Site icon Vistara News

Pushpak Launch: ‘ಪುಷ್ಪಕ್‌’ ರಾಕೆಟ್ ಹ್ಯಾಟ್ರಿಕ್‌ ಉಡಾವಣೆ ಯಶಸ್ವಿ-ಇಸ್ರೋದಿಂದ ಮಹತ್ವದ ಮೈಲಿಗಲ್ಲು

Pushpak Launch

India’s Reusable Launch Vehicle aces third landing

ಚಿತ್ರದುರ್ಗ: ಬಾಹ್ಯಾಕಾಶದಲ್ಲಿ ಹತ್ತಾರು ಮೈಲುಗಲ್ಲು ನೆಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈಗ ಮತ್ತೊಂದು ಸಾಧನೆ ಮಾಡಿದೆ. ಪುಷ್ಪಕ್‌ (Pushpak Launch) ಎಂದೇ ಖ್ಯಾತಿಯಾಗಿರುವ ಮರುಬಳಕೆ ಉಡಾವಣಾ ವಾಹನ (RLV LEX-03) ದ ಮೂರನೇ ಮತ್ತು ಕೊನೆಯ ಪ್ರಾಯೋಗಿಕ ಉಡಾವಣೆಯು ಯಶಸ್ವಿಯಾಗಿದೆ. ಚಿತ್ರದುರ್ಗದ ಏರೋನಟಕಲ್‌ ಟೆಸ್ಟ್‌ ರೇಂಜ್‌ (ATR)ಯಲ್ಲಿ ಉಡಾವಣೆ ಯಶಸ್ವಿಯಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನ ಹಟ್ಟಿಯ ರನ್‌ವೇನಲ್ಲಿ ಬೆಳಗ್ಗೆ 7.10ರ ಸುಮಾರಿಗೆ ರಾಕೆಟ್‌ ಉಡಾವಣೆ ಮಾಡಲಾಯಿತು ಎಂದು ಇಸ್ರೋ ಮಾಹಿತಿ ನೀಡಿದೆ. ಸುಮಾರು 4.5 ಕಿಲೋಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್‌, ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಇದರೊಂದಿಗೆ ಮರುಬಳಕೆ ಮಾಡಬಹುದಾದ ರಾಕೆಟ್‌ ತಂತ್ರಜ್ಞಾನದಲ್ಲಿ ಇಸ್ರೋ ಮಹತ್ವದ ಮುನ್ನಡೆ ಸಾಧಿಸಿದಂತಾಗಿದೆ. ಕಡಿಮೆ ವೆಚ್ಚದಲ್ಲಿ ಮರುಬಳಕೆ ರಾಕೆಟ್‌ಗಳ ಉಡಾವಣೆಯಿಂದ ಹೆಚ್ಚಿನ ಹಣ ಉಳಿತಾಯವಾಗಲಿದೆ ಎಂಬುದು ಇಸ್ರೋ ಉದ್ದೇಶವಾಗಿದೆ. ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಸಹಾಯದಿಂದ RLV LEX-03 ಉಡಾವಣಾ ವಾಹವನ್ನು ಮೇಲಕ್ಕೆ ಕೊಂಡೊಯ್ದು, 4.5 ಕಿಮೀ ಎತ್ತರದಿಂದ ಲ್ಯಾಂಡಿಗ್​ಗೆ ಬಿಟ್ಟು ಟೆಸ್ಟಿಂಗ್ ಮಾಡಲಾಯಿತು.

ಇಸ್ರೋ ಮುಖ್ಯಸ್ಥರಿಂದ ಅಭಿನಂದನೆ

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಇಸ್ರೋದ ಅಭೂತಪೂರ್ವ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಸಂಕೀರ್ಣ ಕಾರ್ಯಾಚರಣೆಗಳಲ್ಲಿ ಯಶಸ್ಸಿನ ಸರಣಿಯನ್ನು ಕಾಯ್ದುಕೊಳ್ಳುವಲ್ಲಿ ತಂಡದ ಪ್ರಯತ್ನಕ್ಕೆ ಅಭಿನಂದನೆ ಎಂದು ಹೇಳಿದ್ದಾರೆ.

ರಾಕೆಟ್‌ ವೈಶಿಷ್ಟ್ಯವೇನು?

ಪುಷ್ಪಕ್‌ ಗಗನನೌಕೆಯು ಮರುಬಳಕೆ ಮಾಡುವ ಬಾಹ್ಯಾಕಾಶ ವಾಹನವಾಗಿದ್ದು, ಇದನ್ನು ರಾಕೆಟ್‌ ರೀತಿ ಉಡಾವಣೆ ಮಾಡಲಾಗುತ್ತದೆ. ಉಡಾವಣೆ ಬಳಿಕ ಇದು ಮತ್ತೆ ಲ್ಯಾಂಡ್‌ ಆಗುತ್ತದೆ ಎಂಬುದು ವಿಶೇಷವಾಗಿದೆ. ಇದು ಪುನಾ ಲ್ಯಾಂಡ್‌ ಆಗಲು ಇಸ್ರೋ ರೋಬೊಟಕ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ದೇಶೀಯವಾಗಿಯೇ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ರಾಮಾಯಣದಿಂದ ಸ್ಫೂರ್ತಿಗೊಂಡು ಇದಕ್ಕೆ ಪುಷ್ಪಕ್‌ ಎಂದು ಹೆಸರಿಡಲಾಗಿದೆ. ಬಾಹ್ಯಾಕಾಶ ಅವಶೇಷಗಳ ಪ್ರಮಾಣ ತಪ್ಪಿಸಲು, ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ಪೂರೈಸಲು ಮರುಬಳಕೆ ರಾಕೆಟ್‌ಗಳು ಮಹತ್ವದ ಪಾತ್ರ ನಿರ್ವಹಿಸಲಿವ

ಇದನ್ನೂ ಓದಿ: Suraj Revanna Case:  ಸಲಿಂಗ ಕಾಮ ಆರೋಪ; ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಬಳಿಕ ಇಂದೇ ಅರೆಸ್ಟ್‌ ಆಗ್ತರಾ ಸೂರಜ್‌ ರೇವಣ್ಣ?

Exit mobile version