Site icon Vistara News

Punganur violence : ಚಿತ್ತೂರು ಬಂದ್‌ಗೆ ಕರೆ ಕೊಟ್ಟ ಟಿಡಿಪಿ; ಭಕ್ತಾದಿಗಳಿಗಿಲ್ಲ ತಿರುಪತಿ ದರ್ಶನ

Punganur violence

ಕೋಲಾರ/ಚಿತ್ತೂರು: ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ದು (TDP president Chandrababu Naidu) ಪುಂಗನೂರಲ್ಲಿ (Punganur violence) ರ‍್ಯಾಲಿಗೆ ಪೊಲೀಸರು ತಡೆದಿದ್ದನ್ನು ಖಂಡಿಸಿ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ಚಿತ್ತೂರು ಬಂದ್‌ಗೆ ಶನಿವಾರ (ಆ.5) ಕರೆ ನೀಡಿದ್ದಾರೆ. ಕಾರ್ಯಕರ್ತರ ಪ್ರತಿಭಟನೆಯು ನಿನ್ನೆ ಹಿಂಸಾಚಾರಕ್ಕೆ ತಿರುಗಿತ್ತು. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ತೆಲುಗು ದೇಶಂ ಪಕ್ಷದಿಂದ ಚಿತ್ತೂರು ಬಂದ್‌ಗೆ (chittoor bandh) ಕರೆ ನೀಡಲಾಗಿದ್ದು, ಪೊಲೀಸರು ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್‌ ಜಾರಿ ಮಾಡಿದ್ದಾರೆ.

ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಪುಂಗನೂರು ಪಟ್ಟಣಕ್ಕೆ ಭೇಟಿಗೆ ಪೊಲೀಸರು ನಿನ್ನೆ ಶುಕ್ರವಾರ (ಆಗಸ್ಟ್‌ 4) ತಡೆದು ಅಡ್ಡಿಪಡಿಸಿದ್ದರು. ಇದು ಟಿಡಿಪಿ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿತ್ತು. ಪುಂಗನೂರಿಗೆ ನಾಯ್ಡು ಭೇಟಿ ನೀಡಲು ಅನುಮತಿ ನೀಡುವಂತೆ ಟಿಡಿಪಿ ಕಾರ್ಯಕರ್ತರು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಇತ್ತ ಟಿಡಿಪಿ ರ‍್ಯಾಲಿಗೆ ಅವಕಾಶವನ್ನು ನೀಡಬಾರದೆಂದು ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿದ್ದರು. ಇದೇ ವೇಳೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಚಂದ್ರಬಾಬು ನಾಯ್ದು ಭೇಟಿಗಾಗಿ ಟಿಡಿಪಿ ಕಾರ್ಯಕರ್ತರು ಹಾಕಿದ್ದ ಬ್ಯಾನರ್‌ಗಳನ್ನು ತೆಗೆಯಲು ಮುಂದಾದರು. ಉಭಯ ಪಕ್ಷಗಳ ಜಟಾಪಟಿಯ ಘರ್ಷಣೆಗೆ ಕಾರಣವಾಯಿತು. ಈ ವೇಳೆ ಟಿಡಿಪಿ ಹಾಗೂ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ನಡೆದಿತ್ತು.

ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದಕ್ಕೆ ಕಾರಣವಾಗಿ, ಬಳಿಕ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿದರು. ಪರಿಸ್ಥಿತಿ ಕೈ ಮೀರಿದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸರು ಪಕ್ಷಪಾತದಿಂದ ವರ್ತಿಸಿದ್ದಾರೆ ಎಂದು ಟಿಡಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಪೊಲೀಸರ ಈ ಪಕ್ಷಪಾತವನ್ನು ಖಂಡಿಸಿ ತೆಲುಗು ದೇಶಂ ಪಕ್ಷವು ಇಂದು (ಆಗಸ್ಟ್‌ 5) ಚಿತ್ತೂರು ಬಂದ್‌ಗೆ ಕರೆ ನೀಡಿದೆ.

ಇದನ್ನೂ ಓದಿ: Social Media Post : ಹುಬ್ಬಳ್ಳಿಯ ಹಿಂದು ವಿದ್ಯಾರ್ಥಿನಿಯರ ಅಶ್ಲೀಲ ಫೋಟೊ ಪ್ರಕರಣ; ಪೋಸ್ಟ್‌ ಡಿಲೀಟ್‌ ಮಾಡಿದ ಕಿಡಿಗೇಡಿ

ಚಿತ್ತೂರು ಜಿಲ್ಲೆಯ ಮದನಪಲ್ಲಿ, ಪುಂಗನೂರು, ವಿಕೋಟ ಸೇರಿದಂತೆ ಹಲವು ಕಡೆ ಬಂದ್‌ ಬಿಸಿ ತಟ್ಟಿದೆ. ಚಿತ್ತೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ನೆರೆ ಹೊರೆ ರಾಜ್ಯಗಳ ಗಡಿ ಭಾಗದಲ್ಲೂ ಪೊಲೀಸ್‌ ಭದ್ರತೆ ಹಾಕಲಾಗಿದೆ. ಹೊರ ರಾಜ್ಯಗಳಿಂದ ಚಿತ್ತೂರು ಮಾರ್ಗವಾಗಿ ತಿರುಪತಿಗೆ ಪ್ರಯಾಣಿಸುವ ಬಸ್ಸುಗಳ ಓಡಾಟ ಬಂದ್ ಆಗಿದೆ.

ಕಲ್ಲು ತೂರಾಟದಲ್ಲಿ ಗಾಯಗೊಂಡ ಪೊಲೀಸರು

ಚಿತ್ತೂರು ಬಂದ್ ವೇಳೆ ಪೊಲೀಸರು ಹಾಗೂ ತೆಲುಗು ದೇಶಂ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದಿದೆ. ಲಾಠಿ ಚಾರ್ಜ್ ಮೂಲಕ ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರತಿಭಟನೆಗಾರನನ್ನು ನಿಯಂತ್ರಿಸಲು ಪೊಲೀಸರು ಆಶ್ರು ವಾಯು ಪ್ರಯೋಗ ಮಾಡಿದ್ದಾರೆ. ಘಟನೆಯಲ್ಲಿ 14ಕ್ಕೂ ಹೆಚ್ಚು ಪೊಲೀಸರಿಗೆ ಗಂಭೀರವಾಗಿದ್ದು 50ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. ಚಿತ್ತೂರಿನ ಪುಂಗನೂರಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಕಿತ್ತೂರಿ ಎಸ್‌ಪಿ ರಿಶಬ್ ರೆಡ್ಡಿ ಚಿತ್ತೂರು ಜಿಲ್ಲೆಯಾದ್ಯಂತ 144 ಸೆಕ್ಷನ್‌ ಜಾರಿ ಮಾಡಿದ್ದಾರೆ.

ಚಿತ್ತೂರು ಬಂದ್‌ ಎಫೆಕ್ಟ್‌ ಭಕ್ತಾದಿಗಳಿಗಿಲ್ಲ ತಿರುಪತಿ ದರ್ಶನ

ಆಂಧ್ರಪ್ರದೇಶದ ಚಿತ್ತೂರಿನ ಪ್ರತಿಭಟನೆ ಬಿಸಿಯು ತಿರುಪತಿ ಭಕ್ತಾದಿಗಳಿಗೆ ತಟ್ಟಿದೆ. ಬೆಂಗಳೂರು ಚಿತ್ತೂರು ಮಾರ್ಗದ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರ ಪರಿಣಾಮ ಆಗಸ್ಟ್‌ 5 ರಂದು ತಿರುಪತಿಗೆ ಪ್ರಯಾಣ ಬೆಳೆಸುವವರಿಗೆ ಅಡಚಡಣೆ ಉಂಟಾಗಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version