ನವ ದೆಹಲಿ: ಕರ್ನಾಟಕ ರಾಜ್ಯ ರಾಜಕೀಯದಲ್ಲಿ (Karnataka Politics) ನಡೆಯುತ್ತಿರುವ ಬೆಳವಣಿಗೆ, ಕಾಂಗ್ರೆಸ್ ಆಂತರಿಕ ತಿಕ್ಕಾಟ ಹಾಗೂ ಲೋಕಸಭಾ ಚುನಾವಣೆಗೆ (Lok Sabha Election 2024) ರಣತಂತ್ರ ಹೆಣೆಯುವ ನಿಟ್ಟಿನಲ್ಲಿ ನವ ದೆಹಲಿಯಲ್ಲಿ ಬುಧವಾರ (ಆಗಸ್ಟ್ 2) ನಡೆದ ಹೈಕಮಾಂಡ್ ಜತೆಗಿನ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ (Karnataka Politics) ಸರ್ಕಾರದ ಬಗ್ಗೆ ಶಹಬ್ಬಾಸ್ಗಿರಿ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಆಡಿದ ಕೆಲವು ಮಾತುಗಳನ್ನು ಸರಿ (you are Right) ಎಂದು ಹೊಗಳಿದ್ದಾರೆ. ಜತೆಗೆ ಆರ್ಥಿಕ ಹೊರೆಯಾಗದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೀರಿ ಎಂದು ಬೆನ್ನು ತಟ್ಟಿದ್ದಾರೆ. ಈ ಮೂಲಕ ಕರ್ನಾಟಕವು ದೇಶಕ್ಕೇ ಒಂದು “Economic model” ಅನ್ನು ರೂಪಿಸಿ ಕೊಟ್ಟಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಮೆಚ್ಚುಗೆಯ ಅಭಿಪ್ರಾಯಗಳು ಇವು
- ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳು ಜಾರಿ ಆಗಿದೆ. ಕರ್ನಾಟಕದ ಮಧ್ಯಮ ವರ್ಗ ಮತ್ತು ಬಡವರಿಗೆ ಈ ಯೋಜನೆಗಳ ಲಾಭವು ಪ್ರತಿ ದಿನ ತಲುಪುತ್ತಿದೆ. ಈ ಗ್ಯಾರಂಟಿಗಳು ಪ್ರತಿಯೊಬ್ಬ ಫಲಾನುಭವಿಗೂ ಕಡ್ಡಾಯವಾಗಿ ತಲುಪುವಂತೆ ಮಾನವ ಮತ್ತು ತಂತ್ರಜ್ಞಾನ (men and machinery) ಸಹಯೋಗವನ್ನು ಪರಿಣಾಮಕಾರಿಯಾಗಿ ಬಳಸಿ.
- ಬೇರೆ ಬೇರೆ ರಾಜ್ಯ ಸರ್ಕಾರಗಳು ಕರ್ನಾಟಕದ ಕಡೆಗೆ ನೋಡುತ್ತಿವೆ. ಸಾಲದ ಹೊರೆ ಆಗದಂತೆ, ಇರುವ ಅವಕಾಶದಲ್ಲೇ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವ ಮೂಲಕ ಕರ್ನಾಟಕ ದೇಶಕ್ಕೆ ಒಂದು ಆರ್ಥಿಕ ಮಾದರಿ (economic model) ಅನ್ನು ರೂಪಿಸಿ ಕೊಟ್ಟಿದೆ.
- ಎರಡು ತಿಂಗಳುಗಳಲ್ಲೇ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರಿಗೆ (all walks of life) ಸ್ಪಂದಿಸಿರುವುದರ ಬಗ್ಗೆ ನಮಗೆ ವರದಿ ಬಂದಿದೆ.
- ಐದು ಗ್ಯಾರಂಟಿಗಳು ದೇಶದ ಆರ್ಥಿಕ ನೀತಿಯ ಗೇಮ್ ಚೇಂಜರ್ (Game changer) ಆಗುತ್ತವೆ.
- ಈ ಗ್ಯಾರಂಟಿ ಯೋಜನೆಗಳ ಯಶಸ್ಸು ಬರಲಿರುವ ಲೋಕಸಭಾ ಚುನಾವಣೆಗೆ ಭದ್ರ ಬುನಾದಿ ಆಗಬೇಕು.
- ಕರ್ನಾಟಕದಲ್ಲಿ 22ರಿಂದ 24 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುವ ಅವಕಾಶಗಳಿವೆ. ಈ ಬಗ್ಗೆ ಗಮನ ಹರಿಸಿ.
- ಕರ್ನಾಟಕದ ಮೂಲಕವೇ ಬಿಜೆಪಿಯ ಅವನತಿ ಶುರುವಾಗಿದೆ ಎನ್ನುವ ನಿಮ್ಮ ಹೇಳಿಕೆಯನ್ನು ಗಮನಿಸಿದೆ. Its true. you are Right.
- ಕರ್ನಾಟಕದಲ್ಲಿ ನಡೆದ I.N.D.I.A (ವಿರೋಧ ಪಕ್ಷಗಳ ನಾಯಕರ ಸಭೆ) ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಬಹಳ ದೊಡ್ಡ ಬದಲಾವಣೆಗೆ ಕರ್ನಾಟಕವು ದೊಡ್ಡ ಮಟ್ಟದಲ್ಲೇ ಕೊಡುಗೆ (contribute) ನೀಡುತ್ತಿದೆ.
- ನಿಮ್ಮ ಅವಧಿಯಲ್ಲಿ ಆಗಿರುವ ಐದು ಗ್ಯಾರಂಟಿಗಳ ಯಶಸ್ಸಿನ ಪ್ರತಿಫಲ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಬೇಕು.
- ಲೋಕಸಭಾ ಚುನಾವಣೆಗೆ ಉತ್ತಮ ಅಭ್ಯರ್ಥಿಗಳನ್ನು ಹೆಸರಿಸಿ. ಸೈದ್ಧಾಂತಿಕವಾಗಿ ಮತ್ತು ಆರ್ಥಿಕವಾಗಿ ಸರ್ಕಾರವನ್ನು ಅಚ್ಚುಕಟ್ಟಾಗಿ ಮುನ್ನಡೆಸಿ. ಇಡಿ ಪಕ್ಷ ನಿಮ್ಮ ಜತೆಗಿದೆ.
ಇದನ್ನೂ ಓದಿ: Karnataka Politics : ಲೋಕಸಭೆಯಲ್ಲಿ ಕಾಂಗ್ರೆಸ್ ಮನೆಯವರಿಗೆ ಮಣೆ! ಕುಟುಂಬ ರಾಜಕಾರಣ?
- ಐದು ಗ್ಯಾರಂಟಿಗಳ ಸ್ವರೂಪದಲ್ಲೇ ಮುಂದಿನ ಲೋಕಸಭಾ ಚುನಾವಣೆಗೆ ಇಡಿ ದೇಶದ ಜನರಿಗೆ ಅನುಕೂಲ ಆಗುವ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೊಡಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಇದಕ್ಕೆ ಪೂರಕವಾಗಿ ನಿಮ್ಮ ಅನುಭವ ಮತ್ತು ಸಲಹೆಗಳನ್ನು ನಮಗೆ ನೀಡಿ.