Site icon Vistara News

Raft sinking: ಭದ್ರಾ ಹಿನ್ನೀರಿಯಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರ ಸಾವು

Raft sinking

ಚಿಕ್ಕಮಗಳೂರು: ಭದ್ರಾ ನದಿಯ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರು ದುರ್ಮರಣ ಹೊಂದಿರುವ ಘಟನೆ (Raft sinking) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೂವರ ಶವಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ಮೂಲದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಮೃತ ದುರ್ದೈವಿಗಳು. ಸ್ಥಳಕ್ಕೆ ವನ್ಯಜೀವಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದು, ಮೂವರ ಶವಕ್ಕಾಗಿ ಪೊಲೀಸರ ಶೋಧ ಕಾರ್ಯ ನಡೆಯುತ್ತಿದೆ.

ಟಿಪ್ಪರ್ ಹರಿದು ಮಹಿಳೆ ದಾರುಣ ಸಾವು

ದೊಡ್ಡಬಳ್ಳಾಪುರ: ಟಿಪ್ಪರ್ ಹರಿದು ಮಹಿಳೆ ದಾರುಣ ಸಾವಿಗೀಡಾಗಿರುವ ಘಟನೆ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ವತ್ರೆ ಸಮೀಪದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ನಡೆದಿದೆ. ಹಿಂಬದಿಯಿಂದ ದ್ವಿಚಕ್ರ ವಾಹನದ ಮೇಲೆ‌ ಟಿಪ್ಪರ್‌ ಹರಿದಿದ್ದರಿಂದ ನಾಗಮಂಗಲ ಮೂಲದ ಅನಿತಾ (29) ಮೃತಪಟ್ಟಿದ್ದಾರೆ.

ಈಶಾ ಫೌಂಡೇಶನ್‌ಗೆ ಸ್ನೇಹಿತನ ಜತೆ ಹೋಗುತ್ತಿದ್ದ ಮಹಿಳೆ‌ಗೆ ತಲೆ ಮೇಲೆ ಟಿಪ್ಪರ್ ಚಕ್ರ ಹರಿದ ಪರಿಣಾಮ ಮೆದುಳು ಹೊರ ಬಂದು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಅಪಘಾತದ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಹಂಪಿ ಕನ್ನಡ ವಿವಿ ಬಳಿ ಕಾರು ಗುದ್ದಿ ಇಬ್ಬರು ಸವಾರರ ದುರ್ಮರಣ

ವಿಜಯನಗರ: ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟಿರುವುದು (Road Accident) ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಿ ಗೇಟ್ ಬಳಿ ಬುಧವಾರ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಆಂಜನೇಯ (53), ಹನುಮೇಶ್(18) ಮೃತ ದುರ್ದೈವಿಗಳು.

ಆಂಜನೇಯ (53), ಹನುಮೇಶ್(18) ಮೃತ ದುರ್ದೈವಿಗಳು. ಇವರು ಕಮಲಾಪುರದಿಂದ ಪಾಪಿನಾಯಕನಹಳ್ಳಿಯ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಎದುರಿಗೆ ಸ್ಪೀಡಾಗಿ ಬಂದ ಕಾರು ಗುದ್ದಿ ಮೃತಪಟ್ಟಿದ್ದಾರೆ. ಕಮಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಎಚ್‌ಸಿಯ ಡಿ ಗ್ರೂಪ್‌ ಮಹಿಳಾ ಉದ್ಯೋಗಿ ಆತ್ಮಹತ್ಯೆ

ಕಲಬುರಗಿ: ಸಿಎಚ್‌ಸಿಯ ಡಿ ಗ್ರೂಪ್‌ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ನಡೆದಿದೆ. ಕುಂಚಾವರಂನ ಸಮುದಾಯ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ಮಹಿಳಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Electric Shock: ಒಣ ಹಾಕಿದ್ದ ಟವೆಲ್‌ನಲ್ಲಿ ವಿದ್ಯುತ್; ತಂದೆ, ತಾಯಿ, ಮಗ ಸಾವು

ಡಿ ಗ್ರೂಪ್ ಮಹಿಳಾ ಸಿಬ್ಬಂದಿ ಮಾಲಾಶ್ರೀ 29 ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಸತಿ ಗೃಹದಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

Exit mobile version