಜನರು ಭಾವಿಸಿದ್ದಾರೆ. ಆದರೆ, ಪ್ರಭಾವ ಬೀರುವುದಿಲ್ಲ ಎನ್ನುವವರ ಪ್ರಮಾಣವೂ ತೀರಾ ಕಡಿಮೆಯೇನಿಲ್ಲ. -ನಮ್ಮ ಹಿಂದಿನ ಪ್ರಶ್ನೆಯಲ್ಲಿ ನೋಡಿದಂತೆ, ಕಾಂಗ್ರೆಸ್‌ನ ನಾಯಕತ್ವ ಪೈಪೋಟಿಯಿಂದಲೇ ರಾಜ್ಯದ ಇಬ್ಬರು ಪ್ರಬಲ ನಾಯಕರನ್ನು ಆ ಪಕ್ಷ ಸ್ಥಾಪಿಸಿದಂತಾಗಿದೆ -ಮತದಾರರಲ್ಲಿ ನಾಯಕತ್ವ ಸ್ಪರ್ಧೆಯು ಮತ್ತಷ್ಟು ಗೊಂದಲ ಮೂಡಿಸದಂತೆ ನೋಡಿಕೊಳ್ಳುವುದು ಆ ಪಕ್ಕಿರುವ ಗುರಿ.

ಪ್ರಶ್ನೆ 12 – ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳಿಂದ ಮತ ಸೆಳೆಯಲು ಸಾಧ್ಯವೇ?

-ಇದು, ಈಗಾಗಲೆ ಮೂರು ಉಚಿತ ಘೋಷಣೆಗಳನ್ನು ಮಾಡಿರುವ ಕಾಂಗ್ರೆಸ್‌ ಪಕ್ಷ ಆಲೋಚನೆ ಮಾಡಬೇಕಾದ ವಿಚಾರ -ಉಚಿತ ವಿದ್ಯುತ್‌, ಮಾಸಿಕ 2 ಸಾವಿರ ರೂ. ಹಾಗೂ 10 ಕೆ.ಜಿ. ಅಕ್ಕಿ ನೀಡುವಿಕೆಯು ಜನರ ಮನಸ್ಸಿನಲ್ಲಿ ಅಷ್ಟಾಗಿ ನಾಟಿಲ್ಲ ಎನ್ನುವುದನ್ನು ತೋರಿಸುತ್ತಿದೆ. -ಪರಿಣಾಮ ಬೀರುವುದಿಲ್ಲ ಹಾಗೂ ಅಲ್ಪ ಪರಿಣಾಮ ಎಂಬ ಅಂಶವೇ ಮೂರನೇ ಎರಡರಷ್ಟು ಭಾಗವಿದೆ. -ಕಾಂಗ್ರೆಸ್‌ನ ಉಚಿತ ಘೋಷಣೆಗಳಿಗೆ ಹೆದರಿ ಬಿಜೆಪಿ ಸರ್ಕಾರವೂ ಬಜೆಟ್‌ನಲ್ಲಿ, ಕೃಷಿ ಕಾರ್ಮಿಕ ಮಹಿಳೆಯರಿಗೆ 1 ಸಾವಿರ ರೂ. ಘೋಷಣೆ ಮಾಡಿದ್ದು, ಈ ಕುರಿತೂ ಆಲೋಚಿಸುವಂತೆ ಮಾಡುತ್ತಿದೆ ಈ ವರದಿ.

ಪಕ್ಷಗಳ ಬಲಾಬಲ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆಯಾದರೂ, ಈ ಸಮಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್‌ ಪಕ್ಷಕ್ಕೆ ಸ್ವಲ್ಪ ಮೇಲುಗೈ ಸಿಗಬಹುದು ಎನ್ನುವುದನ್ನು ರಿಪೋರ್ಟ್‌ ಹೇಳುತ್ತಿದೆ. ಆದರೆಯಾರಿಗೂ ಬಹುಮತ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಅಥವಾ ಬಿಜೆಪಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಎಂದು ಗೊಂದಲದಲ್ಲಿ 13 ಕ್ಷೇತ್ರಗಳಿದ್ದು, ಈ ಮತಗಳನ್ನು ಯಾವ ಪಕ್ಷ ಪಡೆದುಕೊಳ್ಳುತ್ತದೆ ಎನ್ನುವುದು ಗೆಲುವಿಗೆ ಹತ್ತಿರ ಕೊಂಡೊಯ್ಯುವ ವಿಚಾರವಾಗಿದೆ. ಜೆಡಿಎಸ್‌ 31 ಸ್ಥಾನ ಗಳಿಸಿದ್ದು, ಅತಂತ್ರ ನಿರ್ಮಾಣವಾದರೆ ಕಿಂಗ್‌ ಮೇಕರ್‌ ಆಗುವ ಸಾಧ್ಯತೆ ಮತ್ತೊಮ್ಮೆ ಎದುರಾಗಿದೆ.

Exit mobile version